ಬೆಂಗಳೂರು: ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ ಪ್ರಜೆಗಳ ಹಾವಳಿ ಹೆಚ್ಚಾಗಿದ್ದು, ಬೆಂಗಳೂರಿನ ಪೀಣ್ಯದಲ್ಲಿ ಅಕ್ರಮವಾಗಿ ವಾಸವಿದ್ದ ಪಾಕಿಸ್ತಾನದ ಕುಟುಂಬವನ್ನು Pakistanis Arrested in Bangalore ಪೊಲೀಸರು ಪತ್ತೆಹಚ್ಚಿದ್ದು, ಮೂವರನ್ನು ಜಿಗಣಿಯಲ್ಲಿ ಬಂಧಿಸಿದ್ದಾರೆ.
ಇದರೊಂದಿಗೆ ಮೂರ್ನಾಲ್ಕು ದಿನಗಳ ಹಿಂದೆ ಐದಕ್ಕೂ ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದ ಪೊಲೀಸರು ಇದೀಗ ಮತ್ತೆ ಇನ್ನೂ ಮೂವರನ್ನು ಬೆಂಗಳೂರಿನಲ್ಲಿ ಗುರುವಾರ ವಶಕ್ಕೆ ಪಡೆದಿದ್ದಾರೆ. ಅವರ ಮೂಲ ಹಾಗೂ ಉದ್ದೇಶದ ಬಗ್ಗೆ ತನಿಖೆ ಆರಂಭಗೊಂಡಿದೆ.
ಈ ಮೂವರು ಆರೋಪಿಗಳನ್ನು ಜಿಗಣೆ ಇನ್ಸೆಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಆನೇಕಲ್ನ 3ನೇ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆ ಸಲುವಾಗಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ನಾಲ್ವರನ್ನು ಜಿಗಣಿ ಠಾಣೆ ಪೊಲೀಸರು ಬಂಧಿಸಿದ್ದರು
ಕಳೆದ ಸೋಮವಾರ ಕಳೆದ ಆರು ವರ್ಷಗಳಿಂದ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ದಂಪತಿ ಸೇರಿ ನಾಲ್ವರನ್ನು ಜಿಗಣಿ ಠಾಣೆ ಪೊಲೀಸರು ಬಂಧಿಸಿದ್ದರು. ರಶೀದ್ ಅಲಿ ಸಿದ್ದಿಕಿ ಅಲಿಯಾಸ್ ಶಂಕರ್ ಶರ್ಮಾ (48), ಪತ್ನಿ ಆಯೇಷಾ ಹನೀಫ್ ಅಲಿಯಾಸ್ ಆಶಾರಾಣಿ (38), ಹನೀಫ್ ಮೊಹಮದ್ ಅಲಿಯಾಸ್ ರಾಮ್ ಬಾಬು ಶರ್ಮಾ (73), ರುಬಿನಾ ಅಲಿಯಾಸ್ ರಾಣಿ ಶರ್ಮಾ (61) ಬಂಧಿಸಲಾಗಿತ್ತು.
ಬಂಧಿತ ಪಾಕಿಸ್ತಾನ ಪ್ರಜೆಗಳ ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಪಾಕಿಸ್ತಾನದ ಲಿಯಾಖತಾಬಾದ್ ಮೂಲದ ರಶೀದ್, ಪತ್ನಿ, ಅತ್ತೆ ಹಾಗೂ ಮಾವ ಸಂಬಂಧಿಕರ ಜತೆ ರಾಜಾಪುರದ ಅನಘಾ ಲೇಔಟ್ನ ವಿಲ್ಲಾದಲ್ಲಿ 2018ರಿಂದ ವಾಸಿಸುತ್ತಿದ್ದರು. ರಶೀದ್, ಮುಸ್ಲಿಂ ಸಮುದಾಯದ ‘ಮೆಹದಿ ಫೌಂಡೇಶನ್’ ಮುಖಾಂತರ ಧರ್ಮ ಪ್ರಚಾರ ಕಾರ್ಯಕ್ರಮದಲ್ಲಿತೊಡಗಿಸಿಕೊಂಡಿದ್ದರು. ಜತೆಗೆ, ಪಾಕಿಸ್ತಾನದಲ್ಲಿರುವ ಸಂಬಂಧಿಕರ ಜತೆಗೂ ನಿರಂತರ ಸಂಪರ್ಕದಲ್ಲಿದ್ದರು ಎಂಬ ವಿಚಾರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.