ಚೈತ್ರ ಹೆಚ್‌ಬಿ ಹೆಸರಹಳ್ಳಿ
ನಾವು ಹೆಣ್ಣು ಅಂದರೆ ಅಂದ ಚಂದಕ್ಕೆ ಮಾದರಿಯಾಗಿರುತ್ತಾರೆ.. ಯಾಕೆಂದರೆ ಹೆಣ್ಣು ಮಕ್ಕಳು ಮನೆಯಲ್ಲಿ ಹುಟ್ಟಿದ್ದಾಳೆ ಅಂದರೆ ಆ ಮನೆಯ ನಂದಾದೀಪ ಎಂದು ಅಥವಾ ಲಕ್ಷ್ಮಿ ಎಂದು ಕರೆಯುತ್ತಾರೆ . ಹಿಂದಿನ ಕಾಲದಲ್ಲಿ ಗಂಡು ಮಕ್ಕಳು ಎಂದರೆ ತುಂಬಾ ಪ್ರಾಮುಖ್ಯತೆ ವಂಶ ಬೆಳಗುವವನು ಎಂದು ಗಂಡು ಮಗುವನ್ನು ಅಷ್ಟೊಂದು ಪ್ರೀತಿ ವಿಶ್ವಾಸದಿಂದ ಗಂಡು ಮಗುವನ್ನು ನೋಡುತ್ತಿದ್ದರು ಏಕೆಂದರೆ ಗಂಡು ಅಷ್ಟೊಂದು ಪ್ರಮುಖವಾದವರು ಆಗಿರುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಬದಲಾಗಿದೆ ಏಕೆಂದರೆ ಹೆಣ್ಣು ಹುಟ್ಟಲಿ ಗಂಡೇ ಹುಟ್ಟಲಿ ಯಾವ ಮಗುವಾದರೂ ಸಾಕು, ಯಾವುದು ಬೇದ ಭಾವವಿಲ್ಲದೆ ಯಾವ ಮಗು ಹುಟ್ಟಿದರು ಮನೆಯಲ್ಲಿ ಅದನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಇಂದಿನ ಕಾಲದವರು ತರ ಗಂಡು ಮಗು ಬೇಕು ಎಂದು ಯಾರೂ ಹೆಣ್ಣನ್ನು ಅಥವಾ ಗಂಡಾಗಲಿ ಅದಕ್ಕೆ ಎಲ್ಲಾ ರೀತಿಯ ಸವಲತ್ತು ಕೊಡುತ್ತಾರೆ ಸಮಾಜದಲ್ಲಿ ಯಾವ ರೀತಿ ಬದುಕುತ್ತಾ ಇರಬೇಕು ಎಂದು ಕಲಿಸುತ್ತಾರೆ. ಈಗಿನ ಕಾಲದ ತಂದೆ ತಾಯಿಗಳಿಗೆ ಮಕ್ಕಳನ್ನು ನೋಡಿಕೊಳ್ಳಲು ಸಮಯವೇ ಇರುವುದಿಲ್ಲ ಏಕೆಂದರೆ ತಂದೆ ತಾಯಿ ಇಬ್ಬರು ಕೆಲಸಕ್ಕೆ ಹೋಗುತ್ತಾರೆ. ಇನ್ನ ಇಲ್ಲಿ ಮಕ್ಕಳನ್ನು ಸಾಕುವುದು ಆಗುತ್ತದೆ ಈಗಿನ ಪ್ರಪಂಚ ದುಡ್ಡಿನ ಮೇಲೆ ನಿಂತಿದೆ ಏಕೆಂದರೆ ಈಗಿನ ಜನರು ಹೆಚ್ಚಾಗಿ ಹಣಕ್ಕೆ ಆಸೆಯನ್ನು ಬೀಳುತ್ತಾರೆ. ನಾವು ಎಲ್ಲಾ ರೀತಿ ನಾವು ನಮ್ಮ ಮಗು ಇರುವ ಆಸೆಯಿಂದ ಅವರು ಕೆಲಸ ಮಾಡಲು ಸಮಯವೇ ಇರುವುದಿಲ್ಲ ಆದ್ದರಿಂದ ಮನೆಗೆ ಒಂದೇ ಮಗು ಅದು ಗಂಡು ಆದರೆ ಸರಿ ಹೆಣ್ಣಾದರೂ ಏನಾದರೂ ಸರಿ.
ನಾವು ಕೆಲವರನ್ನು ಕೇಳಿದಾಗ ನಿಮಗೆ ಒಂದು ಮಗು ಸಾಕಾ ಇನ್ನೂ ಇನ್ನೊಂದು ಮಗು ಬೇಡ ಅಂದಾಗ ನಾವು ಕೆಲಸಕ್ಕೆ ಅಂತ ಹೊರಗಡೆ ಹೋದರೆ ಮನೆಯಲ್ಲಿ ಯಾರೂ ಇರುವುದಿಲ್ಲ ಮಗು ಇದ್ದರೆ ಅದನ್ನು ಅಜ್ಜಿ ತಾತ ಇದ್ದರೆ ನೋಡಿಕೊಳ್ಳುತ್ತಾರೆ ಇಲ್ಲದವರು ಬೇಬಿ ಕೇರಿಂಗ್ ಅಂತ ಶಾಲೆಗೆ ಹಾಕಬೇಕು ಆ ಮಗು ಒಂದು ದಿನ ತಂದೆ ತಾಯಿ ಜೊತೆ ಸಮಯ ಕಳೆಯುವುದಕ್ಕೆ ಆಗುವುದಿಲ್ಲ, ಈಗಿನ ತಂದೆ ತಾಯಿಯಾದವರು ಎಲ್ಲಾ ಕಡೆಯಿಂದ ಯೋಚನೆ ಮಾಡಿ ನಾವು ಹೆಚ್ಚು ಮಕ್ಕಳು ಬೇಡ ಹಾಗೂ ಹೆಚ್ಚು ಮಕ್ಕಳು ಇದ್ದರೆ ಖರ್ಚು ಹೆಚ್ಚಾಗಿರುತ್ತದೆ ನಮಗೆ ನಮ್ಮ ಆದ ಕಷ್ಟದ ಪರಿಸ್ಥಿತಿ ಇದೆ, ಇನ್ನು ಆ ಮಗುವಿಗೆ ಬಂದರೆ ಇನ್ನೂ ಜಾಸ್ತಿ ಖರ್ಚಿರುತ್ತದೆ ಆದ್ದರಿಂದ ನಾವು ನಾಲ್ಕಾರು ರೀತಿಯಲ್ಲಿ ಯೋಚನೆ ಮಾಡಿ ನನಗೆ ಒಂದು ಮಗು ಸಾಕು ಅದಕ್ಕೆ ವಿದ್ಯಾಭ್ಯಾಸ ಮಾಡಿಸಿ ಅವರ ಕಾಲ ಮೇಲೆ ನಿಲ್ಲುವ ರೀತಿಯಲ್ಲಿ ಮಾಡುವ ಹಾಗೆ ಮಾಡುವ ಜವಾಬ್ದಾರಿ ನಮ್ಮದು ಆಗಿರುತ್ತದೆ ಅವರನ್ನು ಒಂದು ದಡ ಸೇರಿಸುವುದು ತಂದೆ ತಾಯಿ ಧ್ಯೇಯವಾಗಿರುತ್ತದೆ.
ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿ ಇದೆ ಮನೆಗೊಂದು ಮಗು ಈಗಲಾದರೂ ನಮ್ಮ ದೇಶದಲ್ಲಿ ಜನಸಂಖ್ಯೆ ಕಡಿಮೆ ಆಗಬಹುದು ಈಗಲಾದರೂ ಇನ್ನೂ ಗಂಡು ಎನ್ನುವ ಭೇದ ಭಾವ ಏನಾದರೂ ಬಿಡುತ್ತಾರೆ ಕಾದು ನೋಡಬೇಕು ಯಾವ ಮಗುವಾದರೂ ಅದಕ್ಕೆ ಎಲ್ಲಾ ರೀತಿಯಿಂದಲೂ ನಾವು ಬೆಂಬಲ ಭರವಸೆ ಇದ್ದರೆ ಅದು ಉನ್ನತ ಸ್ಥಾನಕ್ಕೆ ಬರುತ್ತದೆ ಆದ್ದರಿಂದ ಯಾವ ಮಗುವಿದ್ದರೂ ಕೂಡ ಆ ಮನೆ ತುಂಬಾ ಚೆನ್ನಾಗಿ ನೋಡಿಕೊಂಡರೆ ಅದು ಮುಂದಿನ ಉನ್ನತ ಸ್ಥಾನಕ್ಕೆ ಹೋಗಬಹುದು ಮನೆಗೊಂದು ಮಗು ಎನ್ನುವ ಈಗಿನ ಕಾಲದಲ್ಲಿ ಅತಿ ಹೆಚ್ಚಾಗಿ ತಿಳಿಯುತ್ತಾರೆ ಅದೇ ರೀತಿ ಇದ್ದರೆ ಮನೆಗೊಂದು ಮಗು ಸಾಕು ಎನ್ನುವುದು ಪೋಷಕರ ಮಾತು ಹಾಗಿರುತ್ತದೆ
ಒಟ್ಟಾರೆ ನಾವು ನೋಡುವುದಾದರೆ ಯಾವುದೇ ಮಗುವಿದ್ದರೂ ಅದು ಹೆಣ್ಣಾಗಲಿ ಗಂಡಾಗಲಿ ಎರಡನ್ನು ಸಮಾನವಾಗಿ ನೋಡಬೇಕು ಯಾವ ಮಗು ಪಾಪದ ಮಗು ಅಲ್ಲ ದೇವರು ಕೊಟ್ಟಂತಹ ಮಗುವನ್ನು ಯಾರು ಕೂಡ ನಿಲಕ್ಷಿಸಬಾರದು ಯಾಕೆಂದರೆ ಮಕ್ಕಳು ಇಲ್ಲದವರ ಕಷ್ಟ ಅವರಿಗೆ ಏನು ಗೊತ್ತು ಯಾವ ಒಂದು ಮಗುವಾದರೆ ಸಾಕು ಎನ್ನುವ ರೀತಿಯಲ್ಲಿ ಇರುವ ತಂದೆ ತಾಯಿಗಳಿಗೆ ಒಂದು ಮಗು ಜನಿಸಿದರೆ ಅದು ದೇವರು ಕೊಟ್ಟಿರುವ ಮಗು ಎಂದು ತಿಳಿದು ಅದನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಮಕ್ಕಳ ಬಗ್ಗೆ ಯಾರು ತಾಸ್ಸರ ಬೇಡ ಎಲ್ಲ ಮಕ್ಕಳು ಒಂದೇ ಎಲ್ಲರನ್ನು ಚೆನ್ನಾಗಿ ನೋಡಿಕೊಂಡರೆ ಅದು ಚೆನ್ನಾಗಿ ಇರುತ್ತದೆ ಅದಕ್ಕೆ ಮನೆಗೊಂದು ಮಗು ಇದ್ದರೆ ಆ ಮನೆ ನಂದಾ ದೀಪವಾಗಿರುತ್ತದೆ ಎನ್ನುವುದು ನನ್ನ ಆಶಯವಾಗಿರುತ್ತದೆ.