ಕೆಟ್ಟ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದಾಗಿ, ಅನೇಕ ಜನರು ಹೃದಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಹೃದಯಾಘಾತಕ್ಕೆ 30 ದಿನಗಳ ಮೊದಲು ದೇಹದಲ್ಲಿ ಕೆಲವು ಆರಂಭಿಕ ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಅಪ್ಪಿತಪ್ಪಿಯೂ ನಿರ್ಲಕ್ಷಿಸಬಾರದು. ಅವುಗಳನ್ನು ಸಕಾಲದಲ್ಲಿ ಪತ್ತೆಹಚ್ಚುವ ಮೂಲಕ ಜೀವವನ್ನು ಉಳಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಹೃದಯಾಘಾತದ ಮೊದಲು ಯಾವ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ತಿಳಿದುಕೊಳ್ಳಿ.
ಇತ್ತೀಚಿನ ದಿನಗಳಲ್ಲಿ ನಮ್ಮ ಅನಾರೋಗ್ಯಕರ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತಿದೆ. ಇದರಿಂದ ನಮ್ಮ ಸುತ್ತುಮುತ್ತಲೂ ಹೃದಯಾಘಾತ ಪ್ರಕರಣಗಳ ಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದ್ದು ಇದು ಕಳವಳಕಾರಿ ವಿಷಯವಾಗಿದೆ. ಸಾಮಾನ್ಯವಾಗಿ ಹೃದಯಾಘಾತ ಸಮಸ್ಯೆ, ಮೊದಲೆಲ್ಲಾ ವಯಸ್ಸಾದವರಲ್ಲಿ ಕಂಡುಬರುತ್ತಿದ್ದವು. ಕೆಲವರಲ್ಲಿ ಮಾತ್ರ ಸಣ್ಣ ವಯಸ್ಸಿನಲ್ಲಿ ಹೃದಯ ಸಂಬಂಧಿತ ಕಾಯಿಲೆಗಳಿಂದ ಪ್ರಾಣ ಬಿಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ, ಇದು ಬದಲಾಗಿದೆ. ಯುವಜನತೆ ಮತ್ತು ಮಕ್ಕಳು ಸಹ ಹೃದಯಾಘಾತದಿಂದ ಸಾಯುತ್ತಿದ್ದಾರೆ. ಇದನ್ನು ತಡೆಯಲು ನಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು ಜೊತೆಗೆ ಇದರ ರೋಗಲಕ್ಷಣಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಏಕೆಂದರೆ ಹೃದಯಾಘಾತ ಸಂಭವಿಸುವ ಕೆಲವು ತಿಂಗಳುಗಳ ಮೊದಲು ನಮ್ಮ ದೇಹದಲ್ಲಿ ಆರಂಭಿಕ ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅವುಗಳನ್ನು ಸಕಾಲದಲ್ಲಿ ಪತ್ತೆಹಚ್ಚುವ ಮೂಲಕ ಜೀವವನ್ನು ಉಳಿಸಿಕೊಳ್ಳಬಹುದು. ಹಾಗಾದರೆ ತಜ್ಞರ ಪ್ರಕಾರ ಹೃದಯಾಘಾತಕ್ಕೆ 30 ದಿನಗಳ ಮೊದಲು ನಿಮ್ಮ ದೇಹದಲ್ಲಿ ಯಾವ ರೀತಿಯ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಹೃದಯಾಘಾತದ ಮೊದಲು ಕಂಡುಬರುವ ಆರಂಭಿಕ ಲಕ್ಷಣಗಳು ಯಾವವು?
ಎದೆ, ಭುಜ, ದವಡೆಯಲ್ಲಿ ನೋವು:
ಹೃದಯಾಘಾತ ಸಂಭವಿಸುವ ಮೊದಲು, ವ್ಯಕ್ತಿಗೆ ಎದೆ ನೋವು ಕಂಡುಬರಬಹುದು. ಜೊತೆಗೆ ಎದೆಯ ಸುತ್ತಲೂ ಒತ್ತಡ ಮತ್ತು ಭಾರ ಹೊತ್ತ ಅನುಭವ ಆಗಬಹುದು. ಇನ್ನು ಕೆಲವರಲ್ಲಿ ಕೈ, ಭುಜ ಮತ್ತು ದವಡೆಯಲ್ಲಿ ನೋವು ಇರಬಹುದು. ನಿಮಗೆ ಎದೆ, ಭುಜ ಮತ್ತು ದವಡೆಯಲ್ಲಿ ನೋವು ಇದ್ದರೆ, ಈ ಚಿಹ್ನೆಯನ್ನು ನಿರ್ಲಕ್ಷಿಸಬಾರದು. ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಬಹಳ ಒಳ್ಳೆಯದು.
ಆಯಾಸ- ದೌರ್ಬಲ್ಯ:
ಹೃದಯಾಘಾತದ ಮೊದಲು, ದೇಹವು ದಣಿದಿರುತ್ತದೆ. ಯಾವುದೇ ರೀತಿಯ ಶ್ರಮವಿರದ ಕೆಲಸ ಮಾಡದಿದ್ದರೂ ದೇಹ ದಣಿವಾಗಿ, ಬೇಗ ಆಯಾಸವಾಗುವಂತೆ ಭಾಸವಾಗಬಹುದು. ಪದೇ ಪದೇ ಈ ರೀತಿ ಆಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಬದಲಾಗಿ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಬಹಳ ಒಳ್ಳೆಯದು.
ತಲೆತಿರುಗುವಿಕೆ- ಸೆಳೆತ:
ಹೃದಯಾಘಾತಕ್ಕೆ 30 ದಿನಗಳ ಮೊದಲು ವ್ಯಕ್ತಿಗೆ ತಲೆ ಪದೇ ಪದೇ ತಿರುಗುತ್ತಿದೆ ಎಂದು ಭಾಸವಾಗುತ್ತದೆ. ಕೆಲವೊಮ್ಮೆ, ವ್ಯಕ್ತಿ ಮೂರ್ಛೆ ಹೋಗಬಹುದು. ಈ ಸಮಯದಲ್ಲಿ, ಉಸಿರಾಟದ ತೊಂದರೆ, ತಲೆನೋವು, ರಕ್ತದ ಹರಿವು ಕಡಿಮೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ತಕ್ಷಣ ವೈದ್ಯರ ಬಳಿಗೆ ಹೋಗಬೇಕು.
ಉಸಿರಾಟದ ತೊಂದರೆ:
ಹೃದಯಾಘಾತ ಸಂಭವಿಸುವ ಮೊದಲು, ವ್ಯಕ್ತಿಯು ಉಸಿರಾಡುವಾಗ ತೊಂದರೆ ಅನುಭವಿಸುತ್ತಾನೆ. ತುಂಬಾ ದಣಿದಿದ್ದರೆ ಅಥವಾ ಸಣ್ಣ ಕೆಲಸ ಮಾಡಿದರೂ ಉಸಿರಾಟ ತೀವ್ರವಾಗಲು ಪ್ರಾರಂಭಿಸಿದರೆ, ಅದು ಹೃದಯಾಘಾತದ ಸಂಕೇತವಾಗಿರಬಹುದು. ನಿಮ್ಮ ದೇಹದಲ್ಲಿ ಇದೇ ರೀತಿಯ ರೋಗಲಕ್ಷಣಗಳನ್ನು ನೀವು ಗಮನಿಸಿದಲ್ಲಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ಚಿಕಿತ್ಸೆ ಪಡೆಯಿರಿ. ಅವರು ಸೂಚಿಸಿದ ಔಷಧಿಗಳನ್ನು ತಪ್ಪದೆ ಬಳಸಿ. ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.