ತಿಪಟೂರು: ನಗರಕ್ಕೆ ಕುಡಿಯುವ ನೀರು ನಿಲ್ಲಿಸಿದ್ದು, ನಗರದ ಜನ ಕುಡಿಯುವ ನೀರಿಗೆ ಆಹಾಕಾರ ಉಂಟಾಗಿದೆ. ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಹಾಗೂ ನಗರಸಭೆಗೆ ಅನೇಕ ಭಾರೀ ಮನವಿ ಮಾಡಲಾಗಿದೆ. ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ನಗರ ಆಡಳಿತ ಹಾಗೂ ಪೌರಾಯುಕ್ತರು, ನಗರದ ಜನರಿಗೆ ಕುಡಿಯುವ ನೀರು ನೀಡದೆ, ನಗರದ ಜನಕ್ಕೆ ತೊಂದರೆ ಮಾಡಲಾಗುತ್ತಿದೆ. ಕೂಡಲೇ ನಗರಸಭೆ ಆಡಳಿತ ಉತ್ತರ ನೀಡಬೇಕು ಎಂದು ಒತ್ತಾಯಿಸಿ ನಗರಸಭೆ ವಿರೋಧ ಪಕ್ಷದ ನಾಯಕ ರಾಮ್ ಮೋಹನ್ ನೇತೃತ್ವದಲ್ಲಿ ನಗರಸಭೆ ವಿಶೇಷ ಸಾಮಾನ್ಯ ಸಭೆ ಬಹಿಷ್ಕರಿಸಿ, ನಗರಸಭೆ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು.
ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಅಧ್ಯಕ್ಷತೆಯಲ್ಲಿ, ಶಾಸಕ ಕೆ. ಷಡಕ್ಷರಿ ಅವರ ಉಪಸ್ಥಿತಿಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಸಲಾಯಿತು. ಸಭೆ ಆರಂಭವಾಗುತ್ತಿದ್ದAತೆ, ಬಿಜೆಪಿ ಸದಸ್ಯರು ತಿಪಟೂರಿನಲ್ಲಿ ಕುಡಿಯುವ ನೀರಿಗೆ ಆಹಾಕಾರವಿದೆ. ತಿಪಟೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆಯಿಂದ ನಗರಕ್ಕೆ ನೀರು ಪೂರೈಸುವ ನೀರು ನಿಲ್ಲಿಸಲಾಗಿದೆ. ಈಚನೂರು ಕೆರೆ ನೀರಿಗೆ ಯುಜಿಡಿ ಕೊಳಚೆ ನೀರು ಸೇರಿ, ಕಲುಷಿತವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎನ್ನಲಾಗಿದೆ. ನಗರಸಭೆ ಆಡಳಿತ ನಗರದ ಜನರಿಗೆ ಕುಡಿಯುವ ನೀರೊದಗಿಸಲು, ಪರ್ಯಾಯವಾಗಿ ಯಾವ ವ್ಯವಸ್ಥೆ ಮಾಡಿಕೊಳ್ಳಲಾಗಿದೆಯಾ ಎಂದು ಸಭೆಯಲ್ಲಿ ಬಿಜೆಪಿ ಸದಸ್ಯರು ಪ್ರಶ್ನೆ ಮಾಡಿದ್ದಾಗ, ಅಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರು ನಡುವೆ ವಾಗ್ವಾದ ನಡೆಯಿತು.
ಶಾಸಕ ಕೆ.ಷಡಕ್ಷರಿ ಮಾತನಾಡಿ, ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾದ ಕಾರಣ ಈಚನೂರು ಕೆರೆಗೆ ಮಳೆನೀರಿನೊಂದಿಗೆ ಯುಜಿಡಿ ನೀರು ಸೇರಿ ಕಲುಷಿತವಾಗಿದೆ. ಈಚನೂರು ಕೆರೆ ನೀರನ್ನ ಲ್ಯಾಬ್ಗೆ ಕಳುಹಿಸಲಾಗಿದ್ದು, ತಜ್ಞರ ವರದಿಯಂತೆ ಮುಂದಿನ ಕ್ರಮವಹಿಸುತ್ತೇವೆ. ನಗರದ ಜನರಿಗೆ ತೊಂದರೆಯಾಗದAತೆ ನಗರಕ್ಕೆ ನೀರುಕೊಡಲು ಪರ್ಯಾಯ ಮಾರ್ಗಗಳನ್ನ ಯೋಚನೆ ಮಾಡಿ ಕ್ರಮಕೈಗೊಳ್ಳುಲಾಗುವುದು ಎಂದು ತಿಳಿಸಿದರು. ಶಾಸಕರ ಉತ್ತರದಿಂದ ತೃಪ್ತರಾಗದ ಬಿಜೆಪಿ ಸದಸ್ಯರು ಸಭೆ ಬಹಿಷ್ಕರಿಸಿ, ನಗರಸಭೆ ಮುಂಭಾಗ ಧರಣಿ ನಡೆಸಿ, ನಗರಸಭೆ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಬಿಜೆಪಿ ವಿರೋಧ ಪಕ್ಷದ ನಾಯಕ, ಮಾಜಿ ನಗರಸಭೆ ಅಧ್ಯಕ್ಷ ರಾಮ್ ಮೋಹನ್ ಮಾತನಾಡಿ, ಬೇಸಿಗೆ ಆರಂಭವಾಗುವ ಮೊದಲೇ ತಿಪಟೂರಿನಲ್ಲಿ ಕುಡಿಯುವ ನೀರಿಗೆ ಆಹಾಕಾರ ಉಂಟಾಗಿದೆ. ನಗರದ ಜನ ಟ್ಯಾಂಕರ್ ಮೊರೆ ಹೋಗುತ್ತಿದ್ದಾರೆ. ನಗರದ ಜನರಿಗೆ ಕುಡಿಯುವ ನೀರು ಪೂರೈಸಬೇಕಾದ ನಗರ ಆಡಳಿತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಸದಸ್ಯರ ವಾರ್ಡ್ಗಳ ಸಮಸ್ಯೆಗಳಿಗೆ ಪೌರಾಯುಕ್ತರು ಸ್ಪಂದಿಸುತ್ತಿಲ್ಲ. ಸಮಸ್ಯೆಯ ಆರಂಭದಲ್ಲೆ ನಗರದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು, ಯಾವುದೇ ಮುಂದಾಲೋಚನೆ ಮಾಡದೆ ನಿರ್ಲಕ್ಷ್ಯವಹಿಸಲಾಗಿದೆ. ನಗರದ ಜನರಿಗೆ ಮುಂದೆ ನೀರು ಪೂರೈಸಲು, ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಸಭೆಯಲ್ಲಿ ಉಪಸ್ಥಿತರಿದರು. ಪ್ರತಿಭಟನೆಯಲ್ಲಿ ಬಿಜೆಪಿ ಸದಸ್ಯರಾದ ಸಂಗಮೇಶ್, ಪ್ರಸನ್ನಕುಮಾರ್, ಸಂಧ್ಯಾಕಿರಣ್, ಶ್ರೀನಿವಾಸ್. ಮಲ್ಲೇಶ್ ನಾಯ್ಕ, ಶಶಿಕಿರಣ್, ಲತಾ ಲೋಕೇಶ್,ಭಾರತಿ ಮಂಜುನಾಥ್, ಓಹಿಲಾಗಂಗಾಧರ್ ಮತ್ತು ಜಯಲಕ್ಷ್ಮಿ ಉಪಸ್ಥಿತರಿದರು.