ತಿಪಟೂರು: ತುಮಕೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುವ ಸ್ಥಳದಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸದೇಯಿದ್ದ ಕಾರಣ ಮೂರು ದಿನಗಳಲ್ಲಿ ನಾಲ್ಕು ರಸ್ತೆ ಅಪಘಾತಗಳು ಸಂಭವಿಸಿದ ಘಟನೆ ತಾಲ್ಲೂಕಿನ ಕಸಬಾ ಹೋಬಳಿಯ ಮತ್ತಿಹಳ್ಳಿ ಗೇಟ್ ಬಳಿ ನಡೆಯುತ್ತಿದೆ.
ಅಭಿವೃದ್ಧಿಗೆ ವೇಗ ನೀಡುವ ದೃಷ್ಟಿಯಲ್ಲಿ ರಸ್ತೆಗಳ ಅಗಲೀಕರಣ ಕಾಮಗಾರಿಯು ನಡೆಯುತ್ತಿದ್ದು ರಸ್ತೆಗಳಿಗೆ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸದೆ ರಸ್ತೆಗಳ ಮೇಲೆ ಉಬ್ಬುಗಳನ್ನು ಅಳವಡಿಸಿ, ಅವುUಳಿಗೆ ಬಣ್ಣಗಳನ್ನು ಹಾಕದ ಪರಿಣಾಮ ವೇಗವಾಗಿ ಬರುವ ವಾಹನಗಳು ಮುಂದಿನ ವಾಹನಗಳಿಗೆ ಹಾಗೂ ಪಕ್ಕದಲ್ಲಿರುವ ರಸ್ತೆಯ ವಿಭಜಕಗಳಿಗೆ ಡಿಕ್ಕಿ ಹೊಡೆಯುತ್ತಿದ್ದು, ಹಲವಾರು ವಾಹನ ಸಂಚಾರ ಮಾಡುವವರು ರಸ್ತೆಯಲ್ಲಿ ಬಿದ್ದು ಆಸ್ವತ್ರೆಗೆ ದಾಖಾಲು ಆಗುತ್ತಿದ್ದರೂ ಸಹ ರಸ್ತೆ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಸಾರ್ವಜನಿಕರ ಜೀವದ ಮೇಲೆ ಚೆಲ್ಲಾಟವಾಡುತ್ತಿದ್ದಾರೆ.
ಮತ್ತಿಹಳ್ಳಿ ಗ್ರಾಮದ ಗೇಟ್ ಅರಸೀಕೆರೆ ಹಾಗೂ ತಿಪಟೂರಿನಿಂದ ಬರುವ ಮಾರ್ಗ ಮಧ್ಯೆಯಿದ್ದು ಎರಡು ಭಾಗದ ರಸ್ತೆಗಳು ಇಳಿಮುಖವಾಗಿದ್ದು ಗೇಟ್ ತಗ್ಗಿನಲ್ಲಿದ್ದು ಭಾರೀ ಗಾತ್ರದ ವಾಹನಗಳು ಇಳಿಮುಖವಾಗಿ ವೇಗವಾಗಿ ಸಂಚರಿಸುತ್ತವೆ. ಗೇಟ್ ಬಳಿ ಗ್ರಾಮಸ್ಥರು ತಮ್ಮ ಜಮೀನುಗಳಿಗೆ ಸಂಚರಿಸಲು ರಸ್ತೆಯ ಬಳಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ತಮ್ಮ ಜಾನುವಾರುಗಳನ್ನು ದಾಟಿಸಲು ಸಾದ್ಯವಾಗದೆ ಪರದಾಡುತ್ತಿದ್ದಾರೆ.
ಅಭಿವೃದ್ಧಿ ಹೆಸರಿನಲ್ಲಿ ರಸ್ತೆಗಳ ಕಾಮಗಾರಿಗೆ ಹೆಚ್ಚು ಒತ್ತು ನೀಡಲಾಗಿದು, ಅದರಂತೆ ರಸ್ತೆಯ ಅಗಲೀಕರಣದ ಪಕ್ಕದಲ್ಲಿರುವ ಗ್ರಾಮಗಳ ಸಾರ್ವಜನಿಕರ ಹಾಗೂ ಜಾನುವಾರುಗಳ ಸಂಚಾರಕ್ಕೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಡಬೇಕಾಗಿರುವುದು ಮೊದಲ ಕರ್ತವ್ಯ. ಆದರೆ ಇದಾಗುತ್ತಿಲ್ಲ. ಸುಖಾಸುಮ್ಮನೆ ಸ್ಥಳಿಯರಿಗೆ ತೊಂದರೆ ನೀಡುವುದು ಸೂಕ್ತವಲ್ಲ. ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ವಂದಿಸುತ್ತಿಲ್ಲ. ಮುಂದಿನ ದಿನದಲ್ಲಿ ಗ್ರಾಮಸ್ಥರ ಜೊತೆಗೂಡಿ ಸೂಕ್ತ ವ್ಯವಸ್ಥೆಗಾಗಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾ.ಪಂ ಸದಸ್ಯ ಹರೀಶ್ ತಿಳಿಸಿದ್ದಾರೆ.