ತಿರುಪತಿ ದರ್ಶನ ಆರೋಪ : ಕನ್ನಡಿಗರೂ ಸೇರಿ 700ಕ್ಕೂ ಹೆಚ್ಚು ಭಕ್ತರನ್ನ ಶೆಡ್ನಲ್ಲಿ ಕೂಡಿ ಹಾಕಿದ ಟಿಟಿಡಿ..?

ತಿರುಪತಿ ದರ್ಶನ ಆರೋಪ : ಕನ್ನಡಿಗರೂ ಸೇರಿ 700ಕ್ಕೂ ಹೆಚ್ಚು ಭಕ್ತರನ್ನ ಶೆಡ್ನಲ್ಲಿ ಕೂಡಿ ಹಾಕಿದ ಟಿಟಿಡಿ..?

ಹೈದರಾಬಾದ್: ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ತೆರಳಿದ್ದ 700ಕ್ಕೂ ಹೆಚ್ಚು ಭಕ್ತರನ್ನು ಕಳೆದ 15 ಗಂಟೆಗಳಿಂದ ಶೆಡ್ನಲ್ಲಿ ಕೂಡಿ ಹಾಕಿರುವ ಆರೋಪ ಕೇಳಿ ಬಂದಿದೆ.

ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲೆಂದು ನಿನ್ನೆ ಸಂಜೆ 6 ಗಂಟೆಯಿಂದ ಭಕ್ತಾದಿಗಳು ಕ್ಯೂನಲ್ಲಿ ನಿಂತಿದ್ದರು. ಆದರೆ ರಾತ್ರಿ 9 ಗಂಟೆಗೆ ಕ್ಯೂನಲ್ಲಿ ನಿಂತವರನ್ನು ಟಿಟಿಡಿ ಮಂಡಳಿ ಶೆಡ್ ಹಾಕಿ ಲಾಕ್ ಮಾಡಿ ಬೆಳಗ್ಗೆ ದರ್ಶನಕ್ಕೆ ವ್ಯವಸ್ಥೆ ಮಾಡುವುದಾಗಿ ಹೇಳಿದೆ ಎನ್ನಲಾಗಿದೆ. ಇದರಲ್ಲಿ ಕನ್ನಡಿಗರು ಕೂಡ ಸೇರಿದ್ದಾರೆ. ಆದರೆ ಇದುವರೆಗೂ ಶೆಡ್ನಲ್ಲಿ ಇದ್ದವರನ್ನು ಹೊರಗೆ ಬಿಟ್ಟಿಲ್ಲ ಎಂದು ಹೇಳಲಾಗುತ್ತಿದೆ.

ರಾತ್ರಿಯಿಂದಲೂ ಒಳಗೆ ಕೂಡಿ ಹಾಕಿದ್ದರಿಂದ ರಾತ್ರಿ ಮಲಗಲು ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲದೇ ಮಹಿಳೆಯರು, ಮಕ್ಕಳು, ವೃದ್ಧರು ಪರದಾಡುತ್ತಿದ್ದಾರೆ. ರಾತ್ರಿ ನಿದ್ದೆ ಇಲ್ಲದೇ ಶೆಡ್ನಲ್ಲೇ 700ಕ್ಕೂ ಹೆಚ್ಚು ಭಕ್ತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸದ್ಯ ಈ ಸಂಬಂಧ ಸಹಾಯ ಕೋರಿ‌ ಭಕ್ತಾದಿಗಳು ಬೇಸರ ಹೊರಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *