ಈ ಮೂರು ರಾಶಿಯವರು ಮಾನಸಿಕ ಒತ್ತಡ. ಆಹಾರದಲ್ಲಿ ವ್ಯತ್ಯಾಸ..!

ದೀಪಾವಳಿ ದಿನದಂದು ಈ ರಾಶಿಗೆ ಹಣದಿಂದ ಹಬ್ಬ.

ದಿನಾಂಕ : 25.10.2024

ವಾರ: ಶುಕ್ರವಾರ

ನಕ್ಷತ್ರ : ಪುಷ್ಯ

ತಿಥಿ : ಅಷ್ಟಮಿ

ಇಂದಿನ ವಿಶೇಷ : ಭೃಗು ನವಮಿ

ಅದೃಷ್ಟ ಸಂಖ್ಯೆ : 2

ಇಂದಿನ ನಿಮ್ಮ ಭವಿಷ್ಯ ವಾಣಿ

ಮೇಷ: ಆಸ್ತಿ ವಿಚಾರದ ಮಾತುಕತೆ. ದುಡುಕಿ ಮಾತನಾಡಬೇಡಿ. ಕೋಪಕ್ಕೆ ಒಳಗಾಗಬೇಡಿ. ಶಿಕ್ಷಕರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ.

ವೃಷಭ: ವ್ಯರ್ಥ ಕಾಲಹರಣ ಮಾಡುವುದು ಸಲ್ಲದು. ವೈದ್ಯರಿಗೆ ಹೆಚ್ಚು ಒತ್ತಡ ಉಂಟಾಗುವುದು. ಮಗಳಿಗೆ ಜ್ವರದ ಸಮಸ್ಯೆ ಕಾಡಬಹುದು.

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಗೌರವ ಲಭ್ಯ. ಮಕ್ಕಳಿಂದ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚುವುದು. ಮಿತ್ರರಿಂದ ಪ್ರವಾಸಕ್ಕೆ ಮಾರ್ಗದರ್ಶನ.

ಕಟಕ: ವಿವಾಹಾಕಾಂಕ್ಷಿಗಳಿಗೆ ಶುಭದಾಯಕ ದಿನ. ಹೂಡಿಕೆಗೆ ಇಂದು ಸುಸಮಯ. ತೀರ್ಥಯಾತ್ರೆಯ ಬಗ್ಗೆ ಯೋಜನೆ ರೂಪಿಸುವಿರಿ.

ಸಿಂಹ: ಸಹೋದರರಿಂದ ನಿವೇಶನ ಖರೀದಿಗೆ ಸಹಕಾರ. ಆರ್ಥಿಕ ಒಪ್ಪಂದಗಳಲ್ಲಿ ಎಚ್ಚರವಹಿಸಿ. ಸ್ನೇಹಿತರ ಮಧ್ಯೆ ಕಲಹವಾದೀತು.

ಕನ್ಯಾ: ಒಳಾಂಗಣ ವ್ಯಾಪಾರದಲ್ಲಿ ಮೋಸವಾಗುವ ಸಾಧ್ಯತೆ. ಸಂಬAಧಿಸದ ವಿಷಯಗಳ ಬಗ್ಗೆ ಆಸಕ್ತಿ ಬೇಡ. ಬಂಧುಮಿತ್ರರ ಆಗಮನ.

ತುಲಾ: ರಾಜಕೀಯದವರಿಗೆ ಮಾನಸಿಕ ಒತ್ತಡ. ಆಹಾರದಲ್ಲಿ ವ್ಯತ್ಯಾಸವಾಗಿ ಅನಾರೋಗ್ಯ. ಕಾನೂನು ಕ್ಷೇತ್ರದಲ್ಲಿರುವವರಿಗೆ ಗೌರವ.

ವೃಶ್ಚಿಕ: ಹೂಡಿಕೆಯಲ್ಲಿ ಲಾಭವಾಗುವುದು. ನೆರೆಹೊರೆ ಯವರಿಂದ ಸಹಾಯ. ಕೌಟುಂಬಿಕ ಸಮಸ್ಯೆಗಳು ಸೌಹಾರ್ದವಾಗಿ ಸರಿಹೋಗಲಿವೆ.

ಧನಸ್ಸು: ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಿ. ಪ್ರಯಾಣದಲ್ಲಿ ಅಪರಿಚಿತರಿಂದ ಸಹಾಯ. ಕೆಟ್ಟ ಆಲೋಚನೆಗಳು ಒತ್ತಿ ಬರುವವು.

ಮಕರ: ಕೆಲಸ ಕಾರ್ಯಗಳಲ್ಲಿ ಶತ್ರುಗಳಿಂದ ತೊಂದರೆ. ಉನ್ನತ ವ್ಯಾಸಂಗದ ವಿದ್ಯಾರ್ಥಿಗಳು ಖಿನ್ನತೆಗೆ ಜಾರುವ ಸಾಧ್ಯತೆ ತಪ್ಪಿಸಿಕೊಳ್ಳಿ. ಕುಂಭ: ಹೊಸ ಜನರ ಭೇಟಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ಕೃಷಿಕರ ಆದಾಯ ಹೆಚ್ಚಳ. ಗಡಿಯಾರದ ಅಂಗಡಿ ಮಾಲೀಕರಿಗೆ ಲಾಭ.

ಮೀನ: ವೈಯಕ್ತಿಕ ವಿಚಾರದಲ್ಲಿ ದುಡುಕದೆ ನಿರ್ಣಯ ತೆಗೆದುಕೊಳ್ಳಿ. ಬಂಧುಗಳಿAದ ತೊಂದರೆಯಾದೀತು. ಧರ್ಮ ಕಾರ್ಯದಲ್ಲಿ ಆಸಕ್ತಿ.

Leave a Reply

Your email address will not be published. Required fields are marked *