ಕರ್ನಾಟಕ ಮೂರು ಭಾಗಗಳಾಗಿ ಮೂವರು ‘CM’ ಅಗಲಿದ್ದಾರೆ : ಬ್ರಹ್ಮಾಂಡ ಗುರೂಜಿ ಸ್ಪೋಟಕ ಭವಿಷ್ಯ!

ಕರ್ನಾಟಕ ಮೂರು ಭಾಗಗಳಾಗಿ ಮೂವರು 'CM' ಅಗಲಿದ್ದಾರೆ : ಬ್ರಹ್ಮಾಂಡ ಗುರೂಜಿ ಸ್ಪೋಟಕ ಭವಿಷ್ಯ!

ಹಾಸನ: ಖ್ಯಾತ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಅವರು ದೇಶ ಹಾಗೂ ಕರ್ನಾಟಕದ ಕುರಿತು ಸ್ಫೋಟಕ ಭವಿಷ್ಯ ನುಡಿದಿದ್ದು, ಕರ್ನಾಟಕ ಮೂರು ಭಾಗ ಆಗೋದು ಶತಸಿದ್ಧ, ಶಿವನ ಮೇಲೆ ಆಣೆ ಮಾಡುತ್ತೇ ಸತ್ಯವಾಗಲಿದೆ. ಕರ್ನಾಟಕ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹೀಗೆ ಮೂರು ಭಾಗ ಆಗಲಿದೆ.

ಮೂವರು ಮುಖ್ಯಮಂತ್ರಿಗಳಾಗಲಿದ್ದಾರೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಹಾಸನದಲ್ಲಿ ಅಧಿದೇವತೆ ಶ್ರೀ ಹಾಸನಾಂಬ ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ ದೇಶ ಮತ್ತೆ ಎರಡು ಭಾಗ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದರ ನಡುವೆ ಬಾಂಗ್ಲಾದೇಶ-ಚೈನಾ ಕುತಂತ್ರ ಮಾಡಿ ಭಾರತ ದೇಶದ ಮೇಲೆ ದಾಳಿ ಮಾಡಲಿವೆ. ನಮಗೆ ಅಮೆರಿಕದಿಂದಾಗಲಿ ಬೇರೆ ಯಾವ ದೇಶದಿಂದ ಸಹಾಯ ಸಿಗುವುದಿಲ್ಲ. ರಷ್ಯಾವೊಂದೇ ಸಹಾಯ ಮಾಡಲಿದೆ ಎಂದಿದ್ದಾರೆ.

2025 – 2026ಕ್ಕೆ ಮೂರನೇ ಮಹಾಯುದ್ಧ ನಡೆಯಲಿದ್ದು, 13 ಮುಸ್ಲಿಂ ರಾಷ್ಟ್ರಗಳು ಭಾರತದ ಮೇಲೆ ದಾಳಿ ಮಾಡಲಿದ್ದಾರೆ. ಭಾರತ ದೇಶ ಮತ್ತೆ ಎರಡು ಭಾಗ ಆಗಲಿದೆ. ಇದರ ನಡುವೆ ಬಾಂಗ್ಲಾದೇಶ-ಚೈನಾ ಕುತಂತ್ರ ಮಾಡಿ ಭಾರತ ದೇಶದ ಮೇಲೆ ದಾಳಿ ಮಾಡಲಿವೆ. ನಮಗೆ ಅಮೆರಿಕದಿಂದಾಗಲಿ ಬೇರೆ ಯಾವ ದೇಶದಿಂದ ಸಹಾಯ ಸಿಗುವುದಿಲ್ಲ. ರಷ್ಯಾವೊಂದೇ ಸಹಾಯ ಮಾಡಲಿದೆ ಎಂದರು.

ಪ್ರಧಾನಮಂತ್ರಿಗಳು ಎರಡು ವರ್ಷ ಅವಧಿಯಲ್ಲಿ ಕೇವಲ ಒಂದೂವರೆ ವರ್ಷ ಮಾತ್ರ ಪ್ರಧಾನಿಯಾಗಿ ಉಳಿಯುತ್ತಾರೆ. ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆಶ್ರಮ ಸೇರಲಿದ್ದಾರೆ. ಈ ರಾಜಕೀಯ ಹೊಲಸು ಸರಿಮಾಡಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ ಏನೂ ಬದಲಾವಣೆ ಆಗದೆ ಬೇಜಾರಾಗಿ ರಾಜೀನಾಮೆ ನೀಡಬಹುದು ಅಥವಾ ಬೇರೆಯೇ ಆಯ್ಕೆ ಮಾಡಿಕೊಳ್ಳಬಹುದು. ಮುಂದೆ ಒಬ್ಬ ಸನ್ಯಾಸಿ ಜಗತ್ತನ್ನು ಆಳಲಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *