ಬೆಂಗಳೂರು: ಬೆಂಗಳೂರಿನಲ್ಲಿ ಕಾರ್‌ಪೂಲಿಂಗ್‌ಗೆ ತನ್ನದೇ ಆದ ಮಾರ್ಗಸೂಚಿಯನ್ನು ರೂಪಿಸಬೇಕಿದ್ದ ರಾಜ್ಯ ಸಾರಿಗೆ ಇಲಾಖೆ ಈ ಸಂಬOಧ ಕೇಂದ್ರ ಸರ್ಕಾರದ ನೀತಿಗಾಗಿ ಕಾಯುತ್ತಿದ್ದು, ಇನ್ನೂ ಮಾರ್ಗಸೂಚಿಗಳನ್ನು ಸಿದ್ಧಪಡಿಸಿಲ್ಲ.
ಕಾರ್‌ಪೂಲಿಂಗ್ ಉದ್ದೇಶಕ್ಕಾಗಿ ಮೊಬೈಲ್ ಅಪ್ಲಿಕೇಶನ್‌ಗಳ ಬಳಕೆಯ ಮೇಲೆ ನಿಷೇಧ ಹೇರಲು ಸಾರಿಗೆ ಇಲಾಖೆ ಸಜ್ಜಾಗುತ್ತಿದೆಯಾದರೂ ಈ ಸಂಬAಧ ಕೇಂದ್ರ ಸರ್ಕಾರ ಯಾವುದೇ ಮಾರ್ಗಸೂಚಿ ಹೊರಡಿಸದೇ ಇರುವುದು ಗೊಂದಲಕ್ಕೆ ಕಾರಣವಾಗಿದೆ.
ಖಾಸಗಿ ಟ್ಯಾಕ್ಸಿ ಮತ್ತು ಆಟೋ ಚಾಲಕರಿಂದ ಪದೇ ಪದೇ ದೂರುಗಳು ಬರುತ್ತಿದ್ದು, ಕಾರ್‌ಪೂಲಿಂಗ್‌ನಲ್ಲಿ ತೊಡಗಿರುವ ವಾಣಿಜ್ಯೇತರ (ವೈಟ್‌ಬೋರ್ಡ್) ವಾಹನಗಳು ತಮ್ಮ ಆದಾಯವನ್ನು ಕಸಿದುಕೊಳ್ಳುತ್ತಿವೆ ಮತ್ತು ಇದು ‘ಅಕ್ರಮ’ವಾಗಿದೆ. ನಮ್ಮ ನ್ಯಾಯಯುತ ಆದಾಯವನ್ನು ಕಸಿದುಕೊಳ್ಳುತ್ತಿದೆ. ನಾವು ತೆರಿಗೆ, ವಿಮೆ ಹಾಗೂ ಇತರೆ ವೆಚ್ಚಗಳನ್ನು ಪಾವತಿಸುತ್ತಿದ್ದು, ಕಾರ್ ಪೂಲಂಗ್ ಮೇಲೆ ನಿಷೇಧ ಹೇರಬೇಕೆಂದು ಆಗ್ರಹಿಸಿದ್ದರು. ಅಲ್ಲದೆ, ಪ್ರತಿಭಟನೆಗಿಳಿದಿದ್ದರು. ಆದರೆ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವರು ಕಾರ್ ಪೂಲಿಂಗ್’ಗೆ ಬೆಂಬಲ ವ್ಯಕ್ತಪಡಿಸಿದ್ದರು.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ದೂರಾಗಿಸಲು ಕಾರ್‌ಪೂಲಿಂಗ್ ಅತ್ಯುತ್ತಮ ಪರಿಹಾರವಾಗಿದೆ. ಅಸ್ತಿತ್ವದಲ್ಲಿರುವ ಕಾನೂನಿಗೆ ಅಗತ್ಯ ತಿದ್ದುಪಡಿಗಳನ್ನು ಮಾಡುವ ಮೂಲಕ ಈ ಚಿಂತನೆಗಳಿಗೆ ಪ್ರೋತ್ಸಾಹ ನೀಡಬೇಕಿದೆ ಎಂದು ಹೇಳಿದ್ದರು.