ಬೆಂಗಳೂರು : ರಾಹುಲ್ ಗಾಂಧಿ ಅವರು ವಿದೇಶದಲ್ಲಿ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ವಿಪಕ್ಷ ನಾಯಕ. ವಿಪಕ್ಷ ನಾಯಕ ಸಂವಿಧಾನದ ವ್ಯಕ್ತಿ ಆಗಿರ್ತಾರೆ. ವಿದೇಶದಲ್ಲಿ ಅವರ ಹೇಳಿಕೆ ಗಮನಿಸಿದ್ದೇವೆ. ರಿಸರ್ವೇಷನ್ ತೆಗೆಯೋ ಬಗ್ಗೆ ಹೇಳಿದ್ದಾರೆ. ಬಿಜೆಪಿ ಅಂತ್ಯೋದಯದ ಮೇಲೆ ನಂಬಿಕೆ ಇಟ್ಟಿದೆ. ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಅನ್ನೋ ಕಲ್ಪನೆ ಇದೆ. ಬಿಜೆಪಿ ದೇಶಾದ್ಯಂತ ರಿಸರ್ವೇಷನ್ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ಬಿಜೆಪಿ ಇರೋವರೆಗೂ ರಿಸರ್ವೇಷನ್ ತೆಗೆಯಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗುರು ಪ್ರಕಾಶ್ ಪಾಸ್ವಾನ್ ಹೇಳಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 1961ರಲ್ಲಿ ನೆಹರು ಅವರು ಪ್ರಧಾನಿ ಆಗಿದ್ದಾಗ ಎಲ್ಲಾ ರಾಜ್ಯದ ಸಿಎಂಗಳಿಗೆ ಪತ್ರ ಬರೆದಿದ್ರು. ರಿಸರ್ವೇಷನ್ ವಿರೋಧ ಮಾಡೋದಾಗಿ ಬರೆದಿದ್ರು. ಮಾಜಿ ಪ್ರಧಾನಿ ಬರೆದಿರೋ ಪತ್ರ ದಲಿತರಿಗೆ ಅನ್ಯಾಯ ಮಾಡೋದಾಗಿದೆ. ಪ್ರಧಾನಿ ಆದವರು, ಸಿಎಂಗಳಿಗೆ ಮೀಸಲಾತಿ ವಿರೋಧ ಮಾಡುವಂತೆ ಪತ್ರ ಬರೀತಾರೆ. ಬಳಿಕ ಬಂದ ಇಂದಿರಾ ಗಾಂಧಿ ಕೂಡ SC, ST ರಿಸರ್ವೇಷನ್ ಬಗ್ಗೆ ವಿರೋಧ ಮಾಡಿದ್ದಾರೆ. ನಿಮ್ಮ ಅಜ್ಜ, ಅಜ್ಜಿ, ಅಪ್ಪ ಎಲ್ಲರೂ ಮೀಸಲಾತಿ ವಿರೋಧ ಮಾಡಿದ್ದಾರೆ ಎಂದು ರಾಹುಲ್ ಗಾಂಧಿಗೆ ಹೇಳಿದ್ದಾರೆ.
ಮಂಡಲ್ ಕಮಿಟಿ ವರದಿ ಬಗ್ಗೆಯೂ ರಾಜೀವ್ ಗಾಂಧಿ ವಿರೋಧ ಮಾಡ್ತಾರೆ. ನೆಹರು, ಇಂದಿರಾ, ರಾಜೀವ್ ಈಗ ರಾಹುಲ್ ಗಾಂಧಿ ರಿಸರ್ವೇಷನ್ ವಿರೋಧ ಮಾಡ್ತಿದ್ದಾರೆ. ಇಂದು ಕಾಂಗ್ರೆಸ್ ಪಕ್ಷ, ಇಂಡಿ ಅಲಯನ್ಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ ಜೊತೆ ಸರ್ಕಾರ ಮಾಡಿರೋ ಎಷ್ಟು ಜನ ಸಿಎಂಗಳು ಇದನ್ನ ಒಪ್ಪುತ್ತಾರೆ. ಮಧ್ಯಪ್ರದೇಶ, ರಾಜಸ್ತಾನದಲ್ಲಿ ದಲಿತ ಮುಖ್ಯಮಂತ್ರಿ ಇದ್ದಾರೆ ಎಂದರು.
ನಾವು ಅರ್ಥ ಮಾಡಿಕೊಳ್ಳಬೇಕು. ಆದಿವಾಸಿ ಸಮುದಾಯದ ಮಹಿಳೆ ದೇಶದ ಮೊದಲ ಪ್ರಜೆ. ಅದನ್ನ ಮಾಡಿರೋದು ಬಿಜೆಪಿ ಪಕ್ಷದಿಂದ. ಸಿಎಂ, ಡಿಸಿಎಂ, ಪ್ರಮುಖರನ್ನ ನೇಮಕ ಮಾಡುವಾಗ ಕಾಂಗ್ರೆಸ್ ದಲಿತರನ್ನ ಕಡೆಗಣಿಸುತ್ತೆ. ಕರ್ನಾಟಕದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕರನ್ನಾಗಿ ದಲಿತರನ್ನ ಬಿಜೆಪಿ ನೇಮಿಸಿದೆ. ಕಾಂಗ್ರೆಸ್ ಪಕ್ಷ ಯಾವಾಗಲೂ ದಲಿತರನ್ನ, ಆದಿವಾಸಿಗಳನ್ನ ಕೇವಲ ಮತ ಬ್ಯಾಂಕ್ ಆಗಿ ಮಾತ್ರ ನೋಡುತ್ತದೆ ಎಂದು ಹೇಳಿದರು.
ಬಾಬು ಜಗಜೀವನ್ ರಾಮ್ ಅವರ ಬಗ್ಗೆ ನಮಗೆ ಗೌರವ ಇದೆ. ಅವರು ದೇಶದ ಪ್ರಧಾನಿ ಆಗಲು ಅರ್ಹರಿದ್ರು. ಆದ್ರೆ ಇಂದಿರಾಗಾಂಧಿ ಬಾಬು ಅವರು ಪ್ರಧಾನಿ ಆಗೋದನ್ನ ತಡೆದ್ರು. ಇದು ಪುಸ್ತಕದಲ್ಲಿ ದಾಖಲಾಗಿದೆ. ಬಾಬು ಜಗಜೀವನ್ ರಾಮ್ ಅವರಿಗೆ ಕಾಂಗ್ರೆಸ್ ಕಿರುಕುಳ ಕೊಟ್ಟು, ಪಕ್ಷದಿಂದ ಹೊರಹೋಗುವಂತೆ ಮಾಡಿತು ಎಂದು ತಿಳಿಸಿದರು.
ಕರ್ನಾಟಕದಲ್ಲಿ ಏನಾಗಿದೆ ನಾವು ನೋಡ್ತಿದ್ದೇವೆ. SCP-TSP ಹಣವನ್ನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ದಲಿತರ ಏಳಿಗೆಗೆ ಮೀಸಲಿಟ್ಟ ಹಣ, ಬೇರೆಯ ಉದ್ದೇಶಕ್ಕೆ ಒಳಸಿಕೊಳ್ಳಲಾಗ್ತಿದೆ. ಎಕರೆಗಟ್ಟಲೆ ಜಾಗವನ್ನ ಖರ್ಗೆ ಅವರ ಕುಟುಂಬದ ಸಿದ್ದಾರ್ಥ ಟ್ರಸ್ಟ್ ಪಡೆದುಕೊಂಡಿದೆ. ದಲಿತರ ಬಳಕೆಗೆ ಉಪಯೋಗವಾಗಬೇಕಿದ್ದ ಜಾಗ, ವಿಪಕ್ಷ ನಾಯಕನ ಕುಟುಂಬಕ್ಕೆ ಸೇರಿದೆ. ಕರ್ನಾಟಕ ಮಾತ್ರವಲ್ಲ, ದೆಹಲಿಯಲ್ಲಿ ಶೀಲಾ ದೀಕ್ಷಿತ್ ಸಿಎಂ ಆಗಿದ್ದಾಗ ಕಾಮನ್ ವೆಲ್ತ್ ವಿಲೇಜ್ಗೆ ಫ್ಲೈ ಓವರ್ ಮಾಡಲು ದಲಿತರ ಹಣ ಬಳಸಿಕೊಂಡಿತ್ತು. ಬಿಜೆಪಿ ಇಂದ ದಲಿತರಿಗೆ, ಹಿಂದುಳಿದವರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗ್ತಿದೆ. ಗಾಂಧಿ ಕುಟುಂಬ ಎಂದೂ ದಲಿತರ ಮೀಸಲಾತಿ ತೆಗೆಯಲು ಸಾಧ್ಯವಿಲ್ಲ. ಅದಕ್ಕೆ ನಾವು ಎಂದೂ ಆಸ್ಪದ ನೀಡೋದಿಲ್ಲ ಎಂದರು.
ನಮ್ಮ ಸಂವಿಧಾನವನ್ನ ಯಾರೂ ಮುಟ್ಟಲು ಸಾಧ್ಯವಿಲ್ಲ. ಎರಡು ಮುಖವಿರೋ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಮುಖವಾಡ ಕಳಚಿದೆ. ದಲಿತ ವಿರೋಧಿ ರಾಹುಲ್ ಗಾಂಧಿ ಅಸಲಿಯತ್ತು ಹೊರಬಿದ್ದಿದೆ. ನಾವು ಕನಕದಾಸರು, ಬಸವಣ್ಣ ಅವರ ತತ್ವ ಆದರ್ಶಗಳ ಮೇಲೆ ನಡೆಯುತ್ತೇವೆ ಎಂದು ಹೇಳಿದರು.