ತುಮಕೂರು || ತುರ್ತಾಗಿ ಇ-ಸ್ವತ್ತು ಮಾಡಿಕೊಡಲು ಬಿಜೆಪಿ ಮತ್ತು ಜೆಡಿಎಸ್ನ ನಿಯೋಗದಿಂದ ಒತ್ತಾಯ

ತುಮಕೂರು || ತುರ್ತಾಗಿ ಇ-ಸ್ವತ್ತು ಮಾಡಿಕೊಡಲು ಬಿಜೆಪಿ ಮತ್ತು ಜೆಡಿಎಸ್ನ ನಿಯೋಗದಿಂದ ಒತ್ತಾಯ

ತುಮಕೂರು: ಬಿಜೆಪಿ ಮತ್ತು ಜೆಡಿಎಸ್ನ ನಿಯೋಗ ಗುರುವಾರ ಮಹಾನಗರ ಪಾಲಿಕೆ ಆಯುಕ್ತರನ್ನ ಇ-ಆಸ್ತಿ ಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅಸಮರ್ಪಕತೆಯನ್ನ ವಿವರಿಸಲಾಯಿತು. 

ಇ-ಆಸ್ತಿಗೆ ಸಂಬಂಧಿಸಿದಂತೆ, ಇನ್ನು ಮುಂದೆ ಅನೇಕ ದಾಖಲಾತಿಗಳಿಗೆ ಸಾರ್ವಜನಿಕರಿಗೆ ಅಲೆಸುವ ಬದಲಿಗೆ ನಮೂನೆ-3 ನೀಡುವಾಗ ಈಗಾಗಲೇ ಎಲ್ಲಾ ದಾಖಲಾತಿಗಳನ್ನ ಖಾತಾದಾರರು ನೀಡಿರುತ್ತಾರೆ. ಅದನ್ನ ಪುನಃ ಕೇಳಿ ಅಲೆಸುವ ಅಗತ್ಯವಿಲ್ಲ. ನಮೂನೆ-3 ರ ಆಧಾರದ ಮೇಲೆ ಇ-ಆಸ್ತಿ ತೆರೆಯಬೇಕು ಎಂದು ತುಮಕೂರು ಮಹಾನಗರಪಾಲಿಕೆಯ ಆಯುಕ್ತರಿಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಒತ್ತಾಯಿಸಲಾಯಿತು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಆಯುಕ್ತರು ನಮೂನೆ-೩ ರ ಆಧಾರದ ಮೇಲೆ ಇ-ಆಸ್ತಿ ಮಾಡುವ ಆದೇಶವನ್ನ ಹೊರಡಿಸುವ ಭರವಸೆಯನ್ನ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ತುಮಕೂರು ಜಿಲ್ಲಾಧ್ಯಕ್ಷರಾದ ರವಿಶಂಕರ್ ಹೆಬ್ಬಾಕ, ಜೆಡಿಎಸ್ ತುಮಕೂರು ಜಿಲ್ಲಾಧ್ಯಕ್ಷರಾದ ನಾಗರಾಜು, ಬಿಜೆಪಿ ಹಾಗೂ ಜೆಡಿಎಸ್ ಮಾಜಿ ಮಹಾನಗರಪಾಲಿಕೆ ಸದಸ್ಯರು, ಬಿಜೆಪಿ ನಗರಾಧ್ಯಕ್ಷರಾದ ಟಿ.ಎಚ್. ಹನುಮಂತರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸಂದೀಪ್ಗೌಡ ಹಾಗೂ ಮುಂತಾದ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *