ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಳ್ಳಾರಿ ಜೈಲಲ್ಲಿದ್ದ ನಟ ದರ್ಶನ ಅವರು, ಕಳೆದ 131 ದಿನಗಳ ಬಳಿಕ ಇಂದು ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ನಟ ದರ್ಶನವರು ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಬೆಂಗಳೂರಿನ ಸಿಸಿಹೆಚ್ 57 ರ ಜಡ್ಜ್ ಜೈಶಂಕರ್ ಅವರು ಬಳ್ಳಾರಿ ಜಿಲ್ಲೆಯಿಂದ ಬಿಡುಗಡೆ ಮಾಡುವಂತೆ ಆದೇಶ ಪ್ರತಿಯನ್ನು ಇಮೇಲ್ ಮೂಲಕ ರವಾನಿಸಲು ಸೂಚನೆ ನೀಡಿದ್ದಾರೆ. ಹಾಗಾಗಿ ರಿಲೀಸ್ ಕುರಿತಂತೆ ಆದೇಶದ ಪ್ರತಿ ಜೈಲಿನ ಅಧಿಕಾರಿಗಳಿಗೆ ತಲುಪುತ್ತಿದ್ದಂತೆ ನಟ ದರ್ಶನ ಅವರು ಬಿಡುಗಡೆಯಾಗಲಿದ್ದಾರೆ.
ಇದರ ಮಧ್ಯ ನಾಳೆ ನಟ ದರ್ಶನ್ ಪುತ್ರ ವಿನೇಶ್ ನ 17ನೇ ವರ್ಷದ ಹುಟ್ಟುಹಬ್ಬ ಕೂಡ ಇದೆ. ಹಾಗಾಗಿ ನಟ ದರ್ಶನ್ ಇಂದು ಸಂಜೆನೇ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏಕೆಂದರೆ ಕಳೆದ ನಾಲ್ಕು ತಿಂಗಳಿನಿಂದ ವಿನೇಶ್ ತಂದೆ ದರ್ಶನ ಅವರನ್ನು ಬಿಟ್ಟು ಇದ್ದಿದ್ದರಿಂದ ಬಹಳ ನೊಂದುಕೊಂಡಿದ್ದರು. ನಾಳೆ ಪುತ್ರ ವಿನೇಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ನಟ ದರ್ಶನ್ ಅವರು ಸಾಯಂಕಾಲದ ಹೊತ್ತಿಗೆ ಬಿಡುಗಡೆ ಆಗಲಿದ್ದಾರೆ ಎಂದು ತಿಳಿದುಬಂದಿದೆ.