ಗುಡುಗು ಸಿಡಿಲು ರಭಸದ ಮಳೆ..!

ಚಂಡಮಾರುತ ಪರಿಚಲನೆ: ಕರಾವಳಿ ರಾಜ್ಯಗಳಲ್ಲಿ ಭಾರೀ ಮಳೆ, ಪ್ರವಾಹ ಭೀತಿ

ಹುಬ್ಬಳ್ಳಿ: ಹಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಹುಬ್ಬಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಗುಡುಗು ಸಿಡಿಲು ಮಿಶ್ರಿತ ಮಳೆಸುರಿದಿದೆ.

ಹುಬ್ಬಳ್ಳಿ ನಗರ ಗ್ರಾಮಾಂತರ ನವಲಗುಂದ ಹಾಗೂ ಕುಂದಗೋಳ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧಡೆ  ಐದು ತಾಸು ನಿರಂತರ ಮಳೆಯಾಗಿದೆ. ಹಲವೆಡೆ ಮನೆಯೊಳಗೆ ಮಳೆ ನೀರು ನುಗ್ಗಿ ದಿನಸಿ ಹಾಗೂ ಕಾಳು ಕಡಿಗೆ ಹಾನಿಯಾಗಿದೆ.

ಹುಬ್ಬಳ್ಳಿ ನಗರದಲ್ಲಿಸಹ ಧಾರಾಕಾರ ಮಳೆ ಸುರಿಯಿತು. ಕುಂದಗೋಳ, ಕಲಘಟಗಿ  ಪಟ್ಟಣದಲ್ಲಿ ಅರ್ಧ ಗಂಟೆಗೂ ಕಾಲ ಮಳೆ ಬಿದ್ದಿದೆ ಅಲ್ಲಲ್ಲಿ ಉತ್ತಮ ಮಳೆಯಾಗಿದ್ದು ಬೆಳಗಿನ ಜಾವದಿಂದ ಜಿಟಿ ಜಿಟಿ ಮಳೆ ಬಿದ್ದಿದೆ.

ಕೇಲ ದಿನಗಳಿಂದ ಬಿಸಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪು ವಾತಾವರಣದಿಂದ ನಿಟ್ಟುಸಿರುವ ಬಿಟ್ಟರು, ಮತ್ತೊಂದೆಡೆ, ಭಾರಿ ಮಳೆಗೆ ಸಂಚಾರ, ಜನಜೀವನ ಅಸ್ತವ್ಯಸ್ತವಾಗಿತು.

ಹಲವು ದಿನಗಳಿಂದ ತೀವ್ರ ತಾಪಮಾನ ಬಿಸಿಯ ವಾತಾವರಣ ಕಂಡಿದ್ದ ಹುಬ್ಬಳ್ಳಿ, ಧಾರವಾಡ, ಗದಗ ರಸ್ತೆ ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿ ಭಾನುವಾರ ಭಾರೀ ಮಳೆಯಿಂದ ದಾಖಲಾಗಿದೆ.

ನಗರದ ಹೃದಭಾಗವಾದ ಕೊಪ್ಪೀಕರ್ ರಸ್ತೆ, ಅರವಿಂದ ನಗರ, ಆನಂದ ನಗರ ಮುಖ್ಯ ರಸ್ತೆ, ಹೊಸೂರ ವೃತ್ತ, ಸಿದ್ಧಾರೂಢಮಠ, ಹಳೆ ಆದಾಯ ತೆರಿಗೆ ಕಚೇರಿ, ಜನತಾ ಬಜಾರ್, ದುರ್ಗದ್ ಬೈಲ್ ಮುಂತಾದ ಕಡೆಗಳಲ್ಲಿ ವಾಹನ ಸವಾರರು ದಟ್ಟಣೆಯಿಂದ ಮಳೆಯಲ್ಲೇ ಸಾಕಷ್ಟು ತೊಂದರೆ ಅನುಭವಿಸಿದರು. ಹುಬ್ಬಳ್ಳಿಯ ಪ್ರಮುಖ ರಸ್ತೆವೊಂದರಲ್ಲಿ ಕೆರೆಯಂತೆ ಮಳೆ ನೀರು ನಿಂತಿದೆ. ಮಳಿಗೆಗಳ ಮುಂದೆ ನಿಲ್ಲಿಸಿರುವ ವಾಹನಗಳು ಮುಳುಗಿವೆ. ಅದರಲ್ಲಿ ವಾಹನ ಸವಾರರು ಸಂಚರಿಸಿದ್ದಾರೆ. ಸುಮಾರು ಎರಡು ಅಡಿಯಷ್ಟು ನೀರು ರಸ್ತೆಯಲ್ಲಿ ನಿಂತು ಭಾರೀ ಆವಾಂತರ ಸೃಷ್ಟಿ ಆಯಿತು.

Leave a Reply

Your email address will not be published. Required fields are marked *