ತುಮಕೂರು || ಹುಡುಗಿ ಸಿಗದಿದ್ದಕ್ಕೆ ಪ್ರೀತಿಸಿದ ಯುವತಿ ಮನೆ ಮುಂದೆಯೇ ಆತ್ಮ*ತ್ಯೆ

ತುಮಕೂರು || ಹುಡುಗಿ ಸಿಗದಿದ್ದಕ್ಕೆ ಪ್ರೀತಿಸಿದ ಯುವತಿ ಮನೆ ಮುಂದೆಯೇ ಆತ್ಮ*ತ್ಯೆ

ತುಮಕೂರು:  ಪ್ರೀತಿಸಿದ ಹುಡುಗಿ ಮನೆಯವರು ಮದುವೆ ಮಾಡಿಕೊಡಲು ನಿರಾಕರಣೆ ಆರೋಪದ ಹಿನ್ನೆಲೆಯಲ್ಲಿ ಪ್ರೀತಿಸಿದ ಯುವತಿ ಮನೆ ಮುಂದೆಯೇ ಪ್ರೀತಿಸಿದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಂಜುನಾಥ್ (32), ಮೃತ ದುರ್ದೈವಿಯಾಗಿದ್ದು, ತುಮಕೂರಿನ ಜಯನಗರ ಬಳಿಯ ಚನ್ನಪ್ಪನಪಾಳ್ಯದಲ್ಲಿ ಘಟನೆ ನಡೆದಿದೆ.

ಟಿಟಿ ವಾಹನದ ಚಾಲಕನಾಗಿದ್ದ ಮಂಜುನಾಥ್ ಕೆಲ ತಿಂಗಳಿಂದ ಮಂಜುನಾಥ್ ಮನೆ ಪಕ್ಕದ ಮನೆ ಹುಡುಗಿಯನ್ನ ಲವ್ ಮಾಡ್ತಿದ್ದ.

ಇಬ್ಬರು ಮದುವೆಯಾಗಲು ಒಪ್ಪಿದ್ದರು. ಮದುವೆ ಮಾಡಿಕೊಡುವಂತೆ ಯುವತಿ ಮನೆಯವರನ್ನ ಕೇಳಿದ್ದ ಮಂಜುನಾಥ್. ಆದರೆ, ಮಂಜುನಾಥ್ ಗೆ ಹುಡುಗಿ ಮನೆಯವರು ಮದುವೆ ಮಾಡಿಕೊಡಲು ನಿರಾಕರಣೆ ಮಾಡಿದ್ದರು. ಇದರಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಪ್ರಾಪ್ತ ಯುವತಿ ಹಿನ್ನೆಲೆ, ಮದುವೆ ಮಾಡಿಕೊಡಲು ನಿರಾಕರಣೆ ಎಂದು ಹೇಳಲಾಗುತ್ತಿದೆ. ತಡರಾತ್ರಿ ಯುವತಿ ಮನೆ ಮುಂದೆಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹ ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ.

ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *