ತಿಪಟೂರು : ನಗರಪೊಲೀಸ್ ಠಾಣಾ ವ್ಯಾಪ್ತಿಯ ಗುರುದರ್ಶನ್ ಹೋಟೆಲ್ ಪಕ್ಕದಲ್ಲಿರುವ ಸಿ.ಕೆ ಮೊಬೈಲ್ಸ್ ಅಂಗಡಿಯ ರೋಲಿಂಗ್ ಶೆಟರ್ ದಿನಾಂಕ: 01/02/2025 ರಂದು ಕಳ್ಳತನ ಮಾಡಿ 75000/- ರೂ ಬೆಲೆಯುಳ್ಳ 06
ಮೊಬೈಲ್ ಗಳು, ನಗದು 18000/- ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂದ ತಿಪಟೂರು ನಗರಪೊಲೀಸ್ ಠಾಣೆಯಲ್ಲಿ ಠಾಣಾ 0.50. 21/2025 00:331(4),305 ಬಿ.ಎನ್.ಎಸ್-2023 ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಮೇಲ್ಕಂಡ ಪ್ರಕರಣವನ್ನು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ರವರ ಮಾರ್ಗದರ್ಶನದಲ್ಲಿ, ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳಾದ ವಿ.ಮರಿಯಪ್ಪ ಹಾಗೂ ಬಿ.ಎಸ್. ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿದಲ್ಲಿ, ತಿಪಟೂರು ಉಪವಿಭಾಗದ
ಪೊಲೀಸ್ ಉಪಾಧೀಕ್ಷಕರವರಾದ ಡಿ.ಎಸ್.ಪಿ ವಿನಾಯಕ ಶೆಟಗೇರಿ ಮಾರ್ಗಸೂಚನೆ ಮೇರೆಗೆ ತಿಪಟೂರು ನಗರ ಪೋಲೀಸ್ ಠಾಣೆಯ ಅಧಿಕಾರಿಗಳಾದ ಪಿ.ಐ ವೆಂಕಟೇಶ್.ಸಿ, ಪಿ.ಎಸ್.ಐ ಡಿ.ಕೃಷ್ಣಪ್ಪ ಮತ್ತುಸಿಬ್ಬಂದಿಯವರಾದ ಲೋಕೇಶ್ ಜಿ.ಆರ್ ಮತ್ತು ಸಾಗರ್ ಅಂಬಿಗೇರ್, ಚನ್ನೇಗೌಡ, ಯತೀಶ್ ಕುಮಾರ್ ರವರು ಕರ್ಯ ಚರಣೆಯ ಮಾಡಿ ಪ್ರಕರಣ ದಾಖಲಾದ ಎರಡೇ ದಿನದಲ್ಲಿ ದಿನಾಂಕ: ೦3/೦2/2025 ರಂದು ಆರೋಪಿತನಾದ ಸುದೀಪ್ ಗಣೇಶ್ ಬಿನ್ ಗಂಗರಾಜು ಗಣೇಶ್, 25 ರ್ಷಲ, ಗಾರೆ ಕೆಲಸ, 6ನೇ ಕ್ರಾಸ್, ಎನ್.ಆರ್ ಕಾಲೋನಿ, ಕೋತಿತೋಪು, ತುಮಕೂರು ಟೌನ್ ಈತನನ್ನು ಬಂದಿಸಿದ್ದು, ಆರೋಪಿಯು ಕೊರಟಗೆರೆ ನಗರದಲ್ಲಿ ಕೆ.ಎ-4೦ ಆರ್-1930 ನೇ ಹೀರೋ ಹೊಂಡಾ ಮೋಟಾರ್ ಸೈಕಲ್ ಅನ್ನು ಕಳ್ಳತನ ಮಾಡಿಕೊಂಡು ತಿಪಟೂರಿಗೆ ಬಂದು ತಿಪಟೂರಿನ ಸಿ.ಕೆ ಮೊಬೈಲ್ ಅಂಗಡಿಯ ರೋಲಿಂಗ್ ಶೆಟರ್ ಅನ್ನು ಹಾರೆಯಿಂದ ಮೀಟಿ ಒಳಗಡೆ ಹೋಗಿ ಕಳ್ಳತನ ಮಾಡಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ. ಆರೋಪಿ ಕಡೆಯಿಂದ ಕಳವು ಮಾಡಿದ್ದ 16೦೦೦/- ರೂ ನಗದು ಹಣ ಸುಮಾರು 75೦೦೦/- ರೂ ಬೆಲಬಾಳುವ 6 Android ಮೊಬೈಲ್ಗಳು, ಒಂದು ಪವರ್ ಬ್ಯಾಂಕ್, ಒಂದು ಬ್ಲೂಟೂತ್, ಒಂದು ಚರ್ಜ ರ್, ಸುಮಾರು 4 ಅಡಿ ಉದ್ದದ ಕಬ್ಬಿಣದ ಹಾರೆ, ಹಾಗೂ ಕೃತ್ಯಕ್ಕೆ ಬಳಿಸಿರುವ ಸುಮಾರು 5೦೦೦೦/- ರೂ ಬೆಲೆ ಬಾಳುವ ಕೆ.ಎ-4೦ ಆರ್-1930 ನೇ ಹೀರೋ ಹೊಂಡಾ ಸ್ಪೆಂಡರ್ ಬೈಕ್ ಅನ್ನು ಅಮಾನತ್ತು ಪಡಿಸಿಕೊಂಡು ಘನ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶ ಮಾಡಿರುತ್ತದೆ. ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯಪೊಲೀಸ್ ಅಧೀಕ್ಷಕರಾದ ಕೆ.ವಿ.ಅಶೋಕ್, ಐ.ಪಿ.ಎಸ್ ರವರು ಪ್ರಶಂಸಿರುತ್ತಾರೆ.