ತುಮಕೂರು:- ಸಮಾಜದಲ್ಲಿ ಮಕ್ಕಳಿಲ್ಲದ ಎಷ್ಟೋ ದಂಪತಿಗಳು ಬದುಕಿನುದ್ದಕ್ಕೂ ಕೊರಗಿನಲ್ಲೆ ಅಂತ್ಯ ಕಾಣುತ್ತಾರೆ. ಕೆಲ ತಾಯಂದಿರು ವಿವಿಧ ಕಾರಣಗಳಿಂದ ಹೆತ್ತ ಮಗುವನ್ನೇ ಆಸ್ಪತ್ರೆ, ಬೀದಿ ಪಾಲು ಮಾಡುತ್ತಿದ್ದಾರೆ. ಮಗು ಬೇಡವಾದಲ್ಲಿ ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ, ಪೊದೆಗಳಲ್ಲಿ ಎಸೆದು ಹೋಗುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ.
ಬೇಡವಾದ ಮಗುವನ್ನು ಎಲ್ಲೆಂದರಲ್ಲಿ ಎಸೆದು ಹಿಂಸಿಸದೆ ಜಿಲ್ಲಾಸ್ಪತ್ರೆ ಹೆರಿಗೆ ವಾರ್ಡ್, ನಗರದಲ್ಲಿರುವ ಬಾಲಕಿಯರ ಬಾಲಮಂದಿರದ ಆವರಣ, ಕುಣಿಗಲ್ ತಾಲೂಕು ಭಕ್ತರಹಳ್ಳಿ ವಾಣಿಗೆರೆಯಲ್ಲಿರುವ ದಯಾಕಿರಣ ದತ್ತು ಕೇಂದ್ರದಲ್ಲಿ ಪರಿತ್ಯಕ್ತ ಮಕ್ಕಳಿಗಾಗಿಯೇ ಅಳವಡಿಸಿರುವ “ಮಮತೆಯ ತೊಟ್ಟಿಲು”ನಲ್ಲಿ ಹಾಕುವ ಮೂಲಕ ಎಳೆಯ ಜೀವಗಳನ್ನು ರಕ್ಷಿಸಬೇಕು. ಪರಿತ್ಯಕ್ತ ಮಕ್ಕಳನ್ನು ಗಮನಿಸಿ ವರದಿ ಮಾಡದಿದ್ದಲ್ಲಿ ಅಪರಾಧ:-
ಬಾಲನ್ಯಾಯ ಕಾಯ್ದೆ-2005 ತಿದ್ದುಪಡಿ 2021ರನ್ವಯ ಯಾವುದೇ ವ್ಯಕ್ತಿ, ಯಾವುದೇ ಸಂಸ್ಥೆ, ಆಸ್ಪತ್ರೆ, ಹೆರಿಗೆ ಆಸ್ಪತ್ರೆ, ನರ್ಸಿಂಗ್ ಹೋಂ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತೊರೆಯಲ್ಪಟ್ಟ ಮಕ್ಕಳನ್ನು 24 ಗಂಟೆಯೊಳಗಾಗಿ ಮಕ್ಕಳ ಸಹಾಯವಾಣಿ-1098, ಸ್ಥಳೀಯ ಪೊಲೀಸ್ ಠಾಣೆ, ಮಕ್ಕಳ ಕಲ್ಯಾಣ ಸಮಿತಿ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ ದೂರವಾಣಿ ಸಂಖ್ಯೆ: 0816-2956699 ಅಥವಾ ದಯಾಕಿರಣ ದತ್ತು ಕೇಂದ್ರಕ್ಕೆ ಮಾಹಿತಿ ನೀಡಬೇಕು. ಒಂದು ವೇಳೆ ವರದಿ ಮಾಡದಿದ್ದಲ್ಲಿ ಅಂತಹ ಅಪರಾಧಕ್ಕೆ 6 ತಿಂಗಳವರೆಗೆ ಕಾರಾಗೃಹ ವಾಸ ಅಥವಾ 10000 ರೂ.ಗಳ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಕಾನೂನು ಬಾಹಿರವಾಗಿ ಮಕ್ಕಳನ್ನು ಮಾರುವುದು ಮತ್ತು ಕೊಳ್ಳುವುದು ಶಿಕ್ಷಾರ್ಹ ಅಪರಾಧ:-
ಬೇಡದ ಮಕ್ಕಳನ್ನು ಕಾನೂನು ಬಾಹಿರವಾಗಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-2015 ತಿದ್ದಪಡಿ 2021, ಸೆಕ್ಷನ್ 81ರನ್ವಯ ಯಾವುದೇ ವ್ಯಕ್ತಿ ಮಕ್ಕಳನ್ನು ಮಾರುವುದು ಅಥವಾ ಕೊಳ್ಳುವುದು ಅಪರಾಧವಾಗಿದೆ. ಇಂತಹ ಅಪರಾಧಕ್ಕೆ 5 ವರ್ಷಗಳವರೆಗೆ ಕಠಿಣ ಕಾರಾಗೃಹ ಶಿಕ್ಷೆ, 1 ಲಕ್ಷ ರೂ.ಗಳ ದಂಡ ವಿಧಿಸಬಹುದಾಗಿದೆ. ಇಂತಹ ಪ್ರಕರಣಗಳಲ್ಲಿ ಆಸ್ಪತ್ರೆ ಅಥವಾ ನರ್ಸಿಂಗ್ ಹೋಂ ಸಿಬ್ಬಂದಿಗಳು ತೊಡಗಿದ್ದರೆ ಅಂತಹವರಿಗೆ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ 7 ವರ್ಷಗಳವರೆಗೆ ಶಿಕ್ಷೆ ವಿಸ್ತರಣೆ ಮಾಡಬಹುದಾಗಿದೆ. ಪರಿತ್ಯಕ್ತ ಮಕ್ಕಳಿಗೆ ಪುನರ್ವಸತಿಃ-
ಪರಿತ್ಯಕ್ತ ಮಕ್ಕಳಿಗೆ ಬಾಲನ್ಯಾಯ ಕಾಯ್ದೆ-2015 ತಿದ್ದುಪಡಿ 2021ರನ್ವಯ ಪುನರ್ವಸತಿ ಕಲ್ಪಿಸಲಾಗುವುದು. ಇಂತಹ ಮಕ್ಕಳನ್ನು ಅನಧಿಕೃತವಾಗಿ ಬೇರೆಯವರಿಗೆ ನೀಡಲ್ಪಟ್ಟಲ್ಲಿ ಬಾಲನ್ಯಾಯ ಕಾಯ್ದೆಯನ್ವಯ ಅಪರಾಧವೆಂದು ಪರಿಗಣಿಸಲ್ಪಡಲಾಗುವುದು.
ವಿವಿಧ ಕಾರಣಗಳಿಂದ ಜೈವಿಕ ಪೋಷಕರಿಂದ ಬೇರೆಯಾದ ಮಗು ಎಲ್ಲಾ ರೀತಿಯ ಸಂಬAಧಗಳ ಜೊತೆ ಹಕ್ಕುಗಳು, ಜವಾಬ್ದಾರಿಗಳು ಮತ್ತು ಸೌಲಭ್ಯಗಳೊಂದಿಗೆ ಶಾಶ್ವತವಾಗಿ ದತ್ತು ಪೋಷಕರಿಗೆ ಕಾನೂನುಬದ್ಧವಾಗಿರುವ ಹಕ್ಕನ್ನು ಹೊಂದಿರುತ್ತದೆ. ಕುಟುಂಬದ ವಾತಾವರಣದಲ್ಲಿ ಪ್ರೀತಿ-ವಾತ್ಸಲ್ಯ, ಆರೈಕೆ, ಸುರಕ್ಷತೆಯನ್ನು ಪಡೆಯಲು, ಕ್ರಿಯಾಶೀಲ ಮತ್ತು ಸಮಗ್ರ ಬೆಳವಣಿಗೆಗೆ ಕುಟುಂಬ ವಾತಾವರಣದಲ್ಲಿ ಬೆಳೆಯುವ ಹಕ್ಕನ್ನು ಪ್ರತೀ ಮಗುವಿಗೆ ನೀಡಲಾಗಿದೆ.
ಪರಿತ್ಯಕ್ತ ಮಕ್ಕಳನ್ನು ದತ್ತು ಪಡೆಯಲು ಅವಕಾಶಃ- ಪ್ರೀತಿ-ವಾತ್ಸಲ್ಯ-ಮಮತೆ ಹಾಗೂ ರಕ್ಷಣೆಯ ವಾತಾವರಣದಲ್ಲಿ ಬೆಳೆಯುವುದು ಪ್ರತೀ ಮಗುವಿನ ಪ್ರಾಥಮಿಕ ಹಕ್ಕು. “ಮುದ್ದಾದ ಮಗು ಮನೆಯ ಸೊಬಗು” ಮಗುವಿನ ಭಾವನಾತ್ಮP,À ಬೌದ್ಧಿಕ, ದೈಹಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಪೂರಕ ವಾತಾವರಣ ರೂಪಿಸಿ ಬದುಕನ್ನು ಕಟ್ಟಿಕೊಡುವಲ್ಲಿ ಪೋಷಕರ ಜವಾಬ್ದಾರಿ ಅಡಗಿದೆ.
ಎಲ್ಲಾ ಮಕ್ಕಳಂತೆ ಅನಾಥ, ಪರಿತ್ಯಕ್ತ ಮಕ್ಕಳಿಗೂ ಕೂಡ ಪ್ರೀತಿ-ವಾತ್ಸಲ್ಯ, ಮಮತೆ ಬಾಂಧವ್ಯ ಮತ್ತು ಆಪ್ತತೆಯ ಅವಶ್ಯಕತೆಯಿದೆ. ಇಂತಹ ಮಕ್ಕಳಿಗೆ ಪುನರ್ವಸತಿ ಕಲ್ಪಿಸಿ ಅವರ ಪರಿಪೂರ್ಣ ಬೆಳವಣಿಗೆಗೆ ಪೂರಕವಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಒಂದುಗೂಡಲು ದತ್ತು ಕಾರ್ಯಕ್ರಮವೊಂದು ಅತ್ಯುತ್ತಮ ಪರ್ಯಾಯ ಮಾರ್ಗವಾಗಿದೆ. ಮಕ್ಕಳಿಲ್ಲದ ದಂಪತಿಗಳಿಗೆ ದತ್ತು ಪರ್ಯಾಯ ಮಾರ್ಗಃ-
ಅನಾಥ, ಪರಿತ್ಯಕ್ತ ಪೋಷಕರಿಂದ ಒಪ್ಪಿಸಲ್ಪಟ್ಟ ಮಕ್ಕಳಿಗೆ ಉತ್ತಮ ಜೀವನ ರೂಪಿಸಲು ಅವರನ್ನು ಕುಟುಂಬದ ವಾತಾವರಣದಲ್ಲಿ ಬೆಳೆಸಿ ಪೋಷಕರ ಪ್ರೀತಿ-ವಾತ್ಸಲ್ಯ ಮತ್ತು ಆರೈಕೆ ಪಡೆಯಲು ದತ್ತು ಪ್ರಥಮ ಪರ್ಯಾಯ ಮಾರ್ಗವಾಗಿದೆ. ಹಾಗೇಯೇ ಮಕ್ಕಳಿಲ್ಲದ ದಂಪತಿಗಳಿಗೆ ಮಗುವಿನ ಆಪ್ತತೆ ಸಾನಿಧ್ಯ ಪೋಷಕತ್ವದ ಜವಾಬ್ದಾರಿಯ ಪರಿಪೂರ್ಣತೆಯನ್ನು ನೀಡುತ್ತದೆ. ನವೆಂಬರ್ ಮಾಹೆಯಲ್ಲಿ ರಾಷ್ಟ್ರೀಯ ದತ್ತು ಮಾಸಾಚರಣೆಃ
ಪ್ರತಿ ವರ್ಷ ನವೆಂಬರ್ ತಿಂಗಳನ್ನುರಾಷ್ಟ್ರೀಯ ದತ್ತು ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಕಾನೂನು ಬದ್ಧವಾಗಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ಉತ್ತೇಜಿಸಲು ಮೀಸಲಾದ ವಿಶೇಷ ತಿಂಗಳಾಗಿದೆ. Foster care and Foster Care Leading to Adoption ಎಂಬ ಘೋಷ ವಾಕ್ಯದೊಂದಿಗೆ ಈ ವರ್ಷದ ರಾಷ್ಟಿçÃಯ ದತ್ತು ಮಾಸಾಚರಣೆಯನ್ನು ಆಚರಿಸಲಾಗುತ್ತಿದೆ. ಕಾನೂನು ಬಾಹಿರವಾಗಿ ಮಕ್ಕಳನ್ನು ದತ್ತು ಪಡೆದಲ್ಲಿ ಶಿಕ್ಷೆ ವಿಧಿಸಲು ಅವಕಾಶವಿದ್ದು, ದತ್ತು ಪಡೆಯುವವರು ಕಾನೂನು ಬದ್ಧವಾಗಿಯೆ ದತ್ತು ಪಡೆಯಬೇಕು. ಮಕ್ಕಳಿಲ್ಲದ ದಂಪತಿಗಳಿಗೆ ಮಗುವನ್ನು ಕಾನೂನು ಬದ್ಧವಾಗಿ ದತ್ತು ಪಡೆಯಲು ಇದು ಸಕಾಲ. ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿನೇಶ್ ಮನವಿ ಮಾಡಿದ್ದಾರೆ.