Trending Hotel: ಇದು ಕೋಳಿಯೂ ಅಲ್ಲ, ಕಲ್ಲಿನ ವಿಗ್ರಹವೂ ಅಲ್ಲ! ತನ್ನ ಲುಕ್‌ನಲ್ಲೇ ಗಿನ್ನಿಸ್‌ ಪುಟ ಸೇರಿತು ಈ ವಿಶೇಷ ಹೋಟೆಲ್‌

Trending Hotel: ಇದು ಕೋಳಿಯೂ ಅಲ್ಲ, ಕಲ್ಲಿನ ವಿಗ್ರಹವೂ ಅಲ್ಲ! ತನ್ನ ಲುಕ್ನಲ್ಲೇ ಗಿನ್ನಿಸ್ ಪುಟ ಸೇರಿತು ಈ ವಿಶೇಷ ಹೋಟೆಲ್

ನಾನ್‌ವೆಜ್‌ ಪ್ರಿಯರಿಗೆ ಕೋಳಿ ಅಂದ್ರೆ ಬಹಳ ಇಷ್ಟ. ವಾರದಲ್ಲಿ ಒಂದು ದಿನವಾದ್ರೂ ಹೆಚ್ಚಿನವರು ಮನೆಯಲ್ಲಿ ಕೋಳಿ ಮಾಡೇ ಮಾಡುತ್ತಾರೆ. ಇನ್ನು ಅನೇಕ ನಾನ್‌ವೆಜ್‌ ಹೋಟೆಲ್‌ಗಳಲ್ಲಿ ಕೋಳಿಯಿಂದ ಹಲವಾರು ವಿಧದ ಖಾದ್ಯಗಳನ್ನು ಮಾಡುತ್ತಾರೆ.

ಆದರೆ ನೀವು ಎಂದಾದರೂ ವಿಶ್ವದ ಅತಿದೊಡ್ಡ ಕೋಳಿ ಆಕಾರದ ಕಟ್ಟಡವನ್ನು ನೋಡಿದ್ದೀರಾ? ಹೌದು ಇಲ್ಲೊಂದು ದೊಡ್ಡ ಕಟ್ಟಡವೊಂದಿದೆ. ಇದು ನೋಡಲು ವಿಚಿತ್ರವಾಗಿದೆ. ಏಕೆಂದರೆ ಇದು ಕೋಳಿ ಆಕಾರದಲ್ಲಿರುವ ವಿಶ್ವದ ಅತಿದೊಡ್ಡ ಹೋಟೆಲ್‌.

ಹೌದು, ನಿಮಗೂ ಇದೀಗ ಕೋಳಿ ಆಕಾರದ ಹೋಟೆಲ್‌ ನೋಡ್ಬೇಕಾ? ಹಾಗಿದ್ರೆ ಇದಕ್ಕಾಗಿ ನೀವು ಫಿಲಿಪೈನ್ಸ್‌ಗೆ ಪ್ರಯಾಣಿ ಬೆಳೆಸಬೇಕಾಗುತ್ತದೆ. ಈ ಕಟ್ಟಡವು ವಾಸ್ತುಶಿಲ್ಪ ಮತ್ತು ವಾಸ್ತುಶಿಲ್ಪಿಗಳಾಗಬೇಕೆಂಬ ಆಸಕ್ತಿ ಹೊಂದಿರುವವರಿಗೆ ತುಂಬಾನೇ ಇಷ್ಟವಾಗುತ್ತದೆ.

ಕ್ಯಾಂಪಸ್ಟೊಹಾನ್, ನೀಗ್ರೋಸ್ ಆಕ್ಸಿಡೆಂಟಲ್ನಲ್ಲಿ ನೆಲೆಗೊಂಡಿರುವ ಈ ಬೃಹತ್ ಕಟ್ಟಡ ಕ್ಯಾಂಪಸ್ಟೊಹಾನ್ ಹೈಲ್ಯಾಂಡ್ ರೆಸಾರ್ಟ್‌ನ ಭಾಗವಾಗಿದೆ. ಸದ್ಯ ಇದು ಕೋಳಿಯಾಕಾರದಲ್ಲಿದೆ. ನೋಡಲು ವಿಶಿಷ್ಟವಾಗಿದ್ದು, ಸದ್ಯ ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್‌ನಲ್ಲಿ ಇದು ಗುರುತಿಸಿಕೊಂಡಿದೆ.

ಈ ಕಟ್ಟಡದ ಎತ್ತರ ಸುಮಾರು 115 ಅಡಿ (34.931 ಮೀಟರ್) ಮತ್ತು ಅಗಲ ಸುಮಾರು 40 ಅಡಿ (12.127 ಮೀಟರ್). 92 ಅಡಿ ಉದ್ದದ ಇಂತಹ ಆಕರ್ಷಕ ಕಟ್ಟಡವನ್ನು ನಿರ್ಮಿಸುವುದು ಸಣ್ಣ ಸಾಧನೆಯೇನಲ್ಲ. ಕೋಳಿ ಆಕಾರದ ಈ ಕಟ್ಟಡವು 15 ಕೊಠಡಿಗಳನ್ನು ಹೊಂದಿದ್ದು, ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿದೆ.

ಈ ಕಟ್ಟಡವನ್ನು ನಿರ್ಮಿಸುವ ಕಲ್ಪನೆಯು ರಿಕಾರ್ಡೊ ಕ್ಯಾನೊ ಗ್ವಾಪೊ ಟಾನ್ ಅವರದ್ದಾಗಿದೆ. ಪತ್ನಿ ಖರೀದಿಸಿದ ಭೂಮಿಯಲ್ಲಿ ಈ ದೈತ್ಯ ಕೋಳಿ ಕಟ್ಟಡವನ್ನು ನಿರ್ಮಿಸುವ ಕೆಲಸ ಪ್ರಾರಂಭವಾಯಿತು. ಆರು ತಿಂಗಳ ಯೋಜನೆ ಕುರಿತು ಮಾತನಾಡುತ್ತಾ, ನಿರ್ಮಾಣ ಕಾರ್ಯವು ಜೂನ್ 10, 2023 ರಂದು ಪ್ರಾರಂಭವಾಯಿತು. ಇದು 8 ಸೆಪ್ಟೆಂಬರ್ 2024 ರಂದು ಪೂರ್ಣಗೊಂಡಿತು. ಈ ರಚನೆಯು ಗಿನ್ನೆಸ್ ವಿಶ್ವ ದಾಖಲೆಯನ್ನು (GWR) ಸಹ ಇಂದು ಗಳಿಸಿದೆ ಎಂದು ಹೇಳಿದ್ದಾರೆ.

ಈ ಹೋಟೆಲ್ ಅನ್ನು ನಿರ್ಮಿಸುವ ತಂಡಕ್ಕೆ ಅತ್ಯಂತ ಕಷ್ಟಕರವಾದ ಕೆಲಸವೆಂದರೆ ಗಾಳಿ, ಮಳೆಯಿಂದ ಇದನ್ನು ಹೇಗೆ ರಕ್ಷಿಸುವುದೆಂದು. ಆದರೆ ಇದು ತುಂಬಾನೇ ಬಲಿಷ್ಠವಾಗಿದ್ದು, ಸದ್ಯ ಗಿನ್ನೆಸ್ ದಾಖಲೆಯಲ್ಲೂ ಗುರುತಿಸಿಕೊಂಡಿದೆ.

Leave a Reply

Your email address will not be published. Required fields are marked *