ಮುಡಾ ಸಂಕಷ್ಟದ ಹೊತ್ತಲ್ಲೇ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಸಿಎಂ

ಮೈಸೂರು: ಮುಡಾ ಹಗರಣ ಸಂಕಷ್ಟದ ನಡುವೆ ಸಿಎಂ ಸಿದ್ದರಾಮಯ್ಯ ಅವರು ನಾಡದೇವತೆ ಚಾಮುಂಡೇಶ್ವರಿಯ ಮೊರೆ ಹೋಗಿದ್ದಾರೆ. ಮೈಸೂರಿಗೆ ಮಂಗಳವಾರ ಭೇಟಿ ನೀಡಿದ ಸಿಎಂ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಚಾಮುಂಡಿಬೆಟ್ಟಕ್ಕೆ ಸಿಎಂ ಭೇಟಿ ಹಿನ್ನೆಲೆ ಬೆಟ್ಟದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ದೇವಾಲಯ ಮುಂಭಾಗ ಯಾರೂ ಓಡಾಡದಂತೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಭದ್ರತೆಗೆಗಾಗಿ ಬೆಟ್ಟದಲ್ಲಿ ಸಾಕಷ್ಟು ಪೊಲೀಸರ ನಿಯೋಜನೆ ಮಾಡಲಾಗಿತ್ತು.

ಬಳಿಕ ಸಿಎಂ, ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. 23 ದಿನಗಳಲ್ಲಿ ಎರಡನೇ ಬಾರಿಗೆ ಚಾಮುಂಡಿ ದರ್ಶನ ಮಾಡಿದರು. ಈಡುಗಾಯಿ ಒಡೆದು ನಾಡದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತಂದೆ ಜೊತೆ ಆಗಮಿಸಿದ್ದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದರು

ಸಿದ್ದರಾಮಯ್ಯ ಹೆಸರಿನಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಯಿತು. ಪೂಜೆ ಬಳಿಕ ಸಿದ್ದರಾಮಯ್ಯಗೆ ಮಂಗಳಾರತಿ ಕೊಡಲಾಯಿತು. ಸಿದ್ದರಾಮಯ್ಯ ಹಣೆಗೆ ಅರ್ಚಕರು ಕುಂಕುಮ ಇಟ್ಟರು.ಬಳಿಕ ಚಾಮುಂಡೇಶ್ವರಿ ಪಾದುಕೆಗೆ ಸಿಎಂ ನಮಸ್ಕರಿಸಿ ಭಕ್ತಿಯಿಂದ ಪ್ರಾರ್ಥಿಸಿದರು. ನಂತರ ಗಣಪತಿ, ಆಂಜನೇಯ ಸೇರಿದಂತೆ ಇತರ ದೇವರಲ್ಲೂ ಪ್ರಾರ್ಥನೆ ಮಾಡಿದರು.ಬಳಿಕ ದೇವಿಗೆ ಈಡುಗಾಯಿ ಹೊಡೆದ ಸಿದ್ದರಾಮಯ್ಯ.

Leave a Reply

Your email address will not be published. Required fields are marked *