ಬೆಂಗಳೂರು: ಸಿಮ್ ಖರೀದಿಗೆ ಸಂಬಂಧಿಸಿದಂತೆ ಇಲ್ಲೊಂದು ಭರ್ಜರಿ ಗುಡ್ನ್ಯೂಸ್ ಇದೆ. ಇನ್ಮುಂದೆ ನಿಮಗೆ ಸಿಮ್ ಬೇಕಾದರೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇನ್ಮುಂದೆ ಕೇವಲ 10 ನಿಮಿಷಗಳಲ್ಲಿ ಸಿಮ್ ಕಾರ್ಡ್ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಇತ್ತೀಚಿನ ವರ್ಷಗಳಲ್ಲಿ ಸಿಮ್ ಖರೀದಿ ಪ್ರಕ್ರಿಯೆಯಲ್ಲಿ ಕೆಲವೊಂದು ಪ್ರಮುಖ ಹಾಗೂ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಈ ರೀತಿ ಇರುವಾಗಲೇ ದಿನಸಿ ಮಾದರಿಯಲ್ಲಿ ಸಿಮ್ ಕಾರ್ಡ್ ನಿಮ್ಮ ಮನೆ ಬಾಗಿಲಿಗೆ ಬರುವ ಭರ್ಜರಿ ಗುಡ್ನ್ಯೂಸ್ ಇದೆ.

ಇಷ್ಟು ದಿನ ಪ್ರಮುಖ ಹಾಗೂ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿದ್ದ ಬ್ಲಿಂಕಿಟ್ / blinkit ಇದೀಗ ಸಿಮ್ ಕಾರ್ಡ್ ವಿಚಾರದಲ್ಲಿ ಜನರಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ಗ್ರಾಹಕರ ಮನೆ ಬಾಗಿಲಿಗೆ 10 ನಿಮಿಷದಲ್ಲಿ ಸಿಮ್ ಕಾರ್ಡ್ ತಲುಪಿಸುವುದಾಗಿ ಬ್ಲಿಂಕಿಟ್ ಸಹ ಸಂಸ್ಥಾಪಕ ಅಲ್ಬಿಂದರ್ ದಿಂಡ್ಸಾ (blinkit Albinder Dhindsa) ಅವರು ಹೇಳಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರು ಸೇರಿದಂತೆ ಪ್ರಮುಖ ಭಾಗಗಳಲ್ಲಿ ಸಿಮ್ ಪೂರೈಕೆ ಮಾಡುವ ಬಗ್ಗೆ ಮಾತನಾಡಿದ್ದಾರೆ.
ಬ್ಲಿಂಕಿಟ್ನಲ್ಲಿ 10 ನಿಮಿಷಗಳಲ್ಲಿ ಏರ್ಟೆಲ್ ಸಿಮ್ ಅನ್ನು ಪಡೆಯಿರಿ! ನೀವು ಇಷ್ಟು ದಿನಗಳ ಕಾಲ ಸಿಮ್ ಪಡೆಯುವುದಕ್ಕೆ ಅಂಗಡಿಗಳಿಗೆ ಇಲ್ಲವೇ ಆಯಾ ಸಿಮ್ ಕಾರ್ಡ್ ಸರ್ವೀಸ್ ಕೇಂದ್ರಗಳಿಗೆ ಭೇಟಿ ನೀಡಬೇಕಾಗಿತ್ತು. ಆದರೆ, ಇನ್ಮುಂದೆ ನಿಮ್ಮ ಮನೆಯ ಬಾಗಿಲಿಗೇ ಸಿಮ್ ಕಾರ್ಡ್ ಬರಲಿದೆ. ಗ್ರಾಹಕರು ಸಿಮ್ಗಳನ್ನು ಪಡೆದುಕೊಳ್ಳಬಹುದು. ಹೊಸ ಪ್ರಿಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್ ಸಂಪರ್ಕವನ್ನು (ಸಿಮ್ ಕಾರ್ಡ್) ಪಡೆಯಲು ಆಯ್ಕೆಗಳನ್ನು ನೀಡಲಿದ್ದೇವೆ ಎಂದು ಬ್ಲಿಂಕಿಟ್ ಸಹ ಸಂಸ್ಥಾಪಕ ಅಲ್ಬಿಂದರ್ ದಿಂಡ್ಸಾ ಅವರು ತಿಳಿಸಿದ್ದಾರೆ. ಸಿಮ್ ಕಾರ್ಡ್ ಮಾತ್ರವಲ್ಲ ಈಗಾಗಲೇ ನಿಮ್ಮ ಬಳಿ ಇರುವ ಸಿಮ್ ಕಾರ್ಡ್ ಅನ್ನು ಏರ್ಟೆಲ್ಗೆ ಬದಲಾಯಿಸಬಹುದು / ಸಿಮ್ ಪೋರ್ಟ್ ಮಾಡಿಕೊಳ್ಳುವುದಕ್ಕೂ ಅವಕಾಶ ಇರಲಿದೆ ಎಂದು ಬ್ಲಿಂಕಿಟ್ ಹೇಳಿದೆ. @airtelindia ಏರ್ಟೆಲ್ ಗ್ರಾಹಕರು ಮನೆಯಲ್ಲಿಯೇ ಆಧಾರ್ ಬಳಸಿ ಸರಳ ಸ್ವಯಂ ಪರಿಶೀಲನೆಯೊಂದಿಗೆ ಸಿಮ್ ಸಕ್ರಿಯಗೊಳಿಸಿಕೊಳ್ಳಬಹುದು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅನುವು ಮಾಡಿಕೊಡುವ ಹೊಸ ಸೇವೆಯನ್ನು ಪರಿಚಯಿಸುತ್ತಿದ್ದೇವೆ. ಅಂಗಡಿಗಳಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ ಹಾಗೂ ಡಾಕ್ಯುಮೆಂಟೇಷನ್ ಸಹ ಬೇಕಿಲ್ಲ ಎಂದು ಹೇಳಲಾಗಿದೆ.
ಈ ಪ್ರಮುಖ ನಗರಗಳಲ್ಲಿ ಸೇವೆ: ಇನ್ನು ಏರ್ಟೆಲ್ ಸಿಮ್ ಸೇವೆಯನ್ನು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮೊದಲ ಹಂತದಲ್ಲಿ ಪ್ರಾರಂಭಿಸುತ್ತಿರುವುದಾಗಿ ಬ್ಲಿಂಕಿಟ್ ಹೇಳಿದೆ. ಬೆಂಗಳೂರು, ದೆಹಲಿ ಎನ್ಸಿಆರ್, ಅಹಮದಾಬಾದ್, ಮುಂಬೈ, ಪುಣೆ ಹಾಗೂ ಲಕ್ನೋ ಸೇರಿದಂತೆ ಪ್ರಮುಖ ನಗರಗಳಲ್ಲಿ ಮೊದಲ ಹಂತದಲ್ಲಿ ಇದು ಪ್ರಾರಂಭವಾಗಲಿದೆ. ಇದಾದ ಮೇಲೆ ಇನ್ನುಳಿದ ನಗರಗಳಲ್ಲಿ ಪ್ರಾರಂಭಿಸುವುದಾಗಿ ಹೇಳಲಾಗಿದೆ.