ತುಮಕೂರು: ಮಹಿಳಾ ಸಬಲೀಕರಣ ಘಟಕದಲ್ಲಿನ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಅನುಷ್ಠಾನಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಖಾಲಿಯಿರುವ ಜಿಲ್ಲಾ ಮಟ್ಟದ 1 ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಜಿಲ್ಲಾ ಸಂಯೋಜಕ ಹಾಗೂ 1 ಡಾಟಾ ಎಂಟ್ರಿ ಆಪರೇಟರ್/ಯೋಜನಾ ಸಹಾಯಕರ ಹುದ್ದೆಯನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಜಿಲ್ಲಾ ಸಂಯೋಜಕ ಹುದ್ದೆಗೆ ಸಮಾಜವಿಜ್ಞಾನ/ ಜೀವವಿಜ್ಞಾನ/ಪೌಷ್ಠಿಕ/ ವೈದ್ಯಕೀಯ/ಆರೋಗ್ಯ ನಿರ್ವಹಣೆ/ ಸಮಾಜಕಾರ್ಯ/ ಗ್ರಾಮೀಣ ನಿರ್ವಹಣೆ ವಿಷಯ ಹಾಗೂ ಡಾಟಾ ಎಂಟ್ರಿ ಆಪರೇಟರ್/ಯೋಜನಾ ಸಹಾಯಕ ಹುದ್ದೆಗೆ ಸಮಾಜವಿಜ್ಞಾನ/ಜೀವವಿಜ್ಞಾನ/ಗ್ರ್ರಾೀಮೀಣ ನಿರ್ವಹಣೆ/ಸಂಖ್ಯಾಶಾಸ್ತç ಯಾವುದಾದರೂ ಒಂದು ವಿಷಯದ ಲ್ಲಿಸ್ನಾತಕೋತ್ತರ ಪದವಿ ಪಡೆದಿರಬೇಕು ಹಾಗೂ ಸರ್ಕಾರಿ ಅಥವಾ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಟ 1 ವರ್ಷ ಅನುಭವ ಹೊಂದಿರಬೇಕು.
ಮಾತೃವಂದನಾ ಯೋಜನೆಯ ಜಿಲ್ಲಾ ಸಂಯೋಜಕ ಹುದ್ದೆಗೆ ಮಾಹೆಯಾನ 35000 ರೂ. ಹಾಗೂ ಡಾಟಾ ಎಂಟ್ರಿ ಆಪರೇಟರ್/ಯೋಜನಾ ಸಹಾಯಕ ಹುದ್ದೆಗೆ 22000 ರೂ.ಗಳ ಗೌರವಧನವನ್ನು ಪಾವತಿಸಲಾಗುವುದು.
ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 16ರೊಳಗಾಗಿ ಸಲ್ಲಿಸಬಹುದಾಗಿದೆ. ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ನಿಗಧಿಪಡಿಸಿರುವ ವಿದ್ಯಾರ್ಹತೆ ಅಂಕಪಟ್ಟಿ, ಅನುಭವ ಪ್ರಮಾಣ ಪತ್ರ, ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮತ್ತು ಚಾಲ್ತಿಯಲ್ಲಿರುವ ತಹಶೀಲ್ದಾರ್ರವರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರಗಳನ್ನು ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರ ಕಚೇರಿ ಅಥವಾ ದೂರವಾಣಿ ಸಂಖ್ಯೆ: 0816-2956624ನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.