ಬೆಂಗಳೂರು : ನಮ್ಮ ಮೆಟ್ರೋ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತದೆ. ಹಾಗೆಯೇ ಇದೀಗ ಪ್ರೇಮಿಗಳಿಬ್ಬರು ಮೆಟ್ರೋ ನಿಲ್ದಾಣದಲ್ಲೇ ಅಸಭ್ಯ ವರ್ತನೆ ತೋರಿದ್ದು, ಈ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕ್ಯಾಕರಿಸಿ ಉಗಿಯುತ್ತಿದ್ದಾರೆ.

ಈಗಂತಲ್ಲ ಮೊದಲಿನಿಂದಲೂ ಬೆಂಗಳೂರಿನ ಹಲವು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಕೆಲ ಪ್ರೇಮಿಗಳು ಅಸಭ್ಯ ವರ್ತನೆ ತೋರಿದ್ದು, ಇಂತಹವರ ವಿರುದ್ಧ ಕ್ರಮ ಕೈಗೊಂಡಿರುವ ಉದಾಹರಣೆಗಳು ಇವೆ. ಆದರೂ ಇಂತಹದ್ದೇ ಒಂದು ಘಟನೆ ಮತ್ತೆ ಮರುಕಳಿಸಿದೆ.
ಬೆಂಗಳೂರು ಮೆಜೆಸ್ಟಿಕ್ನ ನಮ್ಮ ಮೆಟ್ರೋ ನಿಲ್ದಾಣದಲ್ಲೇ ಪ್ರೇಮಿಗಳು ರೊಮ್ಯಾನ್ಸ್ ಮಾಡಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಕ್ಕಪಕ್ಕದಲ್ಲಿ ಪ್ರಯಾಣಿಕರಿದ್ದರೂ ಸಹ ಮೈಮೇಲೆ ಹರಿವಿಲ್ಲದಂತೆ ಪ್ರೇಯಸಿಯ ಶರ್ಟ್ ಒಳಗಡೆ ಪ್ರಿಯಕರ ಕೈಹಾಕಿ ರೊಮ್ಯಾನ್ಸ್ ಮಾಡಿದ್ದು, ಈ ಪ್ರೇಮಿಗಳಿಬ್ಬರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ವಿಡಿಯೋ ಇದೀಹ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ, ಟೀಕೆಗಳಿಗೆ ಕಾರಣವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ಅಸಹ್ಯ ಕೃತ್ಯ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೆಲವರು ಈಗ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುತ್ತಿರುವ ನಡವಳಿಕೆಯನ್ನು ನೋಡುವುದು ಅತ್ಯಂತ ನಿರಾಶಾದಾಯಕ ಮತ್ತು ಕಳವಳಕಾರಿಯಾಗಿದೆ. ಯುವಕನೊಬ್ಬ ತನ್ನ ಗೆಳತಿಯೊಂದಿಗೆ ಅತ್ಯಂತ ಅನುಚಿತ ವರ್ತನೆಯಲ್ಲಿ ತೊಡಗಿದ್ದು, ಅಶ್ಲೀಲ ರೀತಿಯಲ್ಲಿ ಆಕೆಯ ಬಟ್ಟೆಯೊಳಗೆ ಕೈಗಳನ್ನು ಹಾಕಿದ್ದಾನೆ. ಇದು ಅಲ್ಲಿದ್ದ ಇತರ ಪ್ರಯಾಣಿಕರಿಗೂ ಮುಜುಗರ ಉಂಟು ಮಾಡಿದೆ.
ಸಾರ್ವಜನಿಕ ಸ್ಥಳಗಳು ಮಕ್ಕಳು, ಮಹಿಳೆಯರು, ಕುಟುಂಬಗಳು, ಹಿರಿಯರು ಎಲ್ಲರಿಗೂ ಮೀಸಲಾಗಿವೆ. ಇಂತಹ ಸ್ಥಳಗಳನ್ನು ಖಾಸಗಿ ವಲಯಗಳಾಗಿ ನೋಡುವುದು ಅಗೌರವ ಮತ್ತು ಅವಮಾನಕರವಾಗಿದೆ. ಸಾರ್ವಜನಿಕ ನಡವಳಿಕೆ ಅಥವಾ ತಮ್ಮ ಸುತ್ತಲಿನ ಜನರ ಬಗ್ಗೆ ಯಾವುದೇ ಗೌರವವಿಲ್ಲದ ಕೆಲ ವ್ಯಕ್ತಿಗಳಲ್ಲಿ ಹೆಚ್ಚುತ್ತಿರುವ ನಾಚಿಕೆ ಮತ್ತು ಸಭ್ಯತೆಯ ಕೊರತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇವರಿಬ್ಬರು ನೋಡುವುದಕ್ಕೆ ವಿದ್ಯಾರ್ಥಿಗಳ ರೀತಿಯಲ್ಲೇ ಇದ್ದಾರೆ. ಇವರಿಗೆ ಮನೆ ಹಾಗೂ ಶಾಲೆಗಳಲ್ಲಿ ಇದೆನಾ ಪಾಠ ಹೇಳಿಕೊಡುತ್ತಿರುವುದು ಅಂತಲೂ ಕೆಲ ನಟ್ಟಿಗರು ಕೆಂಡಕಾರಿದ್ದಾರೆ. ಜೊತೆಗೆ ಬೆಂಗಳೂರಿನ ಮೆಟ್ರೋ ನಿಲ್ದಾಣಗಳು ಮುಂದಿನ ಡೆಲ್ಲಿ ಮೆಟ್ರೋ ನಿಲ್ದಾಣಗಳಾಗಿ ಪರಿವರ್ತನೆಯಾದರೂ ಆಶ್ಚರ್ಯಪಡಬೇಕಿಲ್ಲ ಎಂಬ ಮಾತನ್ನು ಕೂಡ ಹೇಳಿದ್ದಾರೆ. ವಿಡಿಯೋವನ್ನು Karnataka Portfolio page ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.