ತುಮಕೂರು :- ಪ್ರತಿ ವರ್ಷವೂ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಣೆ ಮಾಡುವ ಮೂಲಕ ಸಾಮಾಜಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಮಾನಸಿಕ ಆರೋಗ್ಯದ ಕುರಿತು ಶಿಕ್ಷಣ ನೀಡುವ ಗುರಿಯನ್ನು ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಮಾಡಿಕೊಂಡ ಬರಲಾಗುತ್ತಿದೆ. ಆರೋಗ್ಯಕರ ವಾತಾವರಣವನ್ನು ಸೃಷ್ಠಿಸುವ ನಿಟ್ಟಿನಲ್ಲಿ ಇಡೀ ವಿಶ್ವದಾದ್ಯಂತ ಈ ಕಾರ್ಯಕ್ರಮವನ್ನು ಆಚರಣೆ ನಡೆಯುತ್ತದೆ. ಆರೋಗ್ಯದ ಮಹತ್ವವನ್ನು ಸಾರುವ ಕಾರ್ಯಕ್ರಮ ಇದಾಗಿದೆ.
ಮಾನಸಿಕ ಆರೋಗ್ಯ ದಿನದ ಮಹತ್ವ:-
ಕೋವಿಡ್ ಮಹಾಮಾರಿಯಂತಹ ಅನೇಕ ಸಾಂಕ್ರಾಮಿಕ ರೋಗಗಳನ್ನು ಜಾಗತಿಕ ಬಿಕ್ಕಟ್ಟನ್ನು ಉಂಟು ಮಾಡಿದ್ದನ್ನ ನಾವು ಅಲ್ಲಗಳೆಯುವಂತಿಲ್ಲ. ಈ ಹೊತ್ತಿನಲ್ಲಿ ಮಾನಸಿಕ ಆರೋಗ್ಯವೂ ಅಷ್ಟೆ ಮುಖ್ಯ. ವ್ಯಕ್ತಿಯ ಮಾನಸಿಕ ಆರೋಗ್ಯವು ಆರೋಗ್ಯಕರ ಸಮಾಜ ಮತ್ತು ರಾಷ್ಟç ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ಸಮತೋಲನ ಹಾಗೂ ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೊಂದುವುದು ಕಡ್ಡಾಯ. ಮಾನಸಿಕ ಅನಾರೋಗ್ಯಕ್ಕೆ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಒಳಗಾಗುತ್ತಿದ್ದಾರೆ. ಈ ಮಾನಸಿಕ ಅನಾರೋಗ್ಯದ ವಿರುದ್ಧ ಹೋರಾಡಲು ಸಾಕಷ್ಟು ಸಂಸ್ಥೆಗಳು ಇಡೀ ವಿಶ್ವದಾದ್ಯಂತ ಕೆಲಸ ಮಾಡುತ್ತಿವೆ.
ಆಧುನಿಕ ಭರಾಟೆಯ ವೇಗದಲ್ಲಿ ಆರೋಗ್ಯದ ಮಹತ್ವಕ್ಕೆ ಅದರಲ್ಲೂ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ಕೊಡಲಾಗುತ್ತಿಲ್ಲ. ಹೀಗಾಗಿಯೇ ಇಡೀ ವಿಶ್ವದಾದ್ಯಂತ ನಾನಾ ಜಾಗೃತಿ ಅಭಿಯಾನಗಳನ್ನು ಏರ್ಪಡಿಸುವ ಮೂಲಕ ಮಾನಸಿಕ ಆರೋಗ್ಯದ ಸಮಸ್ಯೆಗಳ ವಿರುದ್ಧ ಜಾಗೃತಿ ಮೂಡಿಸಿ ಹೋರಾಟಮಾಡಲಾಗುತ್ತಿದೆ.
2024ನೇ ವರ್ಷದ ಆರೋಗ್ಯ ದಿನದ ಥೀಮ್
ಕಳೆದ 2023ನೇ ವರ್ಷದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು ” ಎಂಬ ಥೀಮ್‌ನೊಂದಿಗೆ ಜಾಗೃತಿ ಮೂಡಿಸಲು, ಜ್ಞಾನವನ್ನು ಸುಧಾರಿಸಲು, ಸಾರ್ವತ್ರಿಕ ಮಾನವ ಹಕ್ಕು ಎಂದು ಪ್ರತಿಯೊಬ್ಬರ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಕ್ರಮಗಳನ್ನು ಚಾಲನೆ ಮಾಡಲು ವಿಶ್ವಾದ್ಯಂತ ಎಲ್ಲರಿಗೂ ಜ್ಞಾಪನೆ ಕರೆ ನೀಡಲಾಗಿತ್ತು.
ಕಳೆದ ಆರು ವರ್ಷದ ವಿಶ್ವ ಮಾನಸಿಕ ಆರೋಗ್ಯ ದಿನದ ಥೀಮ್:-
ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಪ್ರತಿವರ್ಷವೂ ಒಂದೊOದು ಥೀಮ್ ನೊಂದಿಗೆ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಣೆ ಮಾಡಿಕೊಂಡು ಬರಲಾಗಿದೆ.
2022ರ ವಿಶ್ವ ಮಾನಸಿಕ ಆರೋಗ್ಯ ದಿನದ ಥೀಮ್: ಎಲ್ಲರಿಗೂ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಜಾಗತಿಕ ಆದ್ಯತೆಯನ್ನಾಗಿ ಮಾಡಿ
2021ರ ವಿಶ್ವ ಮಾನಸಿಕ ಆರೋಗ್ಯ ದಿನದ ಥೀಮ್: ಎಲ್ಲರಿಗೂ ಮಾನಸಿಕ ಆರೋಗ್ಯ: ಅದನ್ನು ನಿಜವಾಗಿಸಿಕೊಳ್ಳೋಣ
2020ರ ವಿಶ್ವ ಮಾನಸಿಕ ಆರೋಗ್ಯ ದಿನದ ಥೀಮ್: ಮಾನಸಿಕ ಆರೋಗ್ಯಕ್ಕಾಗಿ ಮೂವ್: ಮಾನಸಿಕ ಆರೋಗ್ಯದಲ್ಲಿ ಹೆಚ್ಚಿದ ಹೂಡಿಕೆ
20189 ವಿಶ್ವ ಮಾನಸಿಕ ಆರೋಗ್ಯ ದಿನದ ಥೀಮ್: ಆತ್ಮಹತ್ಯೆ ತಡೆಗಟ್ಟುವಿಕೆಯ ಮೇಲೆ ಕೇಂದ್ರೀಕರಿಸಿ
2018ವಿಶ್ವ ಮಾನಸಿಕ ಆರೋಗ್ಯ ದಿನದ ಥೀಮ್: ಬದಲಾಗುತ್ತಿರುವ ಜಗತ್ತಿನಲ್ಲಿ ಯುವಕರು ಮತ್ತು ಮಾನಸಿಕ ಆರೋಗ್ಯ
ವಿಶ್ವ ಮಾನಸಿಕ ಆರೋಗ್ಯ ದಿನದ ಹಿಸ್ಟರಿ
ಅಕ್ಟೋಬರ್ 10, 1992 ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಮೊದಲ ಬಾರಿಗೆ ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ ಆಯೋಜಿಸಿತ್ತು. ಇದು 150ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ತಿತ್ವವನ್ನು ಹೊಂದಿರುವ ಜಾಗತಿಕ ಮಾನಸಿಕ ಆರೋಗ್ಯ ಸಂಸ್ಥೆಯಾಗಿದೆ. ಅಂದಿನಿAದ ಈವರೆಗೆ ಪ್ರತಿವರ್ಷವೂ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.
ಯಾವುದೇ ನಿರ್ದಿಷ್ಟ ಥೀಮ್ ಇಟ್ಟುಕೊಳ್ಳದೆ 1994 ರವರೆಗೆ ವಿಶ್ವ ಮಾನಸಿಕ ದಿನವನ್ನು ಆಚರಿಸಲಾಯಿತು. ಮಾನಸಿಕ ಆರೋಗ್ಯದ ಸಮಸ್ಯೆಗಳ ಬಗ್ಗೆ ಜನರಿಗೆ ಶಿಕ್ಷಣದ ಅರಿವಿನ ಮೇಲೆ ಕೇಂದ್ರೀಕೃತವಾಗಿದೆ.
1994ರ ನಂತರ ಪ್ರತಿವರ್ಷವೂ Oದು ಥೀಮ್ ನೊಂದಿಗೆ” ಇಡೀ ವಿಶ್ವದಾದ್ಯಂತ ಮಾನಸಿಕ ಆರೋಗ್ಯ ಸೇವೆಗಳ ಹಾಗೂ ಗುಣಮಟ್ಟವನ್ನು ಸುಧಾರಿಸುವುದು”. ಮಾನಸಿಕ ಆರೋಗ್ಯ ಸಮಸ್ಯೆಗಳು, ಅದರ ತಡೆಗಟ್ಟುವಿಕೆ ಮತ್ತು ಮಾನಸಿಕ ಪೀಡಿತ ಜನರಿಗೆ ಉತ್ತಮ ಅವಕಾಶವನ್ನು ಸೃಷ್ಟಿಸುವ ಬೆಂಬಲಗಳ ಬಗ್ಗೆ ಜನರಿಗೆ ಉತ್ತೇಜನೆ ನೀಡಲು ಮತ್ತು ಶಿಕ್ಷಣ ನೀಡಲು ಮಾನಸಿಕ ಆರೋಗ್ಯಕ್ಕಾಗಿ ವಿಶ್ವ ಒಕ್ಕೂಟವು ನಿರ್ದಿಷ್ಟ ಥೀಮ್ ಅನ್ನು ಘೋಷಿಸಿದೆ.