ತುಮಕೂರು || ಎಲ್ಲೆಂದರಲ್ಲಿ ಕಸ ಬಿಸಾಕಿದರೆ ಎಚ್ಚರ ; ತುಮಕೂರಿನ ಜನರಿಗೆ ಪಾಲಿಕೆ ಆಯುಕ್ತೆ ಎಚ್ಚರಿಕೆ

ತುಮಕೂರು || ಎಲ್ಲೆಂದರಲ್ಲಿ ಕಸ ಬಿಸಾಕಿದರೆ ಎಚ್ಚರ ; ತುಮಕೂರಿನ ಜನರಿಗೆ ಪಾಲಿಕೆ ಆಯುಕ್ತೆ ಎಚ್ಚರಿಕೆ

ತುಮಕೂರು :  ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಮ್ಮ ಮನೆ/ಅಂಗಡಿ/ನರ್ಸಿಂಗ್ ಹೋಂ/ಹೋಟೆಲ್/ಮಾಲ್ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳನ್ನು ಹಸಿ ಕಸ  ಮತ್ತು ಒಣ ಕಸವನ್ನಾಗಿ ವಿಂಗಡಿಸಿ ಕಸದ ವಾಹನಕ್ಕೆ ನೀಡಬೇಕು ಎಂದು ಪಾಲಿಕೆ ಆಯುಕ್ತ  ಬಿ.ವಿ. ಅಶ್ವಿಜ ತಿಳಿಸಿದ್ದಾರೆ. 

ಕಸವನ್ನು ವಾಹನಕ್ಕೆ ನೀಡದೆ ರಸ್ತೆ ಬದಿ, ಖಾಲಿ ನಿವೇಶನ, ಎಲ್ಲೆಂದರಲ್ಲಿ ಬಿಡಾಡುವವರ ವಿರುದ್ಧ ದೂರು ದಾಖಲಿಸಿ ಶಿಸ್ತು ಕ್ರಮ ಜರುಗಿಸಲಾಗುವುದು. ಕೆಲವು ಸಾರ್ವಜನಿಕರು ರಾತ್ರಿ ವೇಳೆಯಲ್ಲಿ ಕಸವನ್ನು ರಸ್ತೆಗೆ ಸುರಿಯುವುದು ಹಾಗೂ ತಮ್ಮ ವಾಹನಗಳಲ್ಲಿ ಸಂಗ್ರಹಿಸಿಕೊಂಡು ತಂದು ಸಾರ್ವಜನಿಕ ಪ್ರದೇಶಗಳಲ್ಲಿ ಎಸೆಯುವುದು ಕಂಡು ಬಂದಿದೆ. ಇದರಿಂದ ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯತೆ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ.

ಎಲ್ಲೆಂದರಲ್ಲಿ ಕಸ ಬಿಸಾಡುತ್ತಿರುವುದರಿಂದ ಪಾಲಿಕೆಯ ಅಂದ ಹಾಳಾಗುತ್ತಿದೆ. ಅಲ್ಲದೆ  ಹಾವು, ಚೇಳು ಇನ್ನಿತರೆ ವಿಷಜಂತುಗಳ ಸಂಖ್ಯೆ ಹೆಚ್ಚಾಗಿ ಸುತ್ತಮುತ್ತಲು ವಾಸಿಸುತ್ತಿರುವ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.  ಪರಿಸರ ಮಾಲಿನ್ಯ ಉಂಟಾಗಿ ಸಾರ್ವಜನಿಕರು/ಹಿರಿಯ ನಾಗರಿಕರ ಆರೋಗ್ಯದ ಮೇಲೆ ಧಕ್ಕೆ ಉಂಟಾಗುತ್ತದೆ. ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳಲ್ಲಿ ಬೆಳೆದಿರುವ ಗಿಡ-ಗಂಟೆಯನ್ನು ತಾವೇ ಸ್ವಚ್ಛಗೊಳಿಸಬೇಕು. ತಪ್ಪಿದಲ್ಲಿ ಘನತ್ಯಾಜ್ಯ ನಿರ್ವಹಣಾ ನಿಯಮ 2016ರನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *