ಸೂರ್ಯಕಾಂತಿ ಹೂ ಎನ್ನುವ ಕನ್ನಡದ ಮೊದಲ ಸಿನಿಮಾ ಆಸ್ಕರ್ ಅಂಗಳದಲ್ಲಿ ಅರಳಲು ಸಿದ್ದವಾಗಿದೆ. 2025ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ನಮ್ಮ ಕನ್ನಡದ ಸೂರ್ಯಕಾಂತಿ ಹೂ (ವೇರ್ ದ ಫಸ್ಟ್ ಒನ್ಸ್ ಟು ನೊ) ಎಂಬ ಕಿರುಚಿತ್ರ ನಾಮಿನೇಟ್ ಆಗಿದೆ. ಇದು ನೈಜ ದೃಶ್ಯಗಳ ಬಗ್ಗೆ ತೆಗೆದಿರುವಂತಹ ಚಿತ್ರ. ಇದನ್ನು ಫಿಲ್ಮ ಆಂಡ್ ಟೆಲಿವಿಷನ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾದ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ. ಈ ಸಿನಿಮಾವು ನೈಜ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಗೆ ನಾಮಿನೇಟ್ ಆಗಿದೆ.
ಈ ಚಿತ್ರವನ್ನು ಮೈಸೂರಿನ ಚಿದಾನಂದ ಎಸ್. ನಾಯ್ಕ್ ನಿರ್ದೇಶನ ಮಾಡಿದ್ದರೆ, ಸೂರಜ್ ಹಾಗು ಅಭಿಶೇಕ್ ಕದಮ್ ಅವರು ಧ್ವನಿ ನೀಡಿದ್ದಾರೆ. ತಾರಾಗಣದಲ್ಲಿ ಜಹಾಂಗೀರ್, ವಸುಧಾ, ವಿಶ್ವ ನಟಿಸಿದ್ದಾರೆ. ಕನ್ನಡದ ಜಾನಪದದ ಸೊಗಡು ಇರುವ ಈ ಚಿತ್ರದಲ್ಲಿ ಅಜ್ಜಿಯೊಬ್ಬಳು ಹಳ್ಳಿಯಲ್ಲಿನ ಹುಂಜವನ್ನು ಕದಿಯುತ್ತಾಳೆ. ಇದರಿಂದ ಆ ಹಳ್ಳಿಗೆ ಸೂರ್ಯೋದಯವೇ ಆಗುವುದಿಲ್ಲ, ಆಗ ಆ ಹಳ್ಳಿಯ ಜನ ಏನು ಮಾಡುತ್ತಾರೆ ಎಂಬುದೇ ಚಿತ್ರದ ಕಥಾವಸ್ತು.
ಇದೇ ಮೇ ತಿಂಗಳಲ್ಲಿ ಈ ಚಿತ್ರ, ಕಾನ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರು ಚಿತ್ರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿತ್ತು. ಬೆಂಗಳೂರು ಅಂತಾರಾಷ್ಟ್ರೀಯ ಶಾರ್ಟ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾರತೀಯ ಕಿರುಚಿತ್ರ ವಿಭಾಗದಲ್ಲಿ ಮೊದಲ ಪ್ರಶಸ್ತಿ ದೊರೆಕಿತ್ತು. ಇದರಿಂದಲೇ ಈಗ ಆಸ್ಕರ್ ಗೆ ಸ್ಪರ್ಧಿಸಲು ಅವಕಾಶ ಸಿಕ್ಕಿದೆ ಎಂದು ನಿರ್ದೇಶಕರಾದ ಚಿದಾನಂದ್ ಹೇಳಿದ್ದಾರೆ.
ಇನ್ನು ಸೂರ್ಯಕಾಂತಿ ಹೂ ಸಿನಿಮಾದ ನಿರ್ದೇಶಕರಾದ ಚಿದಾನಂದ್ ರವರು ಮಾತನಾಡಿ, ನನಗೆ ನೆನಪಿರುವಷ್ಟು ಸಮಯದಿಂದ ಈ ಕಥೆಯನ್ನು ಹೇಳಲು ಬಯಸಿದ್ದೆ. ಈ ಕಥೆಯನ್ನು ಹೇಳುವುದು ಮಾತ್ರವಲ್ಲದೇ ಇದನ್ನು ಮರುಸೃಷ್ಟಿಸುವುದು ನಮ್ಮ ಗುರಿಯಾಗಿತ್ತು. ಈ ಕಥೆ ಪ್ರಪಂಚದಾದ್ಯOತ ಇರುವ ಪ್ರೇಕ್ಷಕರನ್ನು ಪ್ರತಿಧ್ವನಿಸಲಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ನಮ್ಮ ಕನ್ನಡ ಭಾಷೆಯ ಚಿತ್ರಗಳು ಜಾಗತಿಕವಾಗಿ ಗುರುತಿಸುವಂತೆ ನಿರ್ಮಾಣವಾಗುತ್ತಿರುವುದು ಕನ್ನಡಿಗರಾದ ನಮಗೆ ಹೆಮ್ಮೆಯ ವಿಷಯ. ಕನ್ನಡದ ಕಂಪನ್ನು ಪ್ರಪಂಚದಾದ್ಯAತ ಪಸರಿಸುತ್ತಿರುವ ಇಂತವರಿಗೆ ನಮ್ಮ ಹ್ಯಾಟ್ಸ್ ಆಫ್ ಮತ್ತು ಆಲ್ ದ ಬೆಸ್ಟ್…