ಈ ಕಾರಣದಿಂದ ಬೆಂಗಳೂರು ಸಂಚಾರ ನಿಧಾನವಾಗುತ್ತಿದೆ!

ಈ ಕಾರಣದಿಂದ ಬೆಂಗಳೂರು ಸಂಚಾರ ನಿಧಾನವಾಗುತ್ತಿದೆ!

ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತಷ್ಟು ವಿಸ್ತರಣೆಯಾಗುತ್ತಿದೆ. ಕೈಗಾರಿಕೆ, ಸಾರಿಗೆ, ಮೂಲಸೌಕರ್ಯ, ಜನಸಂಖ್ಯೆ ವಿಚಾರದಲ್ಲೂ ಅಭಿವೃದ್ಧಿಯಾಗುತ್ತಿದೆ. ಇದರಿಂದಾಗಿ ನಿತ್ಯ ವಿವಿಧ ಸಮಸ್ಯೆಗಳು ಹೆಚ್ಚುತ್ತಿರುವುದು ಗೊತ್ತೆ ಇದೆ. ಇದೀಗ ಈ ಕೆಲವು ಕಾರಣಗಳಿಂದಾಗಿ ರಾಜಧಾನಿಯ ಸಂಚಾರ ನಿಧಾನಗತಿಯಾಗಿದೆ. ಮೊದಲಿನಂತೆ ಜನರು ಆರಾಮದಾಯಕವಾಗಿ ಸಂಚರಿಸುತ್ತಿಲ್ಲ. ಸ್ವಂತ ವಾಹನ ಇದ್ದರೂ ಸಹಿತ ಸರಾಗವಾಗಿ ಸಂಚರಿಸಲು ಆಗದ ಸ್ಥಿತಿ ಬೆಂಗಳೂರಿನಲ್ಲಿದೆ. ಅದರಲ್ಲೂ ಪ್ರಮುಖ ಜಂಕ್ಷನ್ಗಳಲ್ಲಿ ಸಂಚಾರ ಸ್ಥಿತಿಗತಿ ಅಧೋಗತಿ ತಲುಪಿದೆ.

ಬೆಂಗಳೂರು ನಿಧಾನವಾಗುತ್ತಿದೆ! ಎಂದರೆ ತಪ್ಪಾಗಲಾರದು. ರಸ್ತೆ ತಡೆ, ನಿಮಿಷಗಳ ಜೋರು ಮಳೆ ಮತ್ತು ಬೆಂಗಳೂರು ನಮ್ಮ ಮೆಟ್ರೋ ಕಾಮಗಾರಿ ಕೆಲಸಗಳು ಸೇರಿದಂತೆ ವಿವಿಧ ಕಾರಣಗಳಿಂದ ಬೆಂಗಳೂರು ಸಂಚಾರ ನಿಧಾನವಾಗಿದೆ. ಜನರು ಸಂಚಾರ ದಟ್ಟಣೆಯಲ್ಲಿಯೇ ಹೆಚ್ಚಿನ ಸಮಯ ಕಳೆಯುವಂತಾಗಿದೆ.

ಈ ದಿನದವರೆಗೂ ಬೆಂಗಳೂರು ವ್ಯಾಪಕ ಸಂಚಾರ ಸಮಸ್ಯೆಗಳಿಂದ ಬಳಲುತ್ತಿರುವುದು ಸುಳ್ಳಲ್ಲ. ಅಲ್ಲಲ್ಲಿ ಕಾಮಗಾರಿ ವೈಟ್ ಟಾಪಿಂಗ್, ವಿವಿಧ ಇಲಾಖೆಗಳ ಕೆಲಸ ಕಾರ್ಯಗಳಿಗೆ, ರಾಜಕಾರಣಿಗಳ ಕಾರ್ಯಕ್ರಮಗಳಿಗೆ ರಸ್ತೆ ಮುಚ್ಚುವಿಕೆ. ಆಗಾಗ ಘಟಿಸುವ ಮಾರ್ಗ ಬದಲಾವಣೆಗಳ ಕಾರಣದಿಂದ ನಗರದಲ್ಲಿ ಸಂಚಾರ ಅಮೆಗತಿಗೆ ಸರಿದಿದೆ. ಇನ್ನೂ ನಗರಾದ್ಯಂತ ಮೂಲಸೌಕರ್ಯ ಅಭಿವೃದ್ಧಿಗಾಗಿ ಸ್ಥಳೀಯ ನಾಗರಿಕ ಸಂಸ್ಥೆಗಳು ನಡೆಸುವ ಕಾರ್ಯಗಳ ಬೆಂಬಲಿಸಲು ಬೆಂಗಳೂರು ಸಂಚಾರ ಪೊಲೀಸರು ಟ್ರಾಪಿಕ್ ಬದಲಾವಣೆಗೆ ಸೂಚಿಸುವುದು ಮಾಮೂಲಾಗಿದೆ. ಬೆಂಗಳೂರಿನ ಅನೇಕ ದಿಕ್ಕುಗಳಲ್ಲಿ ನಮ್ಮ ಮೆಟ್ರೋ ವಿಸ್ತರಣೆ ಆಗುತ್ತಿದೆ. ಅಂಡರ್ಗ್ರೌಡ್, ಭೂಮಿ ಮೇಲೆ ಸಿವಿಲ್ ಕೆಲಸ ನಡೆದಿವೆ. ಇದು ಸಹ ರಸ್ತೆ ಸಂಚಾರಕ್ಕೆ ಅಲ್ಲಲ್ಲಿ ತೊದರೆ ಉಂಟು ಮಾಡುತ್ತಿದೆ. ಇತ್ತೀಚೆಗೆ ಬೃಹತ್ ಕಾಂಕ್ರೀಟ್ನ ಮೆಟ್ರೋ ಡಕ್ಟ್ ಆಟೋ ಮೇಲೆ ಬಿದ್ದು ಚಾಲಕ ಮೃತಪಟ್ಟ ಘಟನೆ ನಡೆದಿದೆ. ಯಲಹಂಕ ಕೋಗಿಲು ಕ್ರಾಸ್ ಬಳಿ ಘಟನೆ ನಡೆದಿದೆ.

ಸಂಚಾರ ದಟ್ಟಣೆ, ನಿಧಾನಗತಿಯ ಪಾಯಿಂಟ್ ಬೆಂಗಳೂರಿನ ಐಟಿ ಕಚೇರಿಗಳು ಹೆಚ್ಚಿನ ಪ್ರಮಾಣದಲ್ಲಿರುವ ಹೊರ ವರ್ತುಲ ರಸ್ತೆಯ ಮಾರತಹಳ್ಳಿ, ಮಹಾದೇವಪುರ, ಸಿಲ್ಕ್ಬೋರ್ಡ್ವರೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಪಿಲ್ಲರ್, ಮೆಟ್ರೋ ಡಕ್ಟ್ ಅಳವಡಿಕೆ ಕೆಲಸ ನಡೆಯುತ್ತಿದೆ. ಇದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಕೆಲವೊಮ್ಮೆ ಮೇಲ್ಸೇತುವೆಗಳನ್ನು ಬಂದ್ ಮಾಡಿದ್ದ ಉದಾಹರಣೆ ಸಹ ಇದೆ. ಆಗ ಸಣ್ಣ ರಸ್ತೆಗಳು, ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಸೃಷ್ಟಿಯಾಗಿದೆ.

ಅದಲ್ಲದೇ ಇಂದಿರಾನಗರ, ವೈಟ್ಫೀಲ್ಡ್, ಪೀಣ್ಯ ಮೇಲ್ಸೇತುವೆ ಬಳಿಯ ರಸ್ತೆಗಳು ಸೇರಿದಂತೆ ಪ್ರಮುಖ ವೃತ್ತ, ಜಂಕ್ಷನ್ ಹಾಗೂ ಸಿಗ್ನಲ್ಗಳಲ್ಲಿ ದಟ್ಟಣೆ ಉಂಟಾಗುತ್ತದೆ. ಜನದಟ್ಟಣೆಯ ಸಮಯದಲ್ಲಿ (ಪೀಕ್ ಹವರ್) ಜನರ ಓಡಾಟ ಜೊತೆಗೆ ವಾಣಿಜ್ಯ ಸಂಚಾರವು ಅಧಿಕವಾಗಿರುತ್ತದೆ. ನಿತ್ಯ ಬೆಳಗ್ಗೆ ಮತ್ತು ಸಂಜೆ ಈ ಕಾರಣದಿಂದ ಸಂಚಾರ ಗಂಟೆಗಟ್ಟಲೇ ತಡವಾಗುತ್ತಿದೆ. ಹವಾಮಾನ ತೊಂದರೆ: ಇತ್ತೀಚಿನ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ, ವಿಳಂಬ ಹೆಚ್ಚಾಗಿದೆ. ಮಳೆಯು ಸಂಚಾರ ದಟ್ಟಣೆಗೆ ಕಾರಣ ಹೌದು, ನಗರದಲ್ಲಿ ನಿಮಿಷಗಳ ಕಾಲ ಮಳೆ ಬಂದರೆ ಸಾಕು, ರಸ್ತೆಯುದ್ದಕ್ಕೂ ನೀರು ನಿಂತು ಬಿಡುತ್ತದೆ. ಒಳಚರಂಡಿ ಇದ್ದರೂ ಸಹಿತ ಸರಾಗವಾಗಿ ನೀರು ಹರಿದು ಹೋಗುವುದಿಲ್ಲ. ಬದಲಾಗಿ ಎಲ್ಲೆಂದರಲ್ಲಿ ನಿಂತುಕೊಂಡು ಪ್ರವಾಹ ಸ್ಥಿತಿ ನಿರ್ಮಿಸುತ್ತದೆ. ವಾಟರ್ಲಾಗಿಂಗ್ ಸಮಸ್ಯೆ ಪ್ರತಿ ಮಳೆ ಬಂದಾಗಲೂ ಉಲ್ಬಣಗೊಳ್ಳುತ್ತದೆ. ರಸ್ತೆಗಳು ಜಲಾವೃತಗೊಳ್ಳುತ್ತವೆ. ಜನರು ಓಡಾಡಲು ಭಯಪಡುತ್ತಾರೆ. ಈ ವೇಳೆ ಸಂಚಾರ ನಿಧಾನಗತಿಯಲ್ಲಿರುತ್ತದೆ.

ಪರ್ಯಾಯ ಪರಿಹಾರಕ್ಕೆ ಗೂಗಲ್ ಮ್ಯಾಪ್ ಬಳಸಬಹದು ವಿದ್ಯಾರ್ಥಿಗಳು, ನೌಕರರು, ವ್ಯಾಪಾರಿಗಳು, ಬಸ್ ಹಾಗೂ ಇತರ ವಾಹನಗಳ ಸವಾರರು ಸೇರಿದಂತೆ ಒಟ್ಟಾರೆ ಸಾರ್ವಜನಿಕರು ಈ ಮೇಲಿನ ಸಮಸ್ಯೆ ನಿತ್ಯ ಎದುರಿಸುತ್ತಿದ್ದಾರೆ. ಹಾಗಾದರೆ ಇದರಿಂದ ಪಾರಾಗಲು, ಇಲ್ಲವೇ ತಕ್ಕ ಮಟ್ಟಿನ ಪರ್ಯಾಯ ಮಾರ್ಗ ಹುಡುಕಲು ಏನು ಮಾಡಬೇಕು. ನಿತ್ಯ ಓಡಾಟಕ್ಕಾಗಿ ನೀವು ಗೂಗಲ್ ಮ್ಯಾಪ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬಹುದು. ಇದರಿಂದ ಟ್ರಾಫಿಕ್ ರೂಟ್ ಮೊದಲೇ ತಿಳಿಯುತ್ತವೆ. ಅದರಿಂದ ಆ ಮಾರ್ಗವನ್ನು ಕಡೆಗಣಿಸಬಹುದು. ಅಲ್ಲದೇ ನೀವು ಗೊತ್ತಿರುವ ಶಾರ್ಟ್ ರೂಟ್ಗಳನ್ನು, ಸಿಗ್ನಲ್ ಹಾಗೂ ಮುಖ್ಯ ರಸ್ತೆಗಳ ಬದಲಾಗಿ ಉಪ ರಸ್ತೆಗಳನ್ನೂ ಬಳಸಬಹುದು. ಈ ಉಪಾಯ ನಿಮ್ಮ ಸಂಚಾರಕ್ಕೆ ಸಹಾಯವಾಗುತ್ತದೆ.

Leave a Reply

Your email address will not be published. Required fields are marked *