ತುಮಕೂರು!! ಸಲ್ಮಾನ್ ಖಾನ್ ಗೆ ತುಮಕೂರಿನ ವ್ಯಕ್ತಿ ಬಿಷ್ಮೋಯಿ ಗ್ಯಾಂಗ್ ಹೆಸರಲ್ಲಿ ಜೀವ ಬೆದರಿಕೆ

ತುಮಕೂರು!! ಸಲ್ಮಾನ್ ಖಾನ್ ಗೆ ತುಮಕೂರಿನ ವ್ಯಕ್ತಿ ಬಿಷ್ಮೋಯಿ ಗ್ಯಾಂಗ್ ಹೆಸರಲ್ಲಿ ಜೀವ ಬೆದರಿಕೆ

 ತುಮಕೂರು:– ಕಲ್ಪತರು ನಾಡು ತುಮಕೂರಿನ ವ್ಯಕ್ತಿಯೋರ್ವ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು, ಏಕೋ ಸಲ್ಮಾನ್ ಖಾನ್‌ಗೆ ಟೈಮ್ ಸರಿಯಿಲ್ಲವೆಂದು ಕಾಣುತ್ತಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನವರು ಜೀವ ಬೆದರಿಕೆ ಹಾಕ್ಕಿದ್ದೇ ಹಾಕ್ಕಿದ್ದು, ಈ ಗ್ಯಾಂಗ್ ನ ಹೆಸರಲ್ಲಿ ಜೀವ ಬೆದರಿಕೆ ಹಾಕ್ಕಿದ್ದೇ ನೆಪವಾಗಿ ಹಿಡಿದುಕೊಂಡು ಅದೇಷ್ಟೋ ಹುಸಿ ಬೆದರಿಕೆಗಳು ಬರುತ್ತಲಿವೆ.  ಹೀಗೆ ಒಂದು ಕರೆಯನ್ನು ಕಲ್ಪತರು ನಾಡು ತುಮಕೂರಿನಿಂದಲೂ ಸಹ ಮಾಡಲಾಗಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ತುಮಕೂರಿನಲ್ಲಿ ಪೋಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಿಕ್ರಮ್ ಎಂದು ಗುರುತಿಸಲಾಗಿದೆ. ಆರೋಪಿಯು, ಸಲ್ಮಾನ್ ಖಾನ್‌ಗೆ 5 ಕೋಟಿ ರೂ. ಹಣ ನೀಡಬೇಕು ಮತ್ತು ದೇವಾಲಯಕ್ಕೆ ಬಂದು ಕ್ಷಮೆ ಕೋರಬೇಕು ಎಂದು ಮುಂಬೈ ಪೊಲೀಸರಿಗೆ ಮೆಸೇಜ್ ಕಳುಹಿಸಿದ್ದ ಎಂದು ಹೇಳಲಾಗುತ್ತಿದೆ. ಆರೋಪಿಯನ್ನು ಬಂಧಿಸಲಾಗಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಜೀವಂತವಾಗಿರಲು ಬಯಸಿದರೆ ದೇವಸ್ಥಾನದಲ್ಲಿ ಕ್ಷಮೆಯಾಚಿಸಬೇಕು. ಇಲ್ಲವೇ 5 ಕೋಟಿ ಹಣ ಕೊಡಿಬೇಕು ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಮತ್ತೆ ಬಿಷ್ಣೋಯ್ ಗ್ಯಾಂಗ್ ಹೆಸರಿಂದ ಬೆದರಿಕೆ ಬಂದಿತ್ತು. ಆರೋಪಿಯು ಮುಂಬೈ ಪೊಲೀಸರಿಗೆ ವಾಟ್ಸಪ್ ಸಂದೇಶ ಕಳುಹಿಸಿದ್ದ. ಇದು ಒಂದು ವಾರದಲ್ಲಿಯೇ ಸಲ್ಮಾನ್ ಖಾನ್‌ಗೆ ಬಂದ ಎರಡನೇ ಕೊಲೆ ಬೆದರಿಕೆಯಾಗಿದೆ.

ಅ.30 ರಂದು ಮುಂಬೈ ಸಂಚಾರ ನಿಯಂತ್ರಣವು ಸಲ್ಮಾನ್ ಖಾನ್ ವಿರುದ್ಧ ಇದೇ ರೀತಿಯ ಬೆದರಿಕೆಯು ಬಂದಿತ್ತೆಂದು ಹೇಳಿದ್ದರು.  2 ಕೋಟಿಗೆ ಬೇಡಿಕೆಯಿಡಲಾಗಿತ್ತೆಂಬ ಸುದ್ದಿಯನ್ನು ತಿಳಿಸಿದ್ದಾರೆ. ಪೂರ್ವ ಬಾಂದ್ರಾ ನಿವಾಸಿಯಾದ ಅಜಮ್ ಮೊಹಮ್ಮದ್ ಮುಸ್ತಫಾ ಎಂಬವವನು ಈ ಕರೆಯನ್ನು ಮಾಡಿದ್ದಾಗಿ ಅವನನ್ನು ಪೋಲೀಸರು ತಕ್ಷಣವೇ ಬಂಧಿಸಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ

Leave a Reply

Your email address will not be published. Required fields are marked *