ತುಮಕೂರು || ಬಡ್ಡಿ ದಂಧೆ ಕಿರುಕುಳಕ್ಕೆ ವಿಷ ಸೇವಿಸಿ ಆ*ಹತ್ಯೆಗೆ ಯತ್ನ

ತುಮಕೂರು || ಬಡ್ಡಿ ದಂಧೆ ಕಿರುಕುಳಕ್ಕೆ ವಿಷ ಸೇವಿಸಿ ಆ*ಹತ್ಯೆಗೆ ಯತ್ನ

ತುಮಕೂರು:- ಜಿಲ್ಲೆಯಲ್ಲಿ  ದಿನೇ ದಿನೇ ಮೀಟರ್‌ ಬಡ್ಡಿ ದಂಧೆ ಹಾಗೂ ಮೈಕ್ರೋ ಫೈನಾನ್‌ ಕಿರುಕುಳ ಹೆಚ್ಚಾಗುತ್ತಿದ್ದು,  ಬಡ್ಡಿ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಮುಜೀಬ್  ವಿಷ ಸೇವಿಸಿ ಆತ್ಮಹತ್ಯೆಗೆ ನಡೆಸಿರುವ ವ್ಯಕ್ತಿಯಾಗಿದ್ದಾನೆ.  ವಿಷ ಸೇವಿಸುವುದನ್ನ ಲೈವ್‌ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಯತ್ನ ನಡೆಸಿದ್ದಾನೆ.

ವಿಷಸೇವಿಸಿದ ವ್ಯಕ್ತಿ ಮುಜಿಬ್ ಮಂಡ್ಯ ಮೂಲದವನಾಗಿದ್ದು, ಮಂಡ್ಯದಲ್ಲಿ ಹಣ್ಣಿನ ವ್ಯಾಪರ ಮಾಡಿಕೊಂಡಿದ್ದ. ವ್ಯಾಪಾರಕ್ಕಾಗಿ 10 ಲಕ್ಷ ರೂಪಾಯಿ ಮೀಟರ್‌ ಬಡ್ಡಿ ಪಡೆದಿದ್ದ. ನಂತರ ಬಡ್ಡಿ ಕಿರುಕುಳ ತಾಳಲಾರದೆ ಮುಜೀಬ್‌ ತುಮಕೂರಿಗೆ ಬಂದಿದ್ದ.

ತುಮಕೂರು ನಗರದಲ್ಲಿ ವಾಸವಿದ್ದ ಮುಜಿಬ್ ಗೆ ತುಮಕೂರಿಗೂ ಬಂದು ಬಡ್ಡಿ ಕಟ್ಟುವಂತೆ ಕಿರುಕುಳ ನೀಡಿದ್ದಾರೆ.

ಕಿರಕುಳ ತಾಳಲಾರದೆ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ ಮುಜೀಬ್.

ವಿಡಿಯೋದಲ್ಲಿ ಸುರೇಶ್‌, ಚನ್ನೆಗೌಡ, ರಾಜಣ್ಣ ಎಂಬುವರ ವಿರುದ್ಧ ಆರೋಪ ಮಾಡಿದ್ದಾರೆ. ಈ ಮೂವರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಿಡಿಯೋ ಮಾಡಿದ್ದಾನೆ.

ಸ್ಥಳೀಯರು ಗಮನಿಸಿ ನಂತರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ  ಮುಜಿಬ್ಗೆ ಚಿಕಿತ್ಸೆ ನೀಡಲಾಗಿದ್ದು,

ಹೆಚ್ವಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಕೇವಲ ಒಂದು ತಿಂಗಳ ಸಾಲದ ಹಣ ಪಾವತಿ ಮಾಡದಿದ್ದಕ್ಕೆ ಮನೆ ಬಳಿ ಬಂದು ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿ

ಮಹಿಳೆಗೆ ಕಿರುಕುಳ‌ ಕೊಟ್ಟಿದ್ದಾರೆ ಎನ್ನಲಾಗಿದೆ.  ಖಾಸಗಿ ಫೈನಾನ್ಸ್ ಸಿಬ್ಬಂದಿಯಿಂದ ಕಿರುಕುಳ ನೀಡಿರುವ ಆರೋಪ‌ ಗೋವಿಂದಯ್ಯನಪಾಳ್ಯ ಗ್ರಾಮದಲ್ಲಿ  ನಡೆದಿದೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಗೋವಿಂದಯ್ಯನಪಾಳ್ಯ ಗ್ರಾಮದಲ್ಲಿ ಗ್ರಾಮದ ಮಹಿಳೆ  ಖಾಸಗಿ ಫೈನಾನ್ಸ್ ನಲ್ಲಿ ಸಾಲ ಪಡೆದಿದ್ರು. ಈಗಾಗಲೇ ಸಾಲದ ಹಣವನ್ನು ಪಾವತಿ ಮಾಡಿದ್ದರು. ಕೇವಲ ಒಂದೇ ಒಂದು ತಿಂಗಳ ಸಾಲದ ಹಣ ಪಾವತಿ ಮಾತ್ರ ಬಾಕಿ ಇದ್ದು, ಮುಂದಿನ ತಿಂಗಳು ಹಣ ಪಾವತಿ ಮಾಡೋದಾಗಿ ಮಹಿಳೆ ಹೇಳಿದ್ದರು. ಇದಕ್ಕೆ ಒಪ್ಪದ ಖಾಸಗಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ, ಮನೆ ಬಳಿ ಬಂದು ಗಲಾಟೆ ಮಾಡಿ,

ಹಣ ಪಾವತಿ ಮಾಡೋವರೆಗೂ ನಾವು ಹೋಗಲ್ಲ ಎಂದು ಪಟ್ಟು ಹಿಡಿದು ಧಮ್ಕಿ ಹಾಕಿದ್ದರಂತೆ. ರಾತ್ರಿಯಾದರು ಮನೆ ಬಳಿ ಬಂದು ಹಣ ಪಾವತಿಸುವಂತೆ  ಮೈಕ್ರೋ ಫೈನಾನ್ಸ್ ಧಮ್ಕಿ ಹಾಕಿದ್ದರಂತೆ.

 ಘಟನೆಯ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ.

Leave a Reply

Your email address will not be published. Required fields are marked *