ಮಾಗಡಿ: ಪಟ್ಟಣದ ಮುಖ್ಯರಸ್ತೆ ನಿವಾಸಿ ಆರ್ಯವೈಶ್ಯ ಮಂಡಳಿ ಖಜಾಂಚಿ, ಎಸ್,ವೇಣುಗೋಪಾಲ್ ಶೆಟ್ಟಿ ಅವರ ಮನೆಯ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಚಿನ್ನಾಭರಣ, ನಗನಾಣ್ಯ ದೋಚಿ ಪರಾರಿಯಾಗಿರುವ ಘಟನೆ ಭಾನುವಾರ ಸಂಜೆ 7 ರಿಂದ 9 ಗಂಟೆಯ ಒಳಗೆ ನಡೆದಿದೆ. 4 ಕೆ.ಜಿ.ಚಿನ್ನ, ರೂ, 5ಲಕ್ಷ ನಗದು ದೋಚಿದ್ದಾರೆ.
ಭಾನುವಾರ ಚನ್ನಪಟ್ಟಣದಲ್ಲಿ ಜಿಲ್ಲಾ ಮಟ್ಟದ ಆರ್ಯವೈಶ್ಯರ ಸಮಾವೇಶದಲ್ಲಿ ಭಾಗವಹಿಸಲು ಮಾಗಡಿಯಿಂಸ ಸರ್ಕಾರಿ ಬಸ್ ಬಾಡಿಗೆ ಮಾಡಿಕೊಂಡು ಆರ್ಯವೈಶ್ಯ ಸಂಘದ ಪದಾಧಿಕಾರಿಗಳೊಂದಿಗೆ ಎಸ್.ವೇಣುಗೋಪಾಲ್ ಕುಟುಂಬದವರು ಮನಗೆ ಬೀಗ ಹಾಕಿಕೊಂಡು ತೆರಳಿದ್ದರು. ಅಲ್ಲಿ ಸಮಾವೇಶ ಮುಗಿದ ಕೂಡಲೆ ಟಿ.ನರಸಿಪುರ ಇತರೆಡೆಯ ದೇವಾಲಯಗಳಿಗೆ ತೆರಳಿದ್ದರು. ರಾತ್ರಿ ಮನೆಗೆ ಬಂದಾಗ ಬಾಗಿಲು ಮುರಿದು ಕಳ್ಳತನ ಆಗಿರುವುದು ತಿಳಿಯಿತು. ಕೂಡಲೆ ಮಾಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಅಡಿಸನಲ್ ಎಸ್‌ಪಿ ರಾಮಚಂದ್ರಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಜಿ.ವೈ.ಗಿರಿರಾಜ್, ಪಿಎಸ್‌ಐ ಬಸವರಾಜು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ಕಳ್ಳತನವಾಗಿರುವ ಮನೆಯಲ್ಲಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ, ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಎಸ್.ಜಿ.ಬಾಬು, ಟಿಎಪಿಸಿಎಂಎಸ್ ನಿರ್ದೇಶಕ ಮಂಜುನಾಥ್ ಕಳ್ಳತನ ನಡೆದ ಮನೆಗೆ ಭೇಟಿ ನೀಡಿ ವರ್ತಕರಿಗೆ ಧೈರ್ಯ ತುಂಬಿದರು.
ಆತOಕ: ಪಟ್ಟಣದ ಮುಖ್ಯರಸ್ತೆಯಲ್ಲಿ ನೆಲೆಸಿರುವ ಆರ್ಯವೈಶ್ಯ ಮಂಡಳಿಯ ವರ್ತಕರಲ್ಲಿ ಸಂಘದ ಖಜಾಂಚಿ ಎಸ್.ವೇಣುಗೋಪಾಲ್ ಮನೆಯ ಬಾಗಿಲು ಮುರಿದು ಚಿನ್ನಾಭರಣ, ನಗನಾಣ್ಯ ದೋಚಿರುವ ಸುದ್ದಿ ತಿಳಿದ ಕೂಡಲೆ ವರ್ತಕರೆಲ್ಲರೂ ಅವರಮನೆಗೆ ಭೇಟಿ ನೀಡಿ ಆತಂಕ ವ್ಯಕ್ತಪಡಿಸಿದರು. ಹಲವು ವರ್ಷಗಳ ಹಿಂದೆ ಕೆರೆಬೀದಿಯಲ್ಲಿ ವಾಸವಾಗಿದ್ದ ವರ್ತಕರ ಅವರ ಪತ್ನಿಯವರಿಂದ ರೇಷ್ಮೆ ಸೀರೆ ಖರೀದಿಸುವ ನೆಪದಲ್ಲಿ ವರ್ತಕರ ಪತ್ನಿಯನ್ನು ಬರ್ಭರವಾಗಿ ಹತ್ಯೆ ಮಾಡಲಾಗಿತ್ತು. ವಿನಾಯಕ ಸ್ಟೋರ್ ಮಾಲೀಕರ ಪತ್ನಿಯನ್ನು ನೀರು ಕೇಳುವ ನೆಪದಲ್ಲಿ ಕಲ್ಯಾಬಾಗಿಲು ಬಳಿಯ ಮನೆಯಲ್ಲಿ ಭಯಂಕರವಾಗಿ ಕೊಲೆ ಮಾಡಲಾಗಿತ್ತು. ಚಿನ್ನಾಬೆಳ್ಳಿ ವರ್ತಕರೊಬ್ಬರ ಮನೆಯಿಂದ ಚಿನ್ನಾಬೆಳ್ಳಿ ಕಳ್ಳತನವಾಗಿತ್ತು. ವರ್ತಕರಲ್ಲಿ ಈಗ ಸಂಘದ ಖಜಾಂಚಿ ಎಸ್.ವೇಣುಗೋಪಾಲ್ ಮನೆಯಲ್ಲಿ ಕಳ್ಳತನ ನಡೆದಿರುವುದು ಚಿಂತೆಗೀಡು ಮಾಡಿದೆ ಎಂದು ಹೆಸರು ಹೇಳಲು ಇಚ್ಚಿಸದ ವರ್ತಕರೊಬ್ಬರು ತಿಳಿಸಿದ್ದಾರೆ.