ಮುಂಗಾರು ಮುಗೀತು – ಚಂಡಮಾರುತವೂ ಹೋಯ್ತು! ಚಳಿ ಶುರು, ಕೆಲವೇ ಜಿಲ್ಲೆಗಳಲ್ಲಿ ಮಳೆ.

ಮುಂಗಾರು ಮುಗೀತು – ಚಂಡಮಾರುತವೂ ಹೋಯ್ತು! ಚಳಿ ಶುರು, ಕೆಲವೇ ಜಿಲ್ಲೆಗಳಲ್ಲಿ ಮಳೆ.

ಬೆಂಗಳೂರು: ಮುಂಗಾರು ಆಯ್ತು, ಚಂಡಮಾರುತ ಮುಗೀತು ಕರ್ನಾಟಕದಾದ್ಯಂತ ಬಿಸಿಲು ಆರಂಭವಾಗಿದೆ. ಜತೆಗೆ ತಂಪಾದ ಗಾಳಿ ಬೀಸುತ್ತಿದೆ. ಕೆಲವೇ ಕೆಲವು ಕಡೆಗಳಲ್ಲಿ ಹೊರತುಪಡಿಸಿ ಉಳಿದೆಲ್ಲಾ ಕಡೆ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೀದರ್, ಕಲಬುರಗಿ, ವಿಜಯಪುರದಲ್ಲಿ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ಘೋಷಿಸಲಾಗಿದೆ. ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಒಣಹವೆ ಇರಲಿದೆ.ಭಾಲ್ಕಿ, ಔರಾದ್ನಲ್ಲಿ ಹೆಚ್ಚು ಮಳೆಯಾಗಿದೆ. ಹುಮ್ನಾಬಾದ್, ಬೀದರ್, ಚಿಂಚೋಳಿ, ಕಮಲಾಪುರ, ತರೀಕೆರೆ, ಮೂಡುಬಿದಿರೆ, ಪೊನ್ನಂಪೇಟೆ, ಗೇರುಸೊಪ್ಪ, ಗುರುಮಿಟ್ಕಲ್, ಮಂಗಳೂರು, ಸೈದಾಪುರ, ಸೇಡಂ, ಉಪ್ಪಿನಂಗಡಿ, ವಿರಾಜಪೇಟೆಯಲ್ಲಿ ಮಳೆಯಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *