ಮುನಿರತ್ನ ಅವರನ್ನು ಸಮರ್ಥಿಸಿದವರು ಲಜ್ಜೆಗೆಟ್ಟವರು : ಕಾಂಗ್ರೆಸ್ ಆಕ್ರೋಶ

ಮುನಿರತ್ನ ಅವರನ್ನು ಸಮರ್ಥಿಸಿದವರು ಲಜ್ಜೆಗೆಟ್ಟವರು : ಕಾಂಗ್ರೆಸ್ ಆಕ್ರೋಶ

ಬೆಂಗಳೂರು :  ಮುನಿರತ್ನರನ್ನು ಸಮರ್ಥಿಸುವ ಮೂಲಕ ಬಿಜೆಪಿನಾಯಕರು ತಾವು ಅತ್ಯಂತ ಲಜ್ಜೆಗೆಟ್ಟವರು ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಬಿಜೆಪಿಗೆ ಜನ ಸಮುದಾಯದ ಬಗ್ಗೆ ನೈತಿಕ ಭಯ ಇಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಲಂಚಕ್ಕಾಗಿ ಗುತ್ತಿಗೆದಾರರನ್ನು ಪೀಡಿಸಿದ ಭ್ರಷ್ಟಾಚಾರದ ಜೊತೆಗೆ ಮಹಿಳೆಯರು ಬಳಸುವ ವಸ್ತುಗಳಂತೆ ಮಾತಾಡಿದ್ದಾರೆ ಬಿಜೆಪಿ ಶಾಸಕ. ದಲಿತರ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎಂದು ಗುಡುಗಿದ ಕಾಂಗ್ರೆಸ್. ಹೀಗಿದ್ದೂ ಮುನಿರತ್ನರನ್ನು ಸಮರ್ಥಿಸುತ್ತಿರುವ ಬಿಜೆಪಿ ಈಗ ಬಹಿರಂಗವಾಗಿ ತಾನು ಮಹಿಳಾ ವಿರೋಧಿ, ದಲಿತ ವಿರೋಧಿ, ಒಕ್ಕಲಿಗ ವಿರೋಧಿ ಎನ್ನುವುದನ್ನು ಸಾಬೀತು ಮಾಡಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ

Leave a Reply

Your email address will not be published. Required fields are marked *