ತಿಪಟೂರು : ಕಳೆದ 6 ವರ್ಷದ ಹಿಂದೆಯೇ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಕಾಮಗಾರಿಯನ್ನು ಕೈಗೊಳ್ಳದೇ ಪರಿಹಾರ ನೀಡಿದೆ ಸ್ಥಳೀಯವಾಗಿ ಅಭಿವೃದ್ಧಿ ಕಾರ್ಯಗಳು ನಡೆಯದೇ ಇರುವ ಕಾರಣದಿಂದ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ವಾಪಸ್ ನೀಡಬೇಕೇಂದು ಆಗ್ರಹಿಸಿ ಕಿಬ್ಬನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ಕಿಬ್ಬನಹಳ್ಳಿ ಗ್ರಾಮದ ಸರ್ವೇ ನಂ 19/1ಎ1 ರಿಂದ ಪ್ರಾರಂಭವಾಗಿ ಸುಮಾರು 122 ಮಂದಿಯ 5.68 ಹೇಕ್ಟರ್, 30 ನಿವೇಶನ, ಮೂರು ದೇವಾಸ್ಥಾನ ಸೇರಿದಂತೆ 2.5 ಕಿ.ಮೀ ಭೂಮಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಅಗಲೀಕರಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು.
ತುಮಕೂರಿನಿಂದ ಶಿವಮೊಗ್ಗದವರೆಗೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು 2018 ರಲ್ಲಿ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಸ್ವಾಧೀನ ಪಡಿಸಿಕೊಂಡಿರುವ ಬಗ್ಗೆ ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಸಿ ನೋಟಿಸ್ ನೀಡಿದ್ದರು. ಆದರೆ ಇಲ್ಲಿಯವರೆವಿಗೂ ಯಾವುದೇ ಕಾರ್ಯಗಳು ಆಗದೇ ಪರಿಹಾರವನ್ನು ನೀಡಿದೇ ಇರುವುದು ಜನರಿಗೆ ತೊಂದರೆ ಆಗಿದ್ದು ಕೂಡಲೇ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು ಹಿಂದಿರುಗಿಸುವOತೆ ಆಗ್ರಹಿಸಿದರು.
ಧರಣಿ ನಿರತ ರೈತರು ಮಾತನಾಡಿ ಕಳೆದ 2017-18ನೇ ಸಾಲಿನಲ್ಲಿ ತುಮಕೂರಿನಿಂದ ಶಿವಮೊಗ್ಗದವರೆಗೆ ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಅಗಲೀಕರಣ ಕಾಮಗಾರಿಗಾಗಿ 26.07.2017 ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅಧಿಸೂಚನೆ ಮಾಡಿದ್ದು, ರೈತರಿಗೆ 11.09.2017ರಲ್ಲಿ ತಮ್ಮ ಜಮೀನಿನ ದಾಖಾಲೆಗಳನ್ನು ಕಚೇರಿಗೆ ಸಲ್ಲಿಸುವಂತೆ ನೋಟೀಸ್ ನೀಡಿರುತ್ತಾರೆ. ತದ ನಂತರ 300 ಕ್ಕೂ ಹೆಚ್ಚು ಹಲಸಿನ ಮರಗಳು, 50ಕ್ಕೂ ಹೆಚ್ಚು ಬೃಹತ್ ಆಲದಮರಗಳು ಸೇರಿದಂತೆ ಇತರೆ ಮರಗಳನ್ನು ಕಡಿದು ಹಾಕುವುದರ ಜೊತೆಗೆ ಬೆಸ್ಕಾಂ ಇಲಾಖೆಯಿಂದ ರಸ್ತೆ ವಿಸ್ತೀರ್ಣಕ್ಕೆ ತಕ್ಕಂತೆ ವಿದ್ಯುತ್ ಕಂಬಗಳನ್ನು ವಿಸ್ತರಿಸಿ ರೈತರ ಜಮೀನುಗಳಿಗೆ ಹಾಕಲಾಗಿದೆ.
ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಸ್ಥಳೀಯರ 122ಕ್ಕೂ ಹೆಚ್ಚು ಮಂದಿಯ ಭೂಮಿ, ನಿವೇಶನ, ಮನೆ ಎಲ್ಲವನ್ನು ಬಿಟ್ಟು ಬೇರೆಡೆಗೆ ಸ್ಥಳಾಂತರ ಆಗಬೇಕಿದೆ. ಆದರೆ ಕಳೆದ 6 ವರ್ಷದಿಂದಲೂ ಯಾವುದೇ ಅಧಿಕಾರಿಗಳು ಕೆ.ಬಿ.ಕ್ರಾಸ್‌ನಿಂದ ಕಿಬ್ಬನಹಳ್ಳಿ ಗ್ರಾಮದ ಕಡೆಯವರೆಗೆ ಸುಮಾರು 2.5 ಕಿ.ಮೀ. ಉದ್ದಕ್ಕೆ ಇರುವ ರಸ್ತೆಯಲ್ಲಿ ಅಭಿವೃದ್ಧಿ ಕಾರ್ಯ ಮಾಡದೇ ನಿಶ್ಕಿçಯವನ್ನಾಗಿಸಿದ್ದಾರೆ. ಇದರಿಂದಾಗಿ ಸ್ಥಳೀಯರು ಭೂಮಿಯನ್ನು ಬಿಡಲು ಸಾಧ್ಯವಾಗದೇ, ಅಭಿವೃದ್ಧಿ ಮಾಡಲು ಸಾಧ್ಯವಾಗದೇ ಪರಿಹಾರವು ಇಲ್ಲದೆ ನರಳಾಡುತ್ತಿದ್ದಾರೆ. ಅದ್ದರಿಂದ ಸ್ಥಳೀಯರೆಲ್ಲರೂ ಒಂದು ನಿರ್ಧಾರಕ್ಕೆ ಬಂದಿದ್ದು ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ವಾಪಸ್ಸು ನೀಡಬೇಕೇಂದು ಒತ್ತಾಯಿಸುತ್ತಿದ್ದಾರೆ.
ಅಲ್ಲದೇ ಕಳೆದ 6 ವರ್ಷಗಳಲ್ಲಿ ಹಲವು ಬಾರಿ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲಿನ ಅಧಿಕಾರಿಗಳು ಉಡಾಫೆ ಮಾತುಗಳನ್ನಾಡುತ್ತಾ ಅವಮಾನಿಸುತ್ತಾರೆ. ಈ ಸಂಬOಧ ಯೋಜನಾ ನಿರ್ದೇಶಕರು, ಪ್ರಾದೇಶಿಕ ಅಧಿಕಾರಿಗಳು, ಭಾರತ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅದ್ದರಿಂದ ಸಂತ್ರಸ್ತರಿOದ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ವಾಪಸ್ಸು ನೀಡುವ ಜೊತೆಗೆ 6 ವರ್ಷಕ್ಕೆ ಪರಿಹಾರದ ಮೊತ್ತವನ್ನು ನೀಡಬೇಕು ಎಂದು ಆಗ್ರಹಿಸಿದರು.
ಶಿವಮೂರ್ತಿ ಬಿಳಿಗೆರೆಪಾಳ್ಯ ಮಾತನಾಡಿ ಕಳೆದ 6 ವರ್ಷದಿಂದ ನಮ್ಮ ಜಮೀನಿನಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ. ಪಂಚಾಯತಿಗೆ ಹೋಗಿ ಯಾವುದಾದರು ಸರ್ಕಾರಿ ಯೋಜನೆ ಫಲಾನುಭವಿ ಆಗಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್, ಸಂಘ-ಸOಸ್ಥೆಗಳಲ್ಲಿ ಸಾಲ ಸೌಲಭ್ಯವೂ ದೊರಕುತ್ತಿಲ್ಲ. ಇದರಿಂದಾಗಿ ಜೀವನ ನಿರ್ವಹಣೆ ತುಂಬಾ ಕಷ್ಟ ಸಾಧ್ಯವಾಗಿದೆ. ಇನ್ನೂ ಮನೆಗಳಿಗೆ ಸುಣ್ಣ-ಬಣ್ಣ ಕಂಡು ವರ್ಷಗಳೇ ಕಳೆದಿವೆ ರಸ್ತೆಯಿಂದ ನಮ್ಮ ಬದುಕು ಅತಂತ್ರವಾಗಿದೆ. ಯೋಜನೆಯ ಎಲ್ಲರಿಗೂ ಪರಿಹಾರ ಸಿಕ್ಕು ವರ್ಷಗಳೇ ಆಗಿವೆ ಅದರೆ ಕಿಬ್ಬನಹಳ್ಳಿ ಜನರಿಗೆ ಮಾತ್ರ ಏಕೆ ತಾರತಮ್ಯ ಎಂದು ಪ್ರಶ್ನಿಸಿದರು.
ಪ್ರತಿಭಟನಾ ನಿರತ ರೈತರೊಂದಿಗೆ ಮಾತನಾಡಿದ ವಿಶೇಷ ಭೂಸ್ವಾಧೀನಧಿಕಾರಿ ಧರ್ಮಪಾಲ್, ಬಿಳಿಗೆರೆ ಅಮಾನಿಕೆರೆ ಸರ್ವೆ ನಂ ನಿಂದ ಕೆ.ಬಿ ಕ್ರಾಸ್ ಮಯೂರ ಹೊಟೇಲ್‌ವರೆಗೆ 2.5 ಕಿ.ಮೀ ಭೂಸ್ವಾಧೀನದ ಪರಿಹಾರ 100.83 ಕೋಟಿಯಿಂದ 125.9 ಕೋಟಿಯವರೆಗೆ ರೈತರಿಗೆ ಕೊಡಬೇಕಾಗುತ್ತದೆ. ಪರಿಹಾರ ಮೊತ್ತ ಹೆಚ್ಚು ವೆಚ್ಚದಾಯಕವಾಗಿದ್ದು ಆದ್ದರಿಂದ ಹಾಲಿ ರಸ್ತೆಯಲ್ಲಿಯೇ ನಾಲ್ಕು ಪಥದ ರಸ್ತೆಯ ನಿರ್ಮಾಣದ ಕಾಮಗಾರಿಯ ಯೊಜನೆಯಾಗಿ ರಸ್ತೆ ನಿರ್ಮಿಸಲು ಮರು ಯೋಜನೆ ಪ್ರಸ್ತಾಪನೆಯನ್ನು ಮಾಡಲಾಗಿದೆ. ಪ್ರಸ್ತಾವನೆ ಅನುಮೋದನೆ ನಂತರ ಸದರಿ ಭೂಸ್ವಾಧೀನ ಪ್ರಕ್ರೀಯೆ ಕೈಬಿಡಲಾಗಿದೆ ಎಂದು ರೈತರಿಗೆ ತಿಳಿಸಿದರು. ತದನಂತರ ಹಾಗೂ ಜಮೀನಿಗಳಿಗೆ ಡಿನೋಟಿಫೇಕಷನ್ ಮಾಡಿ ಕೊಡಲಾಗುವುದು ಮತ್ತು ಸಂಬOಧಿಸಿದ ಇಲಾಖೆಗಳಿಗೆ ಪತ್ರ ವವ್ಯಹಾರ ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಶಿವಮೂರ್ತಿ, ಶಶಿಧರ್, ಸ್ವಾಮಿ, ಲೋಕೇಶ್, ಅಭಿಷೇಕ್, ಸೌಭಾಗ್ಯ, ಕಮಲ, ವೀಣಾ, ಓಂಕಾರಮ್ಮ, ಮಾಲಮ್ಮ, ಸೇರಿದಂತೆ ನೂರಾರು ರೈತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಅನೂಪ್ ಶರ್ಮಾ, ಇಂಜಿನಿಯರ್ ಯಶಸ್ವಿನಿ, ಚೇತನ ಹಾಜರಿದ್ದು, ಪೋಲೀಸ್ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ ಪ್ರತಿಭಟನೆ ಹಾಗೂ ಧರಣಿಗೆ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಿದ್ದರು.