ತುಮಕೂರು: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಅಳಿವಿನಂಚಿನಲ್ಲಿರುವ ಬೆಕ್ಕಿನ ಜಾತಿಗೆ ಸೇರಿರುವ ಅತ್ಯಂತ ಸಣ್ಣ ಬೆಕ್ಕು ರಷ್ಟಿ ಸ್ಪಾಟೆಡ್ ಕ್ಯಾಟ್(Rusty-spotted cat) ಎಂದು ಕರಿಯಲ್ಪಡುವ ಅತ್ಯಂತ ಸಣ್ಣ ಬೆಕ್ಕು ಕಾರ್ಖಾನೆಯಲ್ಲಿ ಕಂಡು ಬಂದಿದೆ.
ಅದನ್ನು ಅರಣ್ಯ ಇಲಾಖೆ ಮಾರ್ಗದರ್ಶನದೊಂದಿಗೆ ವಾರಂಗಲ್ ಫೌಂಡೇಶನ್ ತಂಡದ ವನ್ಯಜೀವಿ ಸಂರಕ್ಷಕ ದಿಲೀಪ್ ಕುಮಾರ್ ಅವರು ಸಂರಕ್ಷಣೆ ಮಾಡಿದ್ದು, ಈ ಬೆಕ್ಕು ಭಾರತ ಮತ್ತು ಶ್ರೀಲಂಕಾದಲ್ಲಿ ಮತ್ತು ನೇಪಾಳದಲ್ಲಿ ಅಳಿವಿನ ಅಂಚಿನಲ್ಲಿ ಕಂಡುಬರುವ ಬೆಕ್ಕಿನ ಜಾತಿಗಳಲ್ಲಿ ಒಂದು 2016ರಿಂದ ಐಯುಸಿಎನ್‌ನಿಂದ ಅಂತಾರಾಷ್ಟಿçÃಯ ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ಘೋಷಿಸಲ್ಪಟ್ಟಿದೆ.
ಇದರ ತೂಕ ಸರಿಸುಮಾರು 900 ಗ್ರಾಂ ನಿಂದ 1.6 ಕೆಜಿಯವರೆಗೂ ತೂಗಬಹುದು. ಸಾಮಾನ್ಯವಾಗಿ ಇವುಗಳು ಒಂದು ಅಥವಾ ಎರಡು ಮರಿಗಳನ್ನ ಹಾಕಬಹುದು. ಇವುಗಳ ಗರ್ಭಾವಧಿ ಸುಮಾರು 65 ರಿಂದ 70 ದಿನಗಳ ಕಾಲ.
ಇವುಗಳ ಆಯಸ್ಸು 10 ರಿಂದ 12 ವರ್ಷ ಇವುಗಳು ಸಾಮಾನ್ಯವಾಗಿ ಬೆಟ್ಟಗುಡ್ಡ ಹುಲ್ಲುಗಾವಲು ಪ್ರದೇಶ ಹಾಗೂ ಎಲೆ ಉದುರುವ ಕಾಡುಗಳಲ್ಲಿ ಸಾಮಾನ್ಯವಾಗಿ ಅಪರೂಪಕ್ಕೆ ಕಾಣುವ ಅತ್ಯಂತ ಚಿಕ್ಕ ಬೆಕ್ಕಾಗಿದೆ. ಇವುಗಳನ್ನು ನಾವು ಸಂರಕ್ಷಿಸಬೇಕಾಗಿದೆ. ಇನ್ನು ಇವುಗಳು ಬೆಕ್ಕಿನ ಜಾತಿಯಲ್ಲೇ ಅತ್ಯಂತ ಚಿಕ್ಕಬೆಕ್ಕು ಮತ್ತು ಹಗಲು ರಾತ್ರಿ ಎರಡು ವೇಳೆ ಓಡಾಡುವ ಪುಟ್ಟಬೆಕ್ಕು. ಅರಣ್ಯ ಇಲಾಖೆಯ ಮಾರ್ಗದರ್ಶನದಂತೆ ಇದನ್ನು ಪುನಃ ಅದರ ಆವಾಸ ಸ್ಥಾನಕ್ಕೆ ಸೇರಿಸಲಾಗಿದೆ.