ಮೈಸೂರು–ಚಿತ್ರದುರ್ಗದಲ್ಲಿ ದಾರುಣ ಘಟನೆ, ಬೆಂಗಳೂರಿನಲ್ಲಿ ಪೊಲೀಸ್ ಗಂಭೀರ ಗಾಯ.
ಮೈಸೂರು: ಮೈಸೂರು, ಚಿತ್ರದುರ್ಗ ಮತ್ತು ಬೆಂಗಳೂರು ಉತ್ತರ ತಾಲೂಕಿನಲ್ಲಿ ನಡೆದಿರುವ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯಲ್ಲಿ ಲಾರಿ-ಬೈಕ್ ನಡುವೆ ಅಪಘಾತ ನಡೆದು ಇಬ್ಬರು ಮೃತಪಟ್ಟಿದ್ದರೆ, ಚಿತ್ರದುರ್ಗದಲ್ಲಿ ನಡೆದ ಕಾರು ಮತ್ತು ಲಾರಿ ನಡುವಿನ ಡಿಕ್ಕಿಯಲ್ಲಿ ಓರ್ವ ಅಸುನೀಗಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಹುಣಸಮಾರನಹಳ್ಳಿಯಲ್ಲಿ ಗೂಡ್ಸ್ ವಾಹನ ಡಿಕ್ಕಿಯಾಗಿ ಪೊಲೀಸ್ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದಾರೆ.
ಭೀಕರ ಅಪಘಾತ: ಬೈಕ್ ಸವಾರರು ಸಾವು
ಮೈಸೂರು ಜಿಲ್ಲೆ ಹುಣಸೂರಿನ ತಾಲೂಕಿನ ಅರಸು ಕಲ್ಲಹಳ್ಳಿ ಗ್ರಾಮದಲ್ಲಿ ಲಾರಿ-ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತಕ್ಕೆ ಸವಾರರು ಬಲಿಯಾಗಿದ್ದಾರೆ. ಅಪಘಾತದ ರಭಸಕ್ಕೆ ಬೈಕ್ ಹೊತ್ತಿ ಉರಿದ್ದಿದ್ದು, ಸುರೇಶ್(63), ಮಾದೇವ್(52) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲಾರಿ-ಕಾರು ಮುಖಾಮುಖಿ ಡಿಕ್ಕಿ
ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ನಡೆದಿದೆ.
ಪೊಲೀಸ್ ಸಿಬ್ಬಂದಿಗೆ ಗೂಡ್ಸ್ ವಾಹನ ಡಿಕ್ಕಿ
ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಸಿಬ್ಬಂದಿಗೆ ಗೂಡ್ಸ್ ವಾಹನ ಡಿಕ್ಕಿಯಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ಏರ್ಪೋರ್ಟ್ ರಸ್ತೆಯ ಹುಣಸಮಾರನಹಳ್ಳಿ ಬಳಿ ನಡೆದಿದೆ. ಸಿಟಿಗೆ ಪ್ರವೇಶವಿಲ್ಲ ಎಂದು ವಾಹನ ತಡೆದಿದ್ದಕ್ಕೆ ಗುದ್ದಿಕೊಂಡು ಹೋಗಲು ಚಾಲಯ ಯತ್ನ ನಡೆಸಿದ್ದು, ಘಟನೆಯಲ್ಲಿ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ ವಿಕಾಸ್ಗೆ ಗಂಭೀರ ಗಾಯಗಳಾಗಿವೆ. ನಿತ್ಯ ಬೆಳಗ್ಗೆ 7:30ರಿಂದ 11 ಗಂಟೆವರೆಗೆ ಏರ್ಪೋರ್ಟ್ ರಸ್ತೆಯಲ್ಲಿ ಗೂಡ್ಸ್ ವಾಹನಗಳಿಗೆ ನಿಷೇಧವಿದೆ. ಹೀಗಿದ್ದರೂ ಏರ್ಪೋರ್ಟ್ ಹೆದ್ದಾರಿಗೆ ಗೂಡ್ಸ್ ವಾಹನ ಎಂಟ್ರಿ ಕೊಟ್ಟಿತ್ತು. ಈ ವೇಳೆ ವಾಹನ ನಿಲ್ಲಿಸುವಂತೆ ಸೂಚನೆ ನೀಡಿದರೂ ಚಾಲಕ ನಿಲ್ಲಿಸಿಲ್ಲ ಎನ್ನಲಾಗಿದೆ.
For More Updates Join our WhatsApp Group :




