ತುಮಕೂರು:- ನಟ ದುನಿಯಾ ವಿಜಯ್, ನಟಿ ರಚಿತಾ ರಾಮ್ ಅಭಿನಯದ ಚೌಡಯ್ಯ ಚಿತ್ರತಂಡದ ಕಾರನ್ನು ಚಿತ್ರೀಕರಣದ ವೇಳೆ ಆರ್ ಟಿಒ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಆರ್ ಟಿ ಒ ನಿಯಮ ಉಲ್ಲಂಘಿಸಿ ವಾಣಿಜ್ಯ ಉದ್ದೇಶಕ್ಕಾಗಿ ಸಾರಿಗೆಯೇತರ ವಾಹನ ಬಳಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಚಿತ್ರತಂಡದ ಕಾರನ್ನು ಜಪ್ತಿ ಮಾಡಿದ್ದಾರೆ.
ವಾಣಿಜ್ಯ ಉದ್ದೇಶಕ್ಕೆ ಬಳಸುವ ಯಲ್ಲೋ ಬೋರ್ಡ್ ಬದಲು ವೈಟ್ ಬೋರ್ಡ್ ಕಾರು ಬಳಕೆ ಮಾಡಿಕೊಂಡು ನಟ, ನಟಿಯರು, ಸಿಬ್ಬಂದಿಯನ್ನ ಪಿಕ್ ಅಪ್ , ಡ್ರಾಪ್ ಗೆ ವೈಟ್ ಬೋರ್ಡ್ ಕಾರನ್ನು ಬಳಕೆ ಮಾಡಲಾಗುತ್ತಿದ್ದ ಖಚಿತ ಮಾಹಿತಿ ಮೇರೆಗೆ ಆರ್ ಟಿ ಒ ಇನ್ಸ್ ಪೆಕ್ಟರ್ ಷರೀಫ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕಾರನ್ನು ಜಪ್ತಿ ಮಾಡಿದ್ದಾರೆ.
ಕರ್ನಾಟಕ ಟೂರಿಸ್ಟ್ ಡ್ರೈವರ್ಸ್ ಅಸೋಸಿಯೇಷನ್ ನೀಡಿದ್ದ ದೂರನ್ನ ಆಧರಿಸಿ ತುಮಕೂರಿನ ಕೈದಾಳದ ಶೂಟಿಂಗ್ ಸ್ಪಾಟ್ ಜಾಗದಿಂದಲೇ ಕೆಎ 04 ಎಂಎಸ್ 7938 ಸಂಖ್ಯೆಯ ಕಾರನ್ನು ಜಪ್ತಿ ಮಾಡಲಾಗಿದೆ. ಬೆಂಗಳೂರು ರಾಜರಾಜೇಶ್ವರಿ ನಗರದಿಂದ ಬಂದಿದ್ದ ಕಾರು ಇದಾಗಿದ್ದು, ಮಂಜೇಶ್ ಎಂಬುವವರಿಗೆ ಸೇರಿದ್ದಾಗಿದೆ.