ಬ್ರಾಹ್ಮಿ ಅಥವಾ ಒಂದೆಲಗ ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ. ಮಾತ್ರವಲ್ಲ ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹಲವಾರು ಗಂಭೀರ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಅದಕ್ಕಾಗಿಯೇ ಆರೋಗ್ಯ ತಜ್ಞರು ಇದನ್ನು ಭೂಮಿ ಮೇಲೆ ಸಿಗುವ ಅಮೃತ ಎಂದು ಕರೆಯುತ್ತಾರೆ. ಇದು ನಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ನೂರಕ್ಕೂ ಹೆಚ್ಚು ಕಾಯಿಲೆಗಳನ್ನು ವಾಸಿ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ. ಅದರಲ್ಲಿಯೂ ಇದನ್ನು ಉಪಯೋಗಿಸಿ ಮಾಡುವ ತುಂಬುಳಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮಾತ್ರೆಗಳಿಲ್ಲದೆ ಆರೋಗ್ಯವನ್ನು ಸರಿಪಡಿಸಿಕೊಳ್ಳಬಹುದು. ಹಾಗಾದರೆ ಈ ಸ್ಟೋರಿಯಲ್ಲಿ ಬ್ರಾಹ್ಮಿಯ ಮತ್ತಷ್ಟು ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ.
ಬ್ರಾಹ್ಮಿ ಅಥವಾ ಒಂದೆಲಗದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ನಮ್ಮ ಹಿರಿಯರು ಇದನ್ನು ಯಥೇಚ್ಛವಾಗಿ ಬಳಕೆ ಮಾಡುತ್ತಿದ್ದರು ಅದಕ್ಕೆ ಕಾರಣ ಇದರಲ್ಲಿರುವ ಔಷಧೀಯ ಗುಣಗಳು. ಅದಕ್ಕಾಗಿಯೇ ಇದನ್ನು ಈಗಲೂ ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ. ಇದೊಂದು ಔಷಧೀಯ ಸಸ್ಯ ಮಾತ್ರವಲ್ಲ ಸರಸ್ವತಿಯ ಕೃಪಾಕಟಾಕ್ಷ ಹೊಂದಿರುವ ಗಿಡವಾಗಿದೆ. ಅದಕ್ಕಾಗಿಯೇ ಆರೋಗ್ಯ ತಜ್ಞರು ಇದನ್ನು ಭೂಮಿ ಮೇಲೆ ಸಿಗುವ ಅಮೃತ ಎಂದು ಕರೆಯುತ್ತಾರೆ. ಇದು ಬುದ್ಧಿಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ನೂರಕ್ಕೂ ಹೆಚ್ಚು ಕಾಯಿಲೆಗಳನ್ನು ವಾಸಿ ಮಾಡುವಂತಹ ಸಾಮರ್ಥ್ಯವನ್ನು ಒಳಗೊಂಡಿದೆ. ಅದರಲ್ಲಿಯೂ ಇದರ ತಂಬುಳಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮಾತ್ರೆಗಳಿಲ್ಲದೆ ಆರೋಗ್ಯವನ್ನು ಸರಿಪಡಿಸಿಕೊಳ್ಳಬಹುದು. ಹಾಗಾದರೆ ಈ ಸ್ಟೋರಿಯಲ್ಲಿ ಬ್ರಾಹ್ಮಿಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ.
- ಸಾಮಾನ್ಯವಾಗಿ ಬ್ರಾಹ್ಮಿ ನಮ್ಮ ಅರಿವಿನ ಸಾಮರ್ಥ್ಯವನ್ನು ಸುಧಾರಿಸಲು, ಬುದ್ಧಿಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಪ್ರತಿಯೊಂದು ಕೆಲಸದಲ್ಲಿಯೂ ಏಕಾಗ್ರತೆ ಇರುವಂತೆ ಮಾಡುತ್ತದೆ. ಅದರಲ್ಲಿಯೂ ವಿದ್ಯಾರ್ಥಿಗಳು ಇದರ ಸೇವನೆ ಮಾಡುವುದರಿಂದ ಸ್ಮರಣಶಕ್ತಿ ದ್ವಿಗುಣಗೊಳ್ಳುತ್ತದೆ. ಒತ್ತಡ ಕಡಿಮೆಯಾಗುತ್ತದೆ.
- ಬ್ರಾಹ್ಮಿ ಎಂಬ ಈ ಗಿಡ ಮೂಲಿಕೆ ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದು, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
- ತೂಕ ಕಡಿಮೆ ಮಾಡಿಕೊಳ್ಳಲು ಬಯಸುತ್ತಿರುವವರಿಗೆ ಬ್ರಾಹ್ಮಿ ಗಿಡಮೂಲಿಕೆ ಉತ್ತಮ ಆಯ್ಕೆಯಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಮೂಲಕ ಹಸಿವನ್ನು ನಿಯಂತ್ರಿಸುತ್ತದೆ, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬ್ರಾಹ್ಮಿ ಬಹಳ ಪರಿಣಾಮಕಾರಿಯಾಗಿದೆ. ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಯಕೃತ್ತಿನ ಆರೋಗ್ಯಕ್ಕೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.
- ಮಧುಮೇಹವನ್ನು ನಿಯಂತ್ರಿಸುವಲ್ಲಿ ಬ್ರಾಹ್ಮಿ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಈ ಔಷಧಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಬ್ರಾಹ್ಮಿ ಅಥವಾ ಒಂದೆಲಗ ಹೆಚ್ಚಿನ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಸುಧಾರಿಸುತ್ತದೆ.
- ಬ್ರಾಹ್ಮಿಯನ್ನು ವಿವಿಧ ರೂಪದಲ್ಲಿ ಸೇವಿಸುವುದರಿಂದ ಮಲಬದ್ಧತೆ ಮತ್ತು ಅಜೀರ್ಣದಿಂದ ಪರಿಹಾರ ದೊರೆಯುತ್ತದೆ.
- ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಲ್ಲಿ ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವಲ್ಲಿ ಬ್ರಾಹ್ಮಿ ಬಹಳ ಪರಿಣಾಮಕಾರಿ ಔಷಧವಾಗಿದೆ.
- ಬ್ರಾಹ್ಮಿ ಗಿಡಮೂಲಿಕೆಯು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಮಾತ್ರವಲ್ಲ ಇದನ್ನು ನಿಯಮಿತವಾಗಿ ಬಳಸುವುದರಿಂದ ಮೊಡವೆಗಳು, ಸೋರಿಯಾಸಿಸ್ ಮತ್ತು ನಸುಕಂದು ಮಚ್ಚೆಗಳು ಕಡಿಮೆಯಾಗುತ್ತವೆ. ಸುಕ್ಕುಗಳು ಸಹ ಮಾಯವಾಗುತ್ತವೆ.
ಬ್ರಾಹ್ಮಿ ಅಥವಾ ಒಂದೆಲಗದ ತಂಬುಳಿ ಮಾಡಲು ಬೇಕಾಗುವ ಸಾಮಗ್ರಿಗಳು
- ಒಂದೆಲಗ (ಬ್ರಾಹ್ಮಿ) ಸೊಪ್ಪು: 1 ಕಪ್ (ಬೇರಿನ ಸಮೇತ ತೆಗೆದು ಚೆನ್ನಾಗಿ ತೊಳೆದಿಟ್ಟುಕೊಳ್ಳಿ)
- ತೆಂಗಿನಕಾಯಿ ತುರಿ: ಅರ್ಧ ಕಪ್
- ಜೀರಿಗೆ: 1 ಚಮಚ
- ಹಸಿಮೆಣಸಿನಕಾಯಿ: 2- 3 (ಖಾರಕ್ಕೆ ತಕ್ಕಂತೆ)ಕಾಳುಮೆಣಸು: 2- 3
- ಮೊಸರು: 1 ಕಪ್
- ಉಪ್ಪು: ರುಚಿಗೆ ತಕ್ಕಷ್ಟು
- ಬೆಲ್ಲ: ಚಿಟಿಕೆ
- ಒಗ್ಗರಣೆಗೆ: ಎಣ್ಣೆ, ಸಾಸಿವೆ, 1 ಒಣಮೆಣಸಿನ ಕಾಯಿ, ಕರಿಬೇವು ಸ್ವಲ್ಪ
ತಂಬುಳಿ ಮಾಡುವ ವಿಧಾನ:
ಚೆನ್ನಾಗಿ ತೊಳೆದಿಟ್ಟುಕೊಂಡ ಒಂದೆಲಗದ ಸೊಪ್ಪನ್ನು ರುಬ್ಬುವ ಕಲ್ಲು ಅಥವಾ ಮಿಕ್ಸಿಗೆ ಹಾಕಿ ಬಳಿಕ ಅದಕ್ಕೆ ತೆಂಗಿನಕಾಯಿ ತುರಿ, ಜೀರಿಗೆ, ಹಸಿಮೆಣಸಿನಕಾಯಿ ಮತ್ತು ಕಾಳುಮೆಣಸು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಒಂದು ಪಾತ್ರೆಗೆ ರುಬ್ಬಿದ ಮಿಶ್ರಣವನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಸೇರಿಸಿ, ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಒಣಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ಮಾಡಿ, ಇದನ್ನು ತಂಬುಳಿಗೆ ಸೇರಿಸಿಕೊಂಡರೆ ರುಚಿಕರವಾದ ಬ್ರಾಹ್ಮಿ ತಂಬುಳಿ ಸವಿಯಲು ಸಿದ್ದವಾಗುತ್ತದೆ ಇದನ್ನು ಅನ್ನದ ಜೊತೆ ತಿನ್ನಬಹುದು.
For More Updates Join our WhatsApp Group :
