ರಾಷ್ಟ್ರೀಯ ನಟ್ ದಿನವನ್ನು ವಾರ್ಷಿಕವಾಗಿ ಅಕ್ಟೋಬರ್ 22 ರಂದು ಆಚರಿಸಲಾಗುತ್ತದೆ. ಇದು ಆರೋಗ್ಯಕರ ಮತ್ತು ಪೌಷ್ಟಿಕ ತಿಂಡಿಯನ್ನು ಆಚರಿಸುವ ಆಹಾರ ದಿನವಾಗಿದೆ.
ನಟ್ ಗಳ ಅಥವಾ ಬೀಜಗಳು ಹೆಚ್ಚು ಮೌಲ್ಯಯುತವಾದ ಆಹಾರ ಮತ್ತು ಶಕ್ತಿಯ ಮೂಲವಾಗಿದೆ. ಮಾನವರು ಮತ್ತು ವನ್ಯಜೀವಿಗಳಿಗೆ ಪೋಷಕಾಂಶಗಳ ಪ್ರಾಥಮಿಕ ಮೂಲವಾಗಿದೆ. ನಟ್ ಗಳಲ್ಲಿ ಹೆಚ್ಚಿನವುಗಳನ್ನು ಅಡುಗೆಯಲ್ಲಿ ಬಳಸಲಾಗುತ್ತದೆ, ಹಸಿ, ಮೊಳಕೆಯೊಡೆದ ಅಥವಾ ಹುರಿದ ತಿಂಡಿ ಆಹಾರವಾಗಿ ತಿನ್ನಲಾಗುತ್ತದೆ. ಇನ್ನು ಇದರಿಂದ ಅಡುಗೆಗೆ ಮತ್ತು ಸೌಂದರ್ಯಕ್ಕೆ ಬಳಕೆಯಾಗುವ ಎಣ್ಣೆಗಾಗಿ ಕೂಡ ಬಳಸಿಕೊಳ್ಳಲಾಗುತ್ತದೆ, ಉದಾಹರಣಗೆ ಬಾದಾಮಿ ಎಣ್ಣೆ. ಬೀಜಗಳಲ್ಲಿ ಕಂಡುಬರುವ ಕೊಬ್ಬುಗಳು ಮೊನೊಸಾಚುರೇಟೆಡ್ ಕೊಬ್ಬುಗಳು ಸೇರಿದಂತೆ ಬಹುಪಾಲು ಅಪರ್ಯಾಪ್ತ ಕೊಬ್ಬುಗಳು.
ಅನೇಕ ಬೀಜಗಳು ವಿಟಮಿನ್ E ಮತ್ತು B2 ನ ಅತ್ಯುತ್ತಮ ಮೂಲಗಳಾಗಿವೆ. ಅವು ಪ್ರೋಟೀನ್, ಮೆಗ್ನೀಷಿಯಂ, ಫಾಸ್ಫರಸ್ ಪೊಟ್ಯಾಶಿಯಂ, ಕಾಪರ್ ಮತ್ತು ಸಿಲೆನಿಯಂ ಅಂತಹ ಅಗತ್ಯ ಮಿನರಲ್ಸ್ ಗಳಿಂದ ಸಮೃದ್ಧವಾಗಿವೆ.
ಡ್ರೈ ನಟ್ಸ್ ಅಥವಾ ಕಚ್ಚಾ ರೂಪದಲ್ಲಿ ಬೀಜಗಳು ಹೆಚ್ಚು ಪೌಷ್ಟಿಕಾಂಶದ ಪ್ರಯೋಜನವನ್ನು ಹೊಂದಿರುತ್ತವೆ. ಈ ದಿನವು ನಟ್ಸ್ ಗೆ ಮೀಸಲಿರುವುದರಿಂದ ನಿಮ್ಮ ನೆಚ್ಚಿನ ಡ್ರೈ ನಟ್ಸ್ ತಿನ್ನುವುದರ ಮೂಲಕ ಆಚರಿಸಿ.