ತುಮಕೂರು:- ಸ್ಮಶಾನ ಭೂಮಿ ಕೊರತೆಯಿಂದಾಗಿ ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೆ ಗ್ರಾಮ ಪಂಚಾಯತಿ ಮುಂದೆ ಶವವಿಟ್ಟು ಪ್ರತಿಭಟನೆ ಮಾಡುತ್ತಿರುವ ಅಮಾನವೀಯ ಘಟನೆ ನೆಲಹಾಲ್ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.

ನೆಲಹಾಲ್ ಗ್ರಾಮ ಪಂಚಾಯತಿ ಮುಂದೆ ಶವವಿಟ್ಟು ಸಾವನ್ನಪ್ಪಿರುವ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ.
ತುಮಕೂರು ತಾಲೂಕು ನೆಲಹಾಲ್ ಗ್ರಾಮ ಪಂಚಾಯತಿ ಮುಂದೆ ಬೆಳಿಗ್ಗೆಯಿಂದ ಶವವಿಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ.
ನಾಗರಾಜು(60) ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದು, ಅವರ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಬುಧವಾರ ಸಂಜೆ ನಾಗರಾಜು ಸಾವನ್ನಪ್ಪಿದ್ದು ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೆ ಪರದಾಟ ನಡೆಸುತ್ತಿದ್ದಾರೆ

ನಾಗರಾಜ್ ಗೆ ಸತ್ತ ಮೇಲೂ ಮುಕ್ತಿ ಸಿಗದೆ ಒದ್ದಾಟ ನಡೆಸುತ್ತಿದ್ದಾರೆ. ಸ್ಮಶಾನ ಒತ್ತುವರಿ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲ. ಸ್ಮಶಾನ ಜಾಗವನ್ನು ಸುತ್ತಮುತ್ತಲಿನ ಪಟ್ಟಭದ್ರ ಹಿತಾಸಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ.
ನೆಲಹಾಲ್ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಸೋಮಸಾಗರ ಗೇಟ್ ನಲ್ಲಿರುವ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಸೋಮಸಾಗರ ಗೇಟ್ ಬಳಿಯ ಸರ್ವೆ 16ರಲ್ಲಿ ಇರುವ ಸ್ಮಶಾನ ಭೂಮಿಯಿದ್ದರೂ ಗ್ರಾಮಸ್ಥರಿಗೆ ಇಲ್ಲದ ಸ್ಥಿತಿ ಬಂದಿದೆ.

ಬೆಳಿಗ್ಗೆಯಿಂದಲೂ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ ಗ್ರಾಮಸ್ಥರು. ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.