ಗಿಡಮರಗಳ ಪೌಷ್ಠಿಕಾಂಶ ಯುಕ್ತ ಬೆಳವಣಿಗೆಯಲ್ಲಿ ಸಗಣಿಯ ಪಾತ್ರ

ಗಿಡಮರಗಳ ಪೌಷ್ಠಿಕಾಂಶ ಯುಕ್ತ ಬೆಳವಣಿಗೆಯಲ್ಲಿ ಸಗಣಿಯ ಪಾತ್ರ

ಸಾಮಾನ್ಯವಾಗಿ ಎಲ್ಲರೂ ತಿಳಿದಿರುವಂತೆ ಕೃಷಿ ಚಟುವಟಿಕೆಗಳಲ್ಲಿ ಹಾಗೂ ಇನ್ನಿತರ ಕೃಷಿಯ ಪೂರಕ ಚಟುವಟಿಕೆಗಳು ಹಾಗೂ ಸಸ್ಯಗಳು ಹಾಗೂ ಗಿಡಮರಗಳ ಬೆಳವಣಿಗೆಯಲ್ಲಿ ಸಗಣಿಯ ಪಾತ್ರ ಬಹಳ ಮುಖ್ಯವಾಗಿ ಇರುತ್ತದೆ, ಇದು ಹಸು, ಎಮ್ಮೆ ಎತ್ತು ಇಂತ ಮುಂತಾದ ಗವ್ ಗಳಿಗೆ ಸಂಬಂಧಿಸಿದ ಪ್ರಾಣಿಯಿಂದ ಲಭ್ಯವಾಗುವ ತ್ಯಾಜ್ಯವನ್ನು ಸಗಣಿ ಎಂದು ಕರೆಯಲಾಗುತ್ತದೆ.

ಇದು ಅತ್ಯಂತ ಸಾಮಾನ್ಯವಾಗಿ ಪುರಾತನ ಪದ್ಧತಿಯಿಂದಲೂ ಗೊಬ್ಬರಕ್ಕಾಗಿ ಬಳಕೆ ಮಾಡಲಾಗುತ್ತದೆ, ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಯ ಕಿತ್ತಲಿನಲ್ಲಿ ಸಗಣಿಯನ್ನು ಗುಡ್ಡೆ ಮಾಡುವುದಕ್ಕಾಗಿ ತೊಪ್ಪೆ ಎಂದು ಮಾಡುತ್ತಿದ್ದರು, ಇದಕ್ಕೆ ಹುಲ್ಲು ಒಣಗಿದ ಸಸ್ಯಗಳು ಸೇರಿಸಿ ಗೊಬ್ಬರವಾಗಿ ಕೃಷಿಯ ಚಟುವಟಿಕೆಗಳಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದರು, ಹಿಂದಿನ ದಿನಗಳಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಕಡ್ಡಾಯವಾಗಿ ಹಸುಗಳನ್ನು ಸಾಕುತ್ತಿದ್ದರಿಂದ ಪ್ರತಿನಿತ್ಯವೂ ಇದರ ಸಗಣಿಯಿಂದ ಗೊಬ್ಬರ ಮಾಡಲು ಅನುಕೂಲವಾಗುತ್ತಿತ್ತು ಇದನ್ನು ಕೃಷಿ ಚಟುವಟಿಕೆಗಳಲ್ಲಿ ನೈಸರ್ಗಿಕ  ಗೊಬ್ಬರದಂತೆ ಬಳಸುತ್ತಿದ್ದರು.

ಇಂದಿನ ದಿನಗಳಲ್ಲಿ ಇಂತ ಪರಿಸರದಲ್ಲೂ ಇದನ್ನು ಕಾಣಲು ಸಾಧ್ಯವಾಗುವುದಿಲ್ಲ ಹಳ್ಳಿಗಳಲ್ಲಾದರೆ ಇದನ್ನು ನೋಡಬಹುದಾಗಿದೆ, ತಮ್ಮ ತಮ್ಮ ಮನೆಗಳಲ್ಲಿ ತಮ್ಮ ಹೊಲಗದ ಗಳಿಗೆ ಅಗತ್ಯವಾದ ಗೊಬ್ಬರವನ್ನು ತಯಾರು ಮಾಡಿಕೊಳ್ಳುತ್ತಿದ್ದರು  ಇಂದು ಪ್ರತಿಯೊಂದು ರಾಸಾಯನಿಕ ಗೊಬ್ಬರಗಳಿಗೆ ಮೊರೆ ಹೋಗುತ್ತಿದ್ದಾರೆ, ಇದು ಅತ್ಯಂತ ಸುಲಭವಾಗಿ ಸಿಗುವುದರಿಂದ ಎಲ್ಲರೂ ಹೆಚ್ ಹೆಚ್ಚು ಈ ಕಡೆ ಆಕರ್ಷಿತರಾಗಿದ್ದಾರೆ, ಎಷ್ಟೋ ಜನರಿಗೆ ಸಗಣಿ ನೈಸರ್ಗಿಕವಾಗಿ ಗೊಬ್ಬರಕ್ಕೆ ಬಳಕೆಯಾಗುತ್ತದೆ ಎಂಬ ವಿಷಯವೇ ಗೊತ್ತಿರುವುದಿಲ್ಲ,

ಸಾಮಾನ್ಯವಾಗಿ ಕೃಷಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಅವರಲ್ಲಿ ಇರುವ ಸ್ಥಳವಕಾಶದಲ್ಲಿ ಒಂದು ಎರಡು ಹಸುಗಳನ್ನಾದರೂ ಸಾಕಿದರೆ ಅವರಿಗೆ ಹಾಲು ಮೊಸರು ಮಜ್ಜಿಗೆ ತುಪ್ಪ ದೊರೆಯುವುದಲ್ಲದೆ ಸಗಣಿ ಕೂಡ ಬಳಕೆಗೆ ಬರುತ್ತದೆ ಇದನ್ನೇ ಹೊಲಗದ್ದೆಗಳಿಗೆ ಗೊಬ್ಬರವಾಗಿ ಬಳಸಬಹುದಾಗಿದೆ ಇದು ಅತ್ಯಂತ ನೈಸರ್ಗಿಕವಾಗಿ ಮಣ್ಣಿನಲ್ಲಿ ಬೆರೆಯಬಲ್ಲದ್ದು ಹಾಗೂ ಮಣ್ಣಿನ ಪೋಷಕಾಂಶಗಳು ಹೆಚ್ಚು ಮಾಡುವ ಶಕ್ತಿ ಇದರಲ್ಲಿದೆ, ಹಾಗಾಗಿಯೇ ಗೋಮಾತೆಯನ್ನು ಕಾಮಧೇನು ಎಂದೆಲ್ಲ ಕರೆಯಲು ಸಾಧ್ಯವಾಗುತ್ತದೆ ಅದರ ಪ್ರತಿಯೊಂದು ಭಾಗವು ಉಪಯೋಗಕ್ಕೆ ಬರುತ್ತದೆ, ಇದರ ಬಳಕೆಯಿಂದ ಮಣ್ಣಿನ ಖನಿಜಾಂಶಗಳು ಹೆಚ್ಚಾಗುತ್ತದೆ ಹಾಗೂ ಗಿಡಗಳು ಉತ್ತಮ ರೀತಿಯಲ್ಲಿ ಬೆಳವಣಿಗೆಗೆ ಪೋಷಕಾಂಶಗಳು ದೊರೆಯುತ್ತವೆ, ಇದರಿಂದ ಉತ್ತಮ ಗುಣಮಟ್ಟದ ಹಣ್ಣು ಹೂಗಳು ಕೂಡ ಪಡೆಯಬಹುದಾಗಿದೆ.

ಹೂವಿನ ಗಿಡಗಳಿಗೂ ಕೂಡ ಸಮರ್ಪಕವಾಗಿ ಬಳಸಬಹುದಾಗಿದೆ, ಮನೆಯ ಕೈತೋಟಗಳಲ್ಲಿ ಕೂಡ ಇದನ್ನು ಬಳಸಬಹುದಾಗಿದೆ ಅಷ್ಟೇ ಅಲ್ಲದೆ ಕುಂಡಗಳಲ್ಲಿ ಗಿಡಗಳು ಬೆಳೆಯುವವರು ಕೂಡ ಸ್ವಲ್ಪ ನೀರಿನಲ್ಲಿ ಕಲಸಿ ಸಗಣಿಯನ್ನು ಹಾಕಿದರೆ ಉತ್ತಮವಾಗಿ ಗಿಡಗಳು ಬರುತ್ತವೆ, ಇಂದು ಸಗಣಿ ಕೂಡಾ ಸಲೀಸಾಗಿ ಸಿಗುತ್ತಿಲ್ಲ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಸಂಪೂರ್ಣವಾಗಿ ಕೃಷಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಅವರಲ್ಲಿರುವ ಅಲ್ಪ ಸ್ವಲ್ಪ ಜಾಗದಲ್ಲೇ ಕೂಡ ಹಸುಗಳನ್ನು ಬೆಳೆಸಿ ಅದರ ಸಗಣಿಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ, ಇದರಿಂದ ಕೃಷಿ ಚಟುವಟಿಕೆಗೆ ಹೆಚ್ಚು ಉಪಯೋಗಕಾರಿ ಆಗುತ್ತದೆ ಹಾಗೂ ನೈಸರ್ಗಿಕವಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಲು ಅವಕಾಶ ದೊರೆಯುತ್ತದೆ.

Leave a Reply

Your email address will not be published. Required fields are marked *