ತುಮಕೂರು: ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ 3 ಪ್ರತ್ಯೇಕ ಕಾಣೆ ಪ್ರಕರಣಗಳು ದಾಖಲಾಗಿವೆ.
ಪ್ರಕರಣ –1 : ತುರುವೇಕೆರೆ ಪಟ್ಟಣದ ಸುಮಾರು 34 ವರ್ಷದ ವಿಶ್ವನಾಥ ಎನ್.ಟಿ. ಎಂಬ ವ್ಯಕ್ತಿಯು ಏಪ್ರಿಲ್ 6 ರಂದು ಕಾಣೆಯಾಗಿದ್ದಾನೆ ಎಂದು ಈತನ ಪತ್ನಿ ಯಮುನ ಠಾಣೆಗೆ ದೂರು ನೀಡಿದ್ದಾಳೆ. ಈತನು ಈ ಹಿಂದೆ ಸುಮಾರು ೨ ಬಾರಿ ಹೀಗೆಯೇ ವಿನಾಃ ಕಾರಣ ಕಾಣೆಯಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾಳೆ.
ಪ್ರಕರಣ –2 : ತುರುವೇಕೆರೆ ಟೌನ್ ಮಡಿವಾಳರ ಬೀದಿಯಲ್ಲಿ ವಾಸವಿರುವ ಸುಮಾರು 35 ವರ್ಷದ ಹರ್ಷ ಎಂಬ ವ್ಯಕ್ತಿಯು ಮೇ 24ರಂದು ಕಾಣೆಯಾಗಿದ್ದಾನೆ ಎಂದು ಈತನ ತಂದೆ ರಂಗೇಗೌಡ ಠಾಣೆಗೆ ದೂರು ನೀಡಿದ್ದಾರೆ.
ಈತನು 6 ಅಡಿ ಎತ್ತರ, ದುಂಡು ಮುಖ ಹೊಂದಿದ್ದು, ಎಡಗಾಲಿನಲ್ಲಿ ಮಚ್ಚೆ ಇರುತ್ತದೆ. ಕನ್ನಡ ಭಾಷೆ ಮಾತನಾಡುವ ಈತನು ನೇಯ್ಗೆ ಕೆಲಸ ಮಾಡಿಕೊಂಡಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಈತನು ಬಿಳಿ ಬಣ್ಣದ ಟೀ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದನು.
ಪ್ರಕರಣ –3 : ತುರುವೇಕೆರೆ ತಾಲ್ಲೂಕು ಮಾಯಸಂದ್ರ ಹೋಬಳಿ ಚಟ್ಟನಹಳ್ಳಿ ನಿವಾಸಿ ಸುಮಾರು 52 ವರ್ಷದ ರಂಗಸ್ವಾಮಿ ಬಿನ್ ಲೇಟ್ ರಂಗಯ್ಯ ಜೂನ್ 28 ರಿಂದ ಕಾಣೆಯಾಗಿದ್ದಾನೆ ಎಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಬಗ್ಗೆ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಅವರು ಮನವಿ ಮಾಡಿದ್ದಾರೆ.