ತುಮಕೂರು || ಫ್ರೀ… ಫ್ರೀ…ಮಹಿಳೆಯರಿಗೆ ಕೋಳಿಮರಿ ಫ್ರೀ..!

ತುಮಕೂರು || ಫ್ರೀ… ಫ್ರೀ…ಮಹಿಳೆಯರಿಗೆ ಕೋಳಿಮರಿ ಫ್ರೀ..!

ತುಮಕೂರು :  ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿಯು ಉಚಿತವಾಗಿ 5 ವಾರದ 20 ಕೋಳಿ ಮರಿಗಳನ್ನು ವಿತರಿಸಲು ಜಿಲ್ಲೆಯ  ಗ್ರಾಮೀಣ ಮಹಿಳಾ ಫಲಾನುಭವಿಗಳಿಂದು ಅರ್ಜಿ ಆಹ್ವಾನಿಸಿದೆ  ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕರು (ಆಡಳಿತ) ಡಾ: ಗಿರೀಶ್ ಬಾಬು ರೆಡ್ಡಿ ತಿಳಿಸಿದ್ದಾರೆ

ಕೋಳಿ ಮರಿ ಸೌಲಭ್ಯಕ್ಕಾಗಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ / ಸಾಮಾನ್ಯ ವರ್ಗದ ಗ್ರಾಮೀಣ ಮಹಿಳೆಯರು / ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರು/ ರೈತ ಉತ್ಪಾದಕ ಸಂಸ್ಥೆಯ ಮಹಿಳಾ ಹಾಗೂ ಕುಕ್ಕುಟ ಸಹಕಾರ ಸಂಘಗಳ ಮಹಿಳಾ ಸದಸ್ಯರು ಅರ್ಜಿ ಸಲ್ಲಿಸಬಹುದಾಗಿದೆ.

ನಿಗಧಿತ ಅರ್ಜಿ ನಮೂನೆಯನ್ನು ಆಯಾ ತಾಲ್ಲೂಕಿನ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ)ಗಳ ಕಚೇರಿಯಿಂದ ಪಡೆಯಬಹುದಾಗಿದೆ. ಆಸಕ್ತರು ಭರ್ತಿ ಮಾಡಿದ ಅರ್ಜಿಯೊಂದಿಗೆ ಬಿ.ಪಿ.ಎಲ್ ಕಾರ್ಡ್, ಭಾವಚಿತ್ರ ಸಹಿತದ ಗುರುತಿನ ಚೀಟಿ / ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಿ ಆಯಾ ತಾಲ್ಲೂಕಿನ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ)ಗಳ ಕಚೇರಿಗೆ ಡಿಸೆಂಬರ್ 24ರೊಳಗಾಗಿ ಸಲ್ಲಿಸಬೇಕು.

ಅರ್ಜಿಯನ್ನು ದ್ವಿಪ್ರತಿಯಲ್ಲಿ ಸಲ್ಲಿಸಬೇಕು. ಸಾಮಾನ್ಯ ಫಲಾನುಭವಿಗಳನ್ನು ಹೊರತು ಪಡಿಸಿ, ಮೀಸಲಾತಿ ಬಯಸುವವರು ಜಾತಿ ಪ್ರಮಾಣ ಪತ್ರ ಪ್ರತಿಯನ್ನು ಲಗತ್ತಿಸಬೇಕೆಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *