ತುಮಕೂರು: ನಗರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಮತ್ತು ಸಾವಜನಿಕ ಸ್ಥಳದಲ್ಲಿ ಕಿರುಕುಳಕ್ಕೆ ಒಳಗಾಗುವಂತಹ ಸಂದರ್ಭದಲ್ಲಿ ತಕ್ಷಣ ಅವರ ನೆರವಿಗೆ ಪೊಲೀಸರು ಧಾವಿಸುವಂತಾಗಲಿ ಎಂಬ ದೃಷ್ಟಿಯಿಂದ ಅಲ್ಲಲ್ಲಿ ತುರ್ತು ಸಹಾಯವಾಣಿ ವ್ಯವಸ್ಥೆ ಅಳವಡಿಸಲಾಗಿದೆ. ತುಮಕೂರು ನಗರದ ಉದ್ಯಾನವನ, ಜನರು ಜಾಸ್ತಿ ಓಡಾಡದಂತಹ ಪ್ರದೇಶ, ಅಸುರಕ್ಷಿತ ಪ್ರದೇಶಗಳಲ್ಲಿ ಸೇರಿದಂತೆ 413 ಕಡೆ ಇಂತಹ ಕ್ಯಾಮರಾಗಳನ್ನು ವ್ಯವಸ್ಥೆ ಮಾಡಲಾಗಿದೆ.ಮಹಾನಗರದ ಪಾಲಿಕೆ ಆವರಣದಲ್ಲಿ ಇವುಗಳನ್ನು ನಿಯಂತ್ರಿಸುವ ಕೊಠಡಿಯನ್ನು ತೆರೆಯಲಾಗಿದೆ. ದಿನದ 24 ಗಂಟೆ ಈ ಕಂಟ್ರೋಲ್ ರೂಂ ಕೆಲಸ ನಿರ್ವಹಿಸಲಿದೆ. ಮಧ್ಯರಾತ್ರಿ ಹೊತ್ತಲ್ಲೂ ಇದನ್ನು ಟೆಸ್ಟ್ ಮಾಡಲಾಗಿದೆ. 41 ತುರ್ತು ಸಹಾಯವಾಣಿ ಅಳಡಿಸಲಾಗಿದ್ದು, ಭೀತಿಯ ವಾತಾವರಣ ಇದ್ದರೆ, ಈ ಬಟನ್ ಒತ್ತಿ ಕಂಟ್ರೋಲ್ ರೂಂ ಸಹಾಯ ಕೇಳಬಹುದಾಗಿದೆ. ಅಲ್ಲದೇ ಸ್ಥಳದಲ್ಲಿನ ಅಸುರಕ್ಷತೆಯ ಕುರಿತು ವಿವರಿಸಿದರೆ ಕಂಟ್ರೋಲ್ ರೂಂ ಸಿಬ್ಬಂದಿ ತಕ್ಷಣ ಸ್ಪಂದಿಸಲಿದ್ದಾರೆ.
ವಿಡಿಯೋ ಸಾಕ್ಷ್ಯವಾಗಿ ಬಳಕೆ:”ಈ ಕ್ಯಾಮರಾಗಳು ಸಂಚಾರಿ ಪೊಲೀಸ್ ಇಲಾಖೆಗೂ ಸಹಾಯಕವಾಗಿದ್ದು, ಟ್ರಾಫಿಕ್ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಈ ಕ್ಯಾಮರಾಗಳ ವಿಡಿಯೋಗಳನ್ನೇ ಸಾಕ್ಷಿಯಾಗಿ ಬಳಸುತ್ತಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆಯಾದಾಗ ವಾಹನಗಳ ನಂಬರ್ ಪ್ಲೇಟ್ಗಳನ್ನು ಕ್ಯಾಮರಾ ಮೂಲಕ ಸುಲಭವಾಗಿ ಗುರುತಿಸಬಹುದಾಗಿದೆ. ಇವುಗಳು ಅನೇಕ ಕ್ರಿಮಿನಲ್ ಪ್ರಕರಣಗಳ ಗುರುತು ಪತ್ತೆ ಮಾಡಲು ಸಹಕಾರಿಯಾಗಲಿದೆ. ಅಲ್ಲದೇ ಅಪಘಾತಗಳು ನಡೆದ ವೇಳೆ ತಕ್ಷಣ ಪೊಲೀಸರಿಗೆ ಸ್ಪಂದಿಸಲು ಕ್ಯಾಮರಾಗಳು ಸಹಕಾರಿಯಾಗಿವೆ” ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ತಿಳಿಸಿದ್ದಾರೆ.
ಬೈಕ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಈ ಕ್ಯಾಮೆರಾಗಳ ಸಹಕಾರ:”ಮಹಿಳೆಯರ ಸುರಕ್ಷತೆ, ರಸ್ತೆ ಸುರಕ್ಷತೆ, ಸಾರ್ವಜನಿಕ ಕಾಯಕ್ರಮಗಳು ನಡೆಯುವ ವೇಳೆ ಶಾಂತಿಯುತ ವಾತಾವರಣ ನಿಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿವೆ. ಬೈಕ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಈ ಕ್ಯಾಮೆರಾಗಳು ಸಾಕಷ್ಟು ಸಹಕಾರಿಯಾಗಿವೆ. ಒಂದು ವರ್ಷದಲ್ಲಿ ನೂರಕ್ಕೂ ಹೆಚ್ಚು ಕಳ್ಳತನವಾಗಿದ್ದ ಬೈಕ್ಗಳನ್ನು ಪತ್ತೆ ಮಾಡಲಾಗಿದೆ. ಇತ್ತೀಚೆಗೆ ಚಿನ್ನದಂಗಡಿ ದರೋಡೆ ಪ್ರಕರಣದ ಚೋರರನ್ನು ಸಹ ಈ ಕ್ಯಾಮೆರಾಗಳ ಸಹಕಾರದಿಂದ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ” ಎಂದು ತಿಳಿಸಿದರು.”ಇತ್ತೀಚೆಗೆ ತುರ್ತು ಸಹಾಯವಾಣಿಗಳನ್ನು ಅಳವಡಿಸಲಾಗಿದ್ದು, ಇವುಗಳ ಬಗ್ಗೆ ಜನರಿಗೆ ಅರಿವು ಬಂದಿಲ್ಲ. ಅದರ ಕುರಿತು ಪ್ರಚಾರದ ಅಗತ್ಯವಿದೆ. ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ರೆ ಜನರಿಗೆ ತಿಳಿಯಲಿದೆ. ಸಮಾಜಘಾತುಕ ಚಟುವಟಿಕೆಗಳಿಗೆ ಇನ್ನಷ್ಟು ಕಡಿವಾಣ ಹಾಕಬಹುದಾಗಿದೆ” ಎಂದು ವಕೀಲ ರಾಜೇಂದ್ರ ಪ್ರಸಾದ್ ಹೇಳಿದರು.”ಸ್ಮಾರ್ಟ್ ಸಿಟಿ ವತಿಯಿಂದ ಕ್ಯಾಮರಾಗಳನ್ನು ಅಳವಡಿಸಿರುವುದು ಉತ್ತಮ ಕೆಲಸವಾಗಿದೆ. ಅಲ್ಲದೆ ಸಾರ್ವಜನಿಕ ಹಣವನ್ನು ಬಳಕೆ ಮಾಡಿರುವುದು ಸ್ವಾಗತಾರ್ಹ. ಈ ವ್ಯವಸ್ಥೆಯ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕಿದೆ” ಎಂದು ವಕೀಲ ದಯಾನಂದ್ ಸಾಗರ್ ತಿಳಿಸಿದರು.