ತುಮಕೂರು : ಇಂದು ಶ್ರೀ ಶಿವಕುಮಾರಸ್ವಾಮೀಜಿಯವರ 118 ಜನ್ಮದಿನದ ಅಂಗವಾಗಿ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇಲ್ಲಿಗೆ ಭೇಟಿ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ನೀಡುವಂತೆ ರಾಜನಾತ್ ಸಿಂಗ್ ಅವರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದರು.

ಭರತ ರತ್ನವನ್ನು ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಬೇಕು ಎಂದು 118 ನೇ ಶಿವಕುಮಾರಸ್ವಾಮೀಜಿಯವರ ಜನ್ಮದಿನಾಚಾರಣೆಯಲ್ಲಿ ರಾಜ್ಯದ ಜನತೆಯ, ಜಿಲ್ಲೆಯ ಜನತೆ ಶ್ರೀಗಳ ಭಕ್ತರ ಪರವಾಗಿ ಡಿಸಿಎಂ ಡಿಕೆಶಿ ಮನವಿಯನ್ನಿಟ್ಟರು.
ಲಕ್ಷಾಂತರ ಮುತ್ತು, ರತ್ನಗಳನ್ನು ಸೃಷ್ಟಿಸಿದ ಶ್ರೀಗಳ ಮಠವಿದು ಅಂತಹ ತ್ರಿವಿಧ ದಾಸೋಹಿಗಳಿಗೆ ಭರತ ರತ್ನವನ್ನು ನೀಡ ಬೇಕು ಎಂದರು.

ಮಠದ ಸುತ್ತಲು ಪ್ರಕೃತಿ ಇದೆ ಬಂಡೆಗಳಿAದ ಕೂಡಿದೆ ಅದನ್ನು ಕಡೆದರೆ ಆಕೃತಿ ಪೂಜಿಸಿದರೆ ಸಂಸ್ಕೃತಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.