ತುಮಕೂರು : ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ (ಹೋ) ಅಕ್ಕಿರಾಂಪುರ ಗ್ರಾಮದ ಶ್ರೀ ಆದಿಶಕ್ತಿ ಸತ್ಯಮ್ಮ ದೇವಿ ಅಮ್ಮನವರ ನೂತನ ಸ್ಥಿರಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಂತರದ 48 ದಿನಗಳ ಮಂಡಲ ಪೂಜೆ ನೆರವೇರಿದ ಪ್ರಯುಕ್ತ ನಡೆದ ಆರತಿ ಉತ್ಸವವು ಗ್ರಾಮದ ರಾಜಬೀದಿಗಳಲ್ಲಿ ತಮಟೆ,ಡೋಲು, ವಾದ್ಯಮೇಳಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಸಾಗಿತು.

ವಿವಿಧ ಪುಷ್ಪಾಲಂಕೃತ ಶ್ರೀ ಆದಿಶಕ್ತಿ ಸತ್ಯಮ್ಮ ದೇವಿ ಅಮ್ಮನವರ ಮೆರವಣಿಗೆ ಮೂರ್ತಿಯೊಂದಿಗೆ ನೂರಾರು ಮಹಿಳೆಯರು, ಪುಟ್ಟ ಹೆಣ್ಣು ಮಕ್ಕಳು ವಿಶೇಷ ರೀತಿಯಲ್ಲಿ ಅಲಂಕರಿಸಿದ್ದ ತಂಬಿಟ್ಟಿನ ಆರತಿಗಳೊಂದಿಗೆ ಕಾಲ್ನಡಿಗೆಯಲ್ಲಿ ಸಾಗಿ ಅಮ್ಮನವರ ಸನ್ನಿಧಾನದ ಬಳಿ ತಮ್ಮ ತಮ್ಮ ಆರತಿಗಳನ್ನ ಬೆಳಗುವ ಮೂಲಕ ಆದಿಶಕ್ತಿ ಸತ್ಯಮ್ಮ ದೇವಿಯವರ ಆಶೀರ್ವಾದ ಕೋರಿದರು. ಮೆರವಣಿಗೆಯುದ್ದಕ್ಕೂ ಯುವಕರು ತಮಟೆ ಡೋಲಿನ ವಾದ್ಯಗಳಿಗೆ ಉತ್ಸಾಹದಿಂದ ಕುಣಿದು ಕುಪ್ಪಳಿಸಿದರು.

ಇದೇ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಎಲ್ಲಾ ಕೋಮಿನ ಮುಖಂಡರುಗಳು ಉಪಸ್ತಿತರಿದ್ದು ಆದಿಶಕ್ತಿಯ ಉತ್ಸವಕ್ಕೆ ಸಹಕರಿಸಿದರು…