Train Schedule Change: ಹುಬ್ಬಳ್ಳಿ-ಬೆಂಗಳೂರು ನಡುವಿನ ರೈಲು ಸಂಚಾರ ಸಮಯ ಬದಲಾವಣೆ-ಇಲ್ಲಿದೆ ಮಾಹಿತಿ

ಗುಡ್ನ್ಯೂಸ್; 19 ರೈಲುಗಳಲ್ಲಿ ರಿಸರ್ವೇಷನ್ ಇಲ್ಲದೇ ಪ್ರಯಾಣಿಸಿ, ಬೆಂಗಳೂರಿಗೆ ಎಷ್ಟು ಟ್ರೈನ್?

ಬೆಂಗಳೂರು ವಿಭಾಗದ ದೊಡ್ಡಬೆಲೆ-ನಿಡವಂದ ನಿಲ್ದಾಣಗಳ ನಡುವೆ ಅಗತ್ಯ ನಿರ್ವಹಣೆ ಮತ್ತು ಮೂಲಸೌಕರ್ಯ ನವೀಕರಣದ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆ ಹುಬ್ಬಳ್ಳಿ-ಬೆಂಗಳೂರು ನಡುವೆ ಸಂಚರಿಸುವ ಕೆಲ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

* ನವೆಂಬರ್ 10ರಂದು ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 17392 ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಮಾರ್ಗದಲ್ಲಿ 40 ನಿಮಿಷಗಳ ಕಾಲ ನಿಲುಗಡೆಯಾಗಲಿದೆ.

* ನವೆಂಬರ್ 7 ಮತ್ತು 10 ರಂದು ಬೆಂಗಳೂರಿನಿಂದ ಆರಂಭ ಆಗುವ ರೈಲು ಸಂಖ್ಯೆ 07340 ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು ಕೆಎಸ್‌ಆರ್ ಬೆಂಗಳೂರಿನಿಂದ 120 ನಿಮಿಷ ತಡವಾಗಿ ಹೊರಡಲಿದ್ದು, ಮಾರ್ಗದಲ್ಲಿ 40 ನಿಮಿಷಗಳ ಕಾಲ ನಿಲುಗಡೆಯಾಗಲಿದೆ.

*ನವೆಂಬರ್ 8 ಮತ್ತು 11ರಂದು ಬೆಂಗಳೂರಿನಿಂದ ಆರಂಭ ಆಗುವ ರೈಲು ಸಂಖ್ಯೆ 17391 ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನಿಂದ 90 ನಿಮಿಷಗಳ ಕಾಲ ತಡವಾಗಿ ಹೊರಡಲಿದ್ದು, ಮಾರ್ಗದಲ್ಲಿ 40 ನಿಮಿಷಗಳ ಕಾಲ ನಿಲುಗಡೆಯಾಗಲಿದೆ.

ಪ್ರಯಾಗ್‌ರಾಜ್‌ಗೆ ವಿಶೇಷ ರೈಲು

1. ರೈಲು ಸಂಖ್ಯೆ 04131 ಪ್ರಯಾಗ್‌ರಾಜ್-ಎಸ್ಎಂವಿಟಿ ಬೆಂಗಳೂರು ಸಾಪ್ತಾಯಿಕ ಎಕ್ಸ್‌ಪ್ರೆಸ್ ನವೆಂಬರ್ 10ರಿಂದ 17ರ ವರೆಗೆ ಭಾನುವಾರದಂದು ಮಾತ್ರ ಸಂಚಾರ ಮಾಡಲಿದೆ.

2. ರೈಲು ಸಂಖ್ಯೆ 04132 ಎಸ್ಎಂವಿಟಿ ಬೆಂಗಳೂರು-ಪ್ರಯಾಗರಾಜ್ ಸಾಪ್ತಾಯಿಕ ಎಕ್ಸ್‌ಪ್ರೆಸ್ ರೈಲು ನವೆಂಬರ್ 13ರಿಂದ 20ರ ವರೆಗೆ ಬುಧವಾರದಂದು ಮಾತ್ರ ಸಂಚರಿಸಲಿದೆ. ಇನ್ನು ಈ ರೈಲು 2 ಎಸಿ ಸೆಕೆಂಡ್ ಕ್ಲಾಸ್ ಬೋಗಿ, 5 ಎಸಿ ತ್ರಿ ಟೈಯರ್ ಬೋಗಿ, 5 ಎಸಿ-ತ್ರಿ ಟೈಯರ್ ಎಕನಾಮಿಕ್ ಕ್ಲಾಸ್ ಬೋಗಿ, 4 ಸ್ಲೀಪರ್ ಕ್ಲಾಸ್ ಮತ್ತು ಎರಡು ಲಗೇಜ್ ಬ್ರೇಕ್‌ ಮತ್ತು ಜನರಲ್ ಬೋಗಿಗಳು ಸೇರಿದಂತೆ ಪ್ರಸ್ತುತ ಸಂಯೋಜನೆಯು 18 ಬೋಗಿಗಳನ್ನು ಒಳಗೊಂಡಿದೆ.

Leave a Reply

Your email address will not be published. Required fields are marked *