ತುಮಕೂರು || ಅಪ್ರಾಪ್ತರಿಗೆ ಬೈಕ್ ಕೊಡುವ ಮುನ್ನ ಹುಷಾರ್ : ತಂದೆಗೆ ಸಿಕ್ತು ಭಾರೀ ಶಿಕ್ಷೆ, ದಂಡ

ತುಮಕೂರು || ಅಪ್ರಾಪ್ತರಿಗೆ ಬೈಕ್ ಕೊಡುವ ಮುನ್ನ ಹುಷಾರ್ : ತಂದೆಗೆ ಸಿಕ್ತು ಭಾರೀ ಶಿಕ್ಷೆ, ದಂಡ

ತುಮಕೂರು : ಅಪ್ರಾಪ್ತರಿಗೆ ವಾಹನಗಳನ್ನು ಕೊಡಬೇಡಿ ಎಂದು ರೂಲ್ಸ್ ಮಾಡಲಾಗಿದೆ. ಆದರೂ ತಂದೆ ತಾಯಿ ಅಪ್ರಾಪ್ತರಿಗೆ ಬೈಕ್, ಕಾರುಗಳನ್ನು ಕೊಡುತ್ತಲೇ ಇರುತ್ತಾರೆ. ಇದರಿಂದ ಅನಾಹುತಗಳು ಸಂಭವಿಸುತ್ತಿರುತ್ತೆ. ಇದೇ ರೀತಿ ಇಲ್ಲೊಬ್ಬ ತಂದೆ ಮಗನಿಗೆ ಬೈಕ್ ಕೊಟ್ಟು ಅಪಘಾತಕ್ಕೆ ಕಾರಣವಾಗಿದ್ದ. ಇದೀಗ 6 ತಿಂಗಳು ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ ನಿನ್ನೆ ತಂದೆಗೆ ಶಿಕ್ಷೆ ವಿಧಿಸಿದೆ.

ತುಮಕೂರು || ಅಪ್ರಾಪ್ತರಿಗೆ ಬೈಕ್ ಕೊಡುವ ಮುನ್ನ ಹುಷಾರ್ : ತಂದೆಗೆ ಸಿಕ್ತು ಭಾರೀ ಶಿಕ್ಷೆ, ದಂಡ

ತುಮಕೂರು ಜಿಲ್ಲೆಯ ಗುಬ್ಬಿ ಜೆಎಂಎಫ್ಸಿ ನ್ಯಾಯಾಲಯ ಅಪ್ರಾಪ್ತ ಮಗನಿಗೆ ಬೈಕ್ ನೀಡಿದ್ದರಿಂದ ಅಪಘಾತಕ್ಕೆ ಕಾರಣವಾದ ತಂದೆಯೊಬ್ಬರಿಗೆ ಭಾರೀ ಮೊತ್ತದ ದಂಡ ಮತ್ತು ಜೈಲು ಶಿಕ್ಷೆಯನ್ನು ವಿಧಿಸಿದೆ. ಈ ಶಿಕ್ಷೆ ಬಗ್ಗೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ.

ಅಪ್ರಾಪ್ತ ಬಾಲಕನಿಗೆ ಬೈಕ್ ಕೊಟ್ಟ ತಂದೆಗೆ ಶಿಕ್ಷೆ!

ಅಪ್ರಾಪ್ತ ಬಾಲಕನೊಬ್ಬನಿಗೆ ಆತನ ತಂದೆ ಬೈಕ್ ಚಲಾಯಿಸಲು ಅವಕಾಶ ನೀಡಿದ್ದರು. ಆದರೆ, ಈ ಬಾಲಕ ಲೈಸೆನ್ಸ್ ಇಲ್ಲದೆ ಬೈಕ್ ಚಾಲನೆ ಮಾಡುವಾಗ ಅಪಘಾತ ಸಂಭವಿಸಿತ್ತು. ಈ ಘಟನೆಯಿಂದ ಸಂಚಾರ ನಿಯಮಗಳ ಉಲ್ಲಂಘನೆಯ ಜೊತೆಗೆ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಉಂಟಾಗಿತ್ತು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಬಾಲಕನ ತಂದೆಯ ವಿರುದ್ಧ ಕಾನೂನು ಕ್ರಮ ಕೈಗೊಂಡರು. ಪ್ರಕರಣವು ಗುಬ್ಬಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು.

ನ್ಯಾಯಾಧೀಶೆ ಡಿ. ಅನುಪಮಾ ಅವರ ನೇತೃತ್ವದಲ್ಲಿ ಆರು ತಿಂಗಳ ಕಾಲ ವಿಚಾರಣೆ ನಡೆದು, ತಂದೆಯ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವೆಂದು ಸಾಬೀತಾಯಿತು. ಮೋಟಾರು ವಾಹನ ಕಾಯ್ದೆಯ ಪ್ರಕಾರ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ದ್ವಿಚಕ್ರ ವಾಹನ ಚಲಾಯಿಸುವುದು ಕಾನೂನುಬಾಹಿರವಾಗಿದೆ. ಈ ನಿಯಮವನ್ನು ಉಲ್ಲಂಘಿಸಿ, ತನ್ನ ಅಪ್ರಾಪ್ತ ಮಗನಿಗೆ ಬೈಕ್ ನೀಡಿದ ತಂದೆಯನ್ನು ದೋಷಿಯೆಂದು ಘೋಷಿಸಲಾಯಿತು.

Leave a Reply

Your email address will not be published. Required fields are marked *