ತುಮಕೂರು || ಜಾತಿಗಣತಿ ವರದಿ  ಜಾರಿ ಮಾಡಿ ಖಳನಾಯಕರಾಗಬೇಡಿ: ಸಿದ್ದರಾಮಯ್ಯಗೆ ಸೋಮಣ್ಣ ಟಾಂಗ್

ತುಮಕೂರು || ರಾಜ್ಯ ಸರ್ಕಾರದ caste census ಬೆಲೆ ಇಲ್ಲ: ಸಚಿವ V. Somanna

ತುಮಕೂರು:- ಜಾತಿ ಗಣತಿ ವರದಿಯನ್ನು ಇನ್ನಷ್ಟು ಗೊಂದಲ ಮಾಡಿಕೊಳ್ಳಬೇಡಿ. ವರದಿಯನ್ನ ತಿರಸ್ಕಾರ ಮಾಡಿ. ಅದನ್ನ ಬಿಟ್ಟು ವರದಿ ಜಾರಿ ಮಾಡಿ ಕಳನಾಯಕರಾಗಬೇಡಿ ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿಗಣತಿ ವರದಿಯನ್ನು ಮತ್ತೆ ಪಾರದರ್ಶಕವಾಗಿ ಮರು ಸರ್ವೆ ಮಾಡಿಸಿ. ಅದು ನಿಮ್ಮ ಕಾಲದಲ್ಲೇ ಮಾಡಿ ನೀವೇ ಕ್ರೆಡಿಟ್ ತೆಗೆದುಕೊಳ್ಳಿ. ಜಾರಿ ಮಾಡಿ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಮಾಡಬೇಡಿ. ಇಷ್ಟೆಲ್ಲಾ ಗೊಂದಲ ಇಟ್ಟುಕೊಂಡು ವರದಿ ಜಾರಿ ಮಾಡಿದರೆ ಜೇನುಗೂಡಿಗೆ ಕೈ ಹಾಕಿದ ಹಾಗೆ. ಇದರಿಂದ ಏನೂ ಪ್ರಪಂಚ ಮುಳುಗಿ ಹೋಗೋದಿಲ್ಲ ಎಂದರು.

ಸಿದ್ದರಾಮಯ್ಯ ಅರಿವು ಉಳ್ಳವರಾಗಿ ಗೊಂದಲದಲ್ಲಿರುವ  ವರದಿ ಜಾರಿ ಮಾಡುವುದು ಸರಿಯಲ್ಲ. ಒಂದೂವರೆ ವರ್ಷಗಳ ಕಾಲ ಸಮಯ ಕೊಟ್ಟು ಮತ್ತೊಮ್ಮೆ ಸರ್ವೆ ಮಾಡಿ. ಆವಾಗ ದೇವರಾಜ ಅರಸು ತರ ನಿಮ್ಮನ್ನು ನೆನಪು ಮಾಡಿಕೊಳ್ತಿವಿ. ಅದನ್ನು ಬಿಟ್ಟು ಇರೋ ವರದಿ ಜಾರಿ ಮಾಡಿ ಖಳನಾಯಕರಾಗಬೇಡಿ ಎಂದಿದ್ದಾರೆ.

ವರದಿಗೆ 10 ವರ್ಷ ಕಳೆದಿದೆ. ಕಾಂತರಾಜುನೇ ಸಹಿ ಹಾಕದೇ ಓಡಿ ಹೋಗಿದ್ದರು.

ನಾವು ಜಯಪ್ರಕಾಶ್ ಹೆಗಡೆನಾ ಕರತಂದ್ವಿ.  ಅವರು ಕೂಡ ಎಲ್ಲೋ ಒಂದು ಕಡೆ ಮಕ್ಕಿಕಾ ಮಕ್ಕಿ ಆದರು. ಇದರಲ್ಲಿ ಯಾರಿಗೆ ತೊಂದರೆ ಅನ್ನೋದಕ್ಕಿಂತ ಗೊಂದಲ ಸೃಷ್ಟಿಯಾಗಿದೆ. ಇನ್ನಷ್ಟು ಗೊಂದಲ ಮಾಡಿಕೊಳ್ಳಬೇಡಿ. ವರದಿ ತಿರಸ್ಕಾರ ಮಾಡಿ ಎಂದಿದ್ದಾರೆ.

Leave a Reply

Your email address will not be published. Required fields are marked *