ತುಮಕೂರು: ಯುಗಾದಿ ಹಬ್ಬದ ದಿನವೇ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಗಲಾಟೆಯಲ್ಲಿ ಮೂವರು ಯುವಕರಿಗೆ ಗಂಭೀರ ಗಾಯವಾಗಿದೆ. ಕಲ್ಲಿನಿಂದ ತಲೆಗೆ ಹೊಡೆದು ಹಲ್ಲೆ ಮಾಡಲಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿಯ ಬೆಂಕಿಪುರದಲ್ಲಿ ಘಟನೆ ನಡೆದಿದೆ.
ಸಿದ್ದಾಪುರ ಕಾಲೋನಿ ಹುಡುಗರು ಹಾಗೂ ಬೆಂಕಿಪುರದ ಪುಂಡ ಹುಡುಗರ ನಡುವೆ ಗಲಾಟೆ ನಡೆದಿದೆ. ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ಮಾಡಿಕೊಂಡಿರುವ ಯುವಕರ ಗುಂಪು. ಎರಡು ಗುಂಪುಗಳ ನಡುವೆ ಪರಸ್ಪರ ಹಲ್ಲೆ ಆರೋಪ ಕೇಳಿಬಂದಿದೆ.
ಸಿದ್ದಾಪುರ ಹುಡುಗರಿಗೆ ಗಾಯವಾಗಿದ್ದು ಬೆಂಕಿಪುರದ ಹುಡುಗರಿಂದ ಹಲ್ಲೆ ಆರೋಪ ಕೇಳಿಬಂದಿದೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.