ಬೆಳಗಾವಿ : ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಬಹುದೇ? ಸರ್ಕಾರಗಳು ಅದನ್ನು ಮಾಡಿದ್ದರೆ ರೈತರು ಸಾವಿಗೆ ಶರಣಾಗುವುದು ಬಹಳಷ್ಟು ಮಟ್ಟಿಗೆ ನಿಲ್ಲುತಿತ್ತು. ಜಮಖಂಡಿ ತಾಲೂಕಿನ ಈರುಳ್ಳಿ ಬೆಳೆಗಾರ ಸಿದ್ದಪ್ಪ ಹೇಳುವುದನ್ನು ಕೇಳಿ. ಅವರು ತಾವು ಬೆಳೆದ ಈರುಳ್ಳಿಯನ್ನು ಗೂಡ್ಸ್ ಕ್ಯಾರಿಯರ್ನಲ್ಲಿ ಹೇರಿಕೊಂಡು ಬೆಳಗಾವಿಯ ಎಪಿಎಂಸಿ ಮಾರುಕಟ್ಟೆಗೆ ಬಂದಿದ್ದಾರೆ. ಆದರೆ ಈರುಳ್ಳಿಯ ಸಗಟು ಬೆಲೆ ಕೇಳಿ ಹೌಹಾರಿ ಹೋಗಿದ್ದಾರೆ.

ಪ್ರತಿ ಕ್ವಿಂಟಾಲ್ಗೆ ₹ 800 ರಿಂದ ₹1400 ರಂತೆ ಈರುಳ್ಳಿ ಖರೀದಿಸಲಾಗುತ್ತಿದೆ! ಕಳೆದ ವರ್ಷ ಇದೇ ಸಮಯದಲ್ಲಿ ಬೆಲೆ ₹ 2,500 ರಿಂದ 3,000 ವರೆಗೆ ದರ ಇತ್ತು ಎಂದು ಸಿದ್ದಪ್ಪ ಹೇಳುತ್ತಾರೆ. ಅವರು ತಂದಿರುವ ಈರುಳ್ಳು ಮೂಟೆಗಳನ್ನು ಪ್ರಸ್ತುತ ಬೆಲೆಗೆ ಮಾರಿದರೆ ವಾಹನದ ಟ್ರಾನ್ಸ್ಪೋರ್ಟೇಷನ್ ಖರ್ಚೂ ಹುಟ್ಟಲ್ಲ!