ನಟಿ ರಮ್ಯಾ ‘ಕ್ವೀನ್ಸ್ ಪ್ರೀಮಿಯರ್ ಲೀಗ್’ನ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಸಿನಿಮಾ ನಟಿಯರಿಗಾಗಿ ಮಾಡಲಾಗುತ್ತಿರುವ ಕ್ರಿಕೆಟ್ ಟೂರ್ನಿಮೆಂಟ್ ಇದಾಗಿದೆ. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿ ಆಗಿದ್ದ ನಟಿ ರಮ್ಯಾ, ತಮ್ಮ ಶಾಲಾ-ಕಾಲೇಜು ದಿನಗಳಲ್ಲಿ ತಾವು ಆಡುತ್ತಿದ್ದ ಆಟಗಳನ್ನು ನೆನಪು ಮಾಡಿಕೊಂಡರು.

ಜೊತೆಗೆ, ‘ಚಿತ್ರರಂಗದಲ್ಲಿ ನನಗೆ ಒಗ್ಗಟ್ಟು ಕಾಣುತ್ತಿಲ್ಲ, ಇಂಥಹಾ ಇವೆಂಟ್ಗಳು ನಡೆದಾಗ ಪರಸ್ಪರ ಜೊತೆ ಆಗುತ್ತಾರೆ. ಪರಸ್ಪರರ ಪರಿಚಯ ಆಗುತ್ತದೆ, ಒಗ್ಗಟ್ಟು ಉಂಟಾಗುತ್ತದೆ’ ಎಂದಿದ್ದಾರೆ.