ತುಮಕೂರು:- ಡಾ. ಜಿ ಪರಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಮುಂದುವರಿದ ಇಡಿ ದಾಳಿ ಮುಂದುವರೆದಿದೆ.

ಇಡಿ ಅಧಿಕಾರಿಗಳಿಗೆ ಮಹತ್ವದ ದಾಖಲೆಗಳು ಲಭ್ಯವಾಗಿವೆ. ಎಚ್ ಎಮ್ ಎಸ್ ಕಾಲೇಜು ಖರೀದಿ ಮಾಡಿದ್ದ ಪತ್ರವನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಾಜಿ ಶಾಸಕ ಶಫಿ ಅಹ್ಮದ್ ರ ಒಡೆತನದ ಎಚ್ ಎಮ್‌ಎಸ್ ಕಾಲೇಜನ್ನು 95 ಕೋಟಿರೂ ಗೆ ಖರಿಸಿದಿ ಎಂದು ಪತ್ರದಲ್ಲಿ ಉಲ್ಲೇಖವಾಗಿದೆ. ಅಸಲಿಗೆ 140 ಕೋಟಿ ರೂ. ಗೆ ಖರೀದಿ ಅಗಿರುವ ಶಂಕೆ ವ್ಯಕ್ತವಾಗಿದೆ.

ಜಿ ಪರಮೇಶ್ವರ ಎಚ್ ಎಮ್ ಎಸ್ ಕಾಲೇಜು ಖರೀದಿಗೆ ಕೊಟ್ಟ ಹಣ ಗೋಲ್ಡ್ ದಂಧೆಗೆ ವಿನಿಯೋಗ ಆಯ್ತಾ? ಎಂಬ ಅನುಮಾನ ವ್ಯಕ್ತವಾಗಿದೆ. ಮಾಜಿ ಶಾಸಕ ಶಫಿ ಅಹ್‌ಮದ್ ತಮ್ಮನ ಮಗ ಮಗಮಹಮ್ಮದ್ ಇಫಾಕ್ ದುಬೈನಲ್ಲಿ ಚಿನ್ನದ ವ್ಯಾಪಾರಿಯಾಗಿದ್ದು, ಆತನ ಮೂಲಕ ದುಡ್ಡು ಗೋಲ್ಡ್ ಸ್ಮಗ್ಲಿಂಗ್ ಗೆ ಹೋಯ್ತಾ..?ಎಂಬ ಅನುಮಾನ ಮೂಡಿದೆ. ಈ ಆ್ಯಂಗಲಲ್ಲಿ ಇಡಿ ಅಧಿಕಾರಿಗಳಿಂದ ತನಿಖೆ ಮುಂದುವರೆದಿದೆ.